ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam attack: ಭಾರತದಲ್ಲಿ ಪಾಕ್‌ ಕ್ರಿಕೆಟಿಗರ ಇನ್‌ಸ್ಟಾಗ್ರಾಮ್‌ ಖಾತೆಗೆ ನಿರ್ಬಂಧ

ಕೇಂದ್ರ ಸರ್ಕಾರವು ಒಟ್ಟಾರೆಯಾಗಿ 63 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿದೆ. ಇವುಗಳಲ್ಲಿ ಡಾನ್, ಜಿಯೋ ನ್ಯೂಸ್, ಬೋಲ್ ನ್ಯೂಸ್ ಮತ್ತು ಸಮಾ ಟಿವಿಯಂತಹ ಮಾಧ್ಯಮಗಳು, ಪತ್ರಕರ್ತೆ ಅಸ್ಮಾ ಶಿರಾಜಿ ಮತ್ತು ಡಿಜಿಟಲ್ ಶೋ 'ದಿ ಪಾಕಿಸ್ತಾನ್ ಎಕ್ಸ್‌ಪೀರಿಯೆನ್ಸ್' ನಂತಹ ಜನಪ್ರಿಯ ಚಾನೆಲ್‌ಗಳು ಸೇರಿವೆ.

ಭಾರತದಲ್ಲಿ ಪಾಕ್‌ ಕ್ರಿಕೆಟಿಗರ ಇನ್‌ಸ್ಟಾಗ್ರಾಮ್‌ ಖಾತೆಗೆ ನಿರ್ಬಂಧ

Profile Abhilash BC May 2, 2025 5:38 PM

ನವದೆಹಲಿ: ಪಹಲ್ಗಾಮ್‌(Pahalgam attack) ದಾಳಿಗೆ ಸಂಬಂಧಿಸಿದಂತೆ ಉಗ್ರರ ವಿರುದ್ಧ ಭಾರತ ಪ್ರತೀಕಾರ ತೀರಿಸಿಕೊಳ್ಳಲೇಬೇಕು ಎಂಬ ಕೂಗು ದೇಶಾದ್ಯಂತ ಹೆಚ್ಚಾಗಿರುವಂತೆಯೇ ಭಾರತದಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡದ ಬಾಬರ್ ಅಜಮ್(Babar Azam), ಶಾಹೀನ್ ಶಾ ಅಫ್ರಿದಿ, ಮೊಹಮ್ಮದ್ ರಿಜ್ವಾನ್(Mohammad Rizwan) ಸೇರಿ ಎಲ್ಲ ಕ್ರಿಕೆಟಿಗರ ಇನ್‌ಸ್ಟಾಗ್ರಾಮ್ ಖಾತೆಗಳನ್ನು(Instagram accounts) ನಿರ್ಬಂಧಿಸಲಾಗಿದೆ. ಇದಕ್ಕೂ ಮೊದಲು, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಅರ್ಷದ್ ನದೀಮ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಸಹ ನಿರ್ಬಂಧಿಸಲಾಗಿತ್ತು.

ಬಾಬರ್, ಶಾಹೀನ್ ಮತ್ತು ರಿಜ್ವಾನ್ ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) 2025 ರಲ್ಲಿ ಆಡುತ್ತಿದ್ದಾರೆ. 2023 ರಲ್ಲಿ ಪಾಕಿಸ್ತಾನ ಕ್ರಿಕೆಟಿಗರು ಏಕದಿನ ವಿಶ್ವಕಪ್‌ಗಾಗಿ ಭಾರತಕ್ಕೆ ಬಂದಿದ್ದರು.

ಶೋಯೆಬ್ ಅಖ್ತರ್, ಬಸಿತ್ ಅಲಿ ಮತ್ತು ಶಾಹಿದ್ ಅಫ್ರಿದಿ ಸೇರಿದಂತೆ ಪಾಕಿಸ್ತಾನದ ಜನಪ್ರಿಯ ಕ್ರಿಕೆಟಿಗರ ಯೂಟ್ಯೂಬ್ ಚಾನೆಲ್‌ಗಳನ್ನು ಭಾರತದಲ್ಲಿ ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಷಯ, ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿ ಮತ್ತು ಭಾರತ ಹಾಗೂ ಸೇನೆಯ ವಿರುದ್ಧ ತಪ್ಪು ಮಾಹಿತಿ ಪ್ರಸಾರ ಮಾಡಿದ್ದಕ್ಕಾಗಿ ನಿರ್ಬಂಧಿಸಲಾಗಿದೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಯೂಟ್ಯೂಬ್ ಚಾಲನ್ ಸ್ಥಗಿತಗೊಳಿಸಿ ಆದೇಶಿಸಿದೆ.

ಕೇಂದ್ರ ಸರ್ಕಾರವು ಒಟ್ಟಾರೆಯಾಗಿ 63 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿದೆ. ಇವುಗಳಲ್ಲಿ ಡಾನ್, ಜಿಯೋ ನ್ಯೂಸ್, ಬೋಲ್ ನ್ಯೂಸ್ ಮತ್ತು ಸಮಾ ಟಿವಿಯಂತಹ ಮಾಧ್ಯಮಗಳು, ಪತ್ರಕರ್ತೆ ಅಸ್ಮಾ ಶಿರಾಜಿ ಮತ್ತು ಡಿಜಿಟಲ್ ಶೋ 'ದಿ ಪಾಕಿಸ್ತಾನ್ ಎಕ್ಸ್‌ಪೀರಿಯೆನ್ಸ್' ನಂತಹ ಜನಪ್ರಿಯ ಚಾನೆಲ್‌ಗಳು ಸೇರಿವೆ.

ಇದನ್ನೂ ಓದಿ IPL 2025: ನಾಳೆ ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಸಂಚಾರ ನಿಷೇಧ

ಉಗ್ರರ ದಾಳಿಗೆ ಪ್ರತೀಕಾರವಾಗಿ ಈಗಾಗಲೇ ಭಾರತ ಸಿಂಧು ನದಿ ಒಪ್ಪಂದವನ್ನು ಅಮಾನತು ಮಾಡಿದ್ದು, ಅಟ್ಟಾರಿ ಗಡಿ ಬಂದ್‌, ರಾಯಭಾರಿಗಳ ಸಂಖ್ಯೆ ಕಡಿತ ಸೇರಿದಂತೆ ಹಲವು ಕಠಿನ ನಿರ್ಧಾರಗಳನ್ನು ತೆಗೆದುಕೊಂಡಿದೆ. ಗಡಿಭಾಗದಲ್ಲಿ ತೀವ್ರ ಸೇನಾ ಚಟುವಟಿಕೆಗಳು ನಡೆಯುತ್ತಿದ್ದು, ಪಾಕಿಸ್ತಾನ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುವ ಮೂಲಕ ಪ್ರಚೋದಿಸುತ್ತಿದ್ದು, ಭಾರತ ತಕ್ಕ ಉತ್ತರ ನೀಡುತ್ತಿದೆ. ಭಾರತ ಮತ್ತು ಪಾಕ್‌ ಸೇನೆ ಹೈಅಲರ್ಟ್‌ ಆಗಿದ್ದು, ಯಾವುದೇ ಸಂದರ್ಭದಲ್ಲೂ ಯುದ್ಧ ಆರಂಭಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.