ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fawad Khan: ಪಾಕ್‌ ನಟಿಯರ ಬಳಿಕ ನಟರಿಗೂ ಶಾಕ್‌; ಫವಾದ್ ಖಾನ್, ಅತಿಫ್ ಅಸ್ಲಾಂ ಇನ್ಸ್ಟಾಗ್ರಾಂ ಖಾತೆಯೂ ಬ್ಯಾನ್‌

ಪಾಕಿಸ್ತಾನಿ ನಟ ಫವಾದ್ ಖಾನ್ ಮತ್ತು ಗಾಯಕ ಅತಿಫ್ ಅಸ್ಲಾಂ ಅವರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಭಾರತೀಯ ಬಳಕೆದಾರರಿಗೆ ನಿರ್ಬಂಧಿಸಲಾಗಿದೆ. ಈಗಾಗಲೇ ಪಾಕಿಸ್ತಾನದ ಹಲವು ನಟ ನಟಿಯರ ಇನ್ಸ್ಟಾಗ್ರಾಂ ಖಾತೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಮಹಿರಾ ಖಾನ್, ಹನಿಯಾ ಆಮಿರ್ (Hania Amir) ಮತ್ತು ಅಲಿ ಜಾಫರ್ ಸೇರಿದಂತೆ ಜನಪ್ರಿಯ ಪಾಕಿಸ್ತಾನಿ ಕಲಾವಿದರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಬುಧವಾರ ಸಂಜೆ ಭಾರತದಲ್ಲಿ ನಿರ್ಬಂಧಿಸಲಾಗಿದೆ.

ಫವಾದ್ ಖಾನ್, ಅತಿಫ್ ಅಸ್ಲಾಂ ಇನ್ಸ್ಟಾಗ್ರಾಂ ಖಾತೆಯೂ ಬ್ಯಾನ್‌

Profile Vishakha Bhat May 2, 2025 7:10 PM

ನವದೆಹಲಿ: ಪಹಲ್ಗಾಮ್‌ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದೆ. . ಉಗ್ರರ ದಾಳಿಯ ನಂತರ ಪಾಕಿಸ್ತಾನಿ ಪ್ರಜೆಗಳನ್ನು ಭಾರತ ಬಿಟ್ಟು ಸ್ವದೇಶಕ್ಕೆ ಮರಳುವಂತೆ ಆದೇಶಿಸಿದ್ದಂತ ಭಾರತವು, ಆ ಬಳಿಕ ಪಾಕಿಸ್ತಾನದ ಯ್ಯೂಟ್ಯೂಬ್ ಚಾನಲ್ ಗಳನ್ನು ನಿಷೇಧಿಸಿತ್ತು. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಯೂಟ್ಯೂಬ್ ಚಾಲನ್ ಸ್ಥಗಿತಗೊಳಿಸಿ ಆದೇಶಿಸಿದೆ. ಇದೀಗ ಪಾಕಿಸ್ತಾನಿ ನಟ ಫವಾದ್ ಖಾನ್ ಮತ್ತು ಗಾಯಕ ಅತಿಫ್ ಅಸ್ಲಾಂ ಅವರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಭಾರತೀಯ ಬಳಕೆದಾರರಿಗೆ ನಿರ್ಬಂಧಿಸಲಾಗಿದೆ.

ಇಬ್ಬರು ಪಾಕಿಸ್ತಾನಿ ಕಲಾವಿದರ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ "ಭಾರತದಲ್ಲಿ ಖಾತೆ ಲಭ್ಯವಿಲ್ಲ ಎಂದು ತೋರಿಸುತ್ತದೆ. 2014 ರಲ್ಲಿ "ಖೂಬ್ಸೂರತ್" ಚಿತ್ರದಲ್ಲಿ ಸೋನಮ್ ಕಪೂರ್ ಜೊತೆ ನಟಿಸುವ ಮೂಲಕ ಖಾನ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. "ಕಪೂರ್ & ಸನ್ಸ್" ಮತ್ತು "ಏ ದಿಲ್ ಹೈ ಮುಷ್ಕಿಲ್‌ನಲ್ಲಿ ನಟಿಸಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ತೂ ಜಾನೆ ನಾ, ತೇರಾ ಹೋನೆ ಲಗಾ ಹೂ (ಎರಡೂ ಅಜಬ್ ಪ್ರೇಮ್ ಕಿ ಗಜಬ್ ಕಹಾನಿ) ಮತ್ತು ಪೆಹ್ಲಿ ನಜರ್ ಮೇ (ರೇಸ್) ನಂತಹ ಜನಪ್ರಿಯ ಬಾಲಿವುಡ್ ಸಾಂಗ್‌ನ್ನು ಹಾಡಿರುವ ಅತೀಫ್‌ ಅಸ್ಲಾಂ ಅವರ ಖಾತೆಯೂ ಬ್ಯಾನ್‌ ಆಗಿದೆ. ಅವರು ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದಾರೆ.

ಈಗಾಗಲೇ ಪಾಕಿಸ್ತಾನದ ಹಲವು ನಟ ನಟಿಯರ ಇನ್ಸ್ಟಾಗ್ರಾಂ ಖಾತೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಮಹಿರಾ ಖಾನ್, ಹನಿಯಾ ಆಮಿರ್ (Hania Amir) ಮತ್ತು ಅಲಿ ಜಾಫರ್ ಸೇರಿದಂತೆ ಜನಪ್ರಿಯ ಪಾಕಿಸ್ತಾನಿ ಕಲಾವಿದರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಬುಧವಾರ ಸಂಜೆ ಭಾರತದಲ್ಲಿ ನಿರ್ಬಂಧಿಸಲಾಗಿದೆ. ಕಿಸ್ತಾನಿ ಡ್ರಾಮಾಗಳಾದ "ಮೇರೆ ಹಮ್ಸಫರ್" ಮತ್ತು "ಕಭಿ ಮೇ ಕಭಿ ತುಮ್" ಗಳಿಂದ ಭಾರತೀಯ ಅಭಿಮಾನಿಗಳಲ್ಲಿ ಜನಪ್ರಿಯರಾಗಿರುವ ನಟಿ ಹಾನಿಯಾ ಅಮಿರ್‌ ಪಹಲ್ಗಾಮ್ ದಾಳಿಯ ಬಗ್ಗೆ ಪ್ರತಿಕ್ರಿಯಿಸಿ, ಇಂತಹ ಘಟನೆಗಳು ಎಲ್ಲಿ ನಡೆದರೂ ಅದು ದುರಂತವೇ ಎಂದು ಹೇಳಿದ್ದರು. ದಿಲ್ಜಿತ್‌ ದೋಸಾಂಜಾ ಅವರ ಮುಂದಿನ ಹಾಡಿನಲ್ಲಿ ಹಾನಿಯಾ ಕಾಣಿಸಿಕೊಳ್ಳುವವರಿದ್ದರು. ಆದರೆ ದಾಳಿ ಬಳಿಕ ಅವರನ್ನು ಕೈ ಬಿಡಲಾಗಿದೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್‌ ಉಗ್ರರ ದಾಳಿ; ಮೃತಪಟ್ಟ ಮುಸ್ಲಿಂ ಯುವಕನ ಸಹೋದರನಿಗೆ ವಕ್ಫ್ ಮಂಡಳಿಯಿಂದ ಉದ್ಯೋಗ ಘೋಷಣೆ

ಮತ್ತೊಬ್ಬ ಪಾಕಿಸ್ತಾನಿ ಜನಪ್ರಿಯ ನಟಿ ಮಹಿರಾ ಖಾನ್ ಶಾರುಕ್‌ ಖಾನ್‌ ಅವರ ಜೊತೆ ಬಣ್ಣ ಹಚ್ಚಿದ್ದರು. ಓ ಝಾಲಿಮಾ ಹಾಡಿನಲ್ಲಿ ಮಹಿರಾ ಭಾರತೀಯ ಮನ ಗೆದ್ದಿದ್ದರು. ಇದೀಗ ಅವರ ಇನಸ್ಟಾಗ್ರಾಂ ಖಾತೆ ಕೂಡ ಭಾರತದಲ್ಲಿ ಬ್ಯಾನ್‌ ಆಗಿದೆ.