WAVES 2025: ಮುಂಬೈನ ವೇವ್ಸ್ ಕಾರ್ಯಕ್ರಮದಲ್ಲಿ ನಟಿಯರ ಸೀರೆ ಲುಕ್!ಇಲ್ಲಿವೆ ಫೋಟೋಸ್
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜನೆಯಾಗಿರುವ ವೇವ್ಸ್ ಶೃಂಗಸಭೆ ನಾಲ್ಕು ದಿನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್, ಟಾಲಿವುಡ್, ಸೇರಿದಂತೆ ಅನೇಕ ಚಿತ್ರತಾರೆಯರು ಭಾಗವಹಿಸಿದ್ದರು. ಆಲಿಯಾ ಭಟ್, ಶೋಭಿತಾ ಧುಲಿಪಾಲ, ವಾಣಿ ಕಪೂರ್ ಮತ್ತು ಇತರ ನಟಿಯರು ಸುಂದರ ಸೀರೆಗಳಲ್ಲಿ ಮಿಂಚಿದ್ದು ಇವರ ಬ್ಯುಟಿಫುಲ್ ಲುಕ್ನ ಫೋಟೋಗಳು ಇಲ್ಲಿವೆ.



ಭಾರತದ ಮಾಧ್ಯಮ ಮತ್ತು ಮನರಂಜನಾ ಉದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ 'ವೇವ್ಸ್ 2025' ಸಮ್ಮೇಳನ ವನ್ನು ಆಯೋಜನೆ ಮಾಡಲಾಗಿದೆ.ಈ ನಾಲ್ಕು ದಿನಗಳ ಕಾರ್ಯಕ್ರಮವನ್ನು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಸಲಾಗುತ್ತಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ಅದ್ದೂರಿಯಾಗಿ ಉದ್ಘಾಟಿಸಿದರು. ಮನರಂಜನಾ ಕ್ಷೇತ್ರದ ಹಲವು ನಟ ನಟಿಯರು ಭಾಗಿಯಾಗಿದ್ದು ಆಲಿಯಾ ಭಟ್ ಕೂಡ WAVES 2025 ರ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ತಿಳಿ ಗುಲಾಬಿ ಹಾಗೂ ಗೋಲ್ಡ್ ಕಲರ್ ಸೀರೆಯಲ್ಲಿ ಕೈಯಿಂದ ನೇಯ್ದ ಪೈಥಾನಿ ಸೀರೆಯಲ್ಲಿ ಬಹಳ ಮುದ್ದಾಗಿ ಕಾಣಿಸಿ ಕೊಂಡಿದ್ದಾರೆ.

WAVES 2025 ಕಾರ್ಯಕ್ರಮಕ್ಕೆ ವಾಣಿ ಕಪೂರ್ ಕೂಡ ಆಗಮಿಸಿದ್ದಾರೆ. ಸುಂದರವಾದ ಕೆಂಪು ಟಿಶ್ಯೂ ಸೀರೆಯಲ್ಲಿ ನಟಿ ಅದ್ಬುತ ವಾಗಿ ಕಾಣಿಸಿದ್ದಾರೆ. ಇವರ ಲುಕ್ ಗೆ ಫರ್ಪೆಕ್ಟ್ ಕಾಣುವಂತೆ ಈ ಸೀರೆ ಸಾಫ್ಟ್ ಲುಕ್ ನೀಡಿದೆ..

ಭೂಮಿ ಪೆಡ್ನೇಕರ್ ಬೀಜ್- ಗೋಲ್ಡ್ ರೇಷ್ಮೆ ಸೀರೆಯಲ್ಲಿ ಅದ್ಭುತವಾಗಿ ಕಂಗೊಳಿಸಿದ್ದಾರೆ. ಅದೇ ಬಣ್ಣದ ಸ್ಲೀವ್ ಲೆಸ್ ಬ್ಲೌಸ್ ಇವರಿಗೆ ಟ್ರೆಂಡಿ ಲುಕ್ ನೀಡಿದೆ. ನಟಿಯ ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಶೋಭಿತಾ ಧೂಲಿಪಾಲ ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿದ್ದಾರೆ. ಈ ಸೀರೆಯಲ್ಲಿ ನಟಿ ರಾಜಮನೆತನದ ರಾಣೆಯಂತೆ ಕಾಣುತ್ತಿದ್ದರು. ಸುಂದರವಾದ ಇಮಿಟೇಶನ್ ಜ್ಯುವೆಲರಿ ಅವರ ಸೀರೆಯ ಲುಕ್ ಅನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.

ರಾಶಿ ಖನ್ನಾ ಲೈಟ್ ಪಿಂಕ್ ಸೀರೆಯಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ.ಸಿಂಪಲ್ ಸ್ಯಾರಿ ಅದಕ್ಕೆ ಹೊಂದಿಕೊಳ್ಳುವಂತೆ ಡೀಪ್ ನೆಕ್ ಇರುವ ಬ್ಲೌಸ್ ಧರಿಸಿದ್ದಾರೆ.

WAVES 2025 ರಲ್ಲಿ ನಿಮ್ರತ್ ಕೌರ್ ನೇರಳೆ ರೇಷ್ಮೆ ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರು.ಅದಕ್ಕೆ ಮ್ಯಾಚ್ ಆಗುವಂತೆ ಕಿವಿಯೋಲೆ ಧರಿಸಿದ್ದು ಹೇರ್ ಫ್ರೀ ಬಿಟ್ಟಿದ್ದಾರೆ. ನಟಿಯ ಈ ಲುಕ್ ಅಭಿಮಾನಿಗಳ ಗಮನ ಸೆಳೆಯುವಂತೆ ಮಾಡಿದೆ.

ಈಶಾ ಗುಪ್ತಾ ಫುಲ್ ಬ್ಲೇಜರ್ನೊಂದಿಗೆ ಲೈಟ್ ಪಿಂಕ್ ಬಣ್ಣದ ಓಂಬ್ರೆ ಸೀರೆಯಲ್ಲಿ ಡಿಫರೆಂಟ್ ಲುಕ್ನಲ್ಲಿ ಕಂಗೊಳಿಸಿದ್ದಾರೆ. WAVES 2025 ಕ್ಕೆ ಇವರ ಲುಕ್ ಫರ್ಪೆಕ್ಟ್ ಎಂಬಂತೆ ಇತ್ತು.

WAVES 2025 ರಲ್ಲಿ ಶ್ರೀಲೀಲಾ ಗೊಲ್ಡ್ ಬಣ್ಣದ ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ಹಾಫ್ ಸ್ಲೀವ್ ಬ್ಲೌಸ್ ನಲ್ಲಿ ಶ್ರೀಲೀಲಾ ಮನಮೋಹಕ ನಗೆ ಬೀರುತ್ತಿರುವುದು ಅದ್ಭುತವಾಗಿದೆ.

WAVES 2025 ರಲ್ಲಿ ಅಮೃತಾ ಖಾನ್ವಿಲ್ಕರ್ ಹಸಿರು ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರು.ಇವರ ಸ್ಟೈಲೀಶ್ ಲುಕ್ ಮತ್ತು ಸಿಂಪಲ್ ಮೇಕಪ್ನಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ.

WAVES 2025 ರಲ್ಲಿ ಮಾನುಷಿ ಚಿಲ್ಲರ್ ಬ್ರೈಟ್ ಗುಲಾಬಿ ಬಣ್ಣದ ಸೀರೆಯಲ್ಲಿ ಸುಂದರವಾಗಿ ಕಂಡಿದ್ದಾರೆ. ಸ್ಯಾರಿಯಲ್ಲಿ ಎಂಬ್ರಾಯ್ಡರಿ ಗೋಲ್ಡ್ ಡಿಸೈನ್ ಸಖತ್ತಾಗಿ ಸೂಟ್ ಆಗಿದೆ. ಸಿಂಪಲ್ ಸ್ಯಾರಿಯಲ್ಲಿ ಹೇಗೆ ಸೂಪರ್ ಆಗಿ ಕಾಣಿಸುವುದು ಎಂಬುದನ್ನು ಮಾನುಷಿ ತೋರಿಸಿದ್ದಾರೆ.