ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಂತಾನೋತ್ಪತ್ತಿ ಸಮಸ್ಯೆ ಬಾರದಂತೆ ಮಾಡಲು ಪ್ರಾಯೋಗಿಕ ಮಾರ್ಗವೆಂದರೆ ಅಂಡಾಣು ಸಂರಕ್ಷಣಾ ವಿಧಾನ

ಅಂಡಾಶಯದಿಂದ ಪ್ರತಿ ತಿಂಗಳು ಫಲಿತಗೊಳ್ಳದೇ ಹೊರ ಬರುವ ಅಂಡಾಣುಗಳನ್ನು ವೈದ್ಯಕೀಯ ಪ್ರಕ್ರಿಯೆ ಮೂಲಕ ಸಂರಕ್ಷಿಸುವ ಆಯ್ಕೆಯೊಂದು ಸದಾ ಇದೆ. ಇತ್ತೀಚಿನ ದಿನಗಳಲ್ಲಿ ವೃತ್ತಿಗಾಗಿ ಬದುಕನ್ನು ಮುಡಿಪಾಗಿಟ್ಟು, ಮದುವೆ, ಮಕ್ಕಳು ಮಾಡಿಕೊಳ್ಳುವುದರಿಂದ ತುಸು ದೂರ ಉಳಿ ಯುವ ಹೆಣ್ಣುಮಕ್ಕಳಿಗೆ ಈ ವಿಧಾನ ದೊಡ್ಡ ವರದಾನವಾಗಿದೆ. ಇದನ್ನು ಅಂಡಾಣು ಕ್ರಯೋಪ್ರೆ ಸರ್ವೇಷನ್‌ ಎಂದೂ ಕರೆಯಲಾಗುತ್ತದೆ.

ಅಲ್ಟ್ರಾಸೊನೋಗ್ರಾಫಿಕ್‌ ಚಿಕಿತ್ಸೆ ಮೂಲಕ ಅಂಡಾಣುಗಳ ಸಂರಕ್ಷಣೆ

Profile Ashok Nayak Apr 30, 2025 11:29 AM

ಅಂಡಾಶಯದಿಂದ ಪ್ರತಿ ತಿಂಗಳು ಫಲಿತಗೊಳ್ಳದೇ ಹೊರ ಬರುವ ಅಂಡಾಣುಗಳನ್ನು ವೈದ್ಯಕೀಯ ಪ್ರಕ್ರಿಯೆ ಮೂಲಕ ಸಂರಕ್ಷಿಸುವ ಆಯ್ಕೆಯೊಂದು ಸದಾ ಇದೆ. ಇತ್ತೀಚಿನ ದಿನಗಳಲ್ಲಿ ವೃತ್ತಿಗಾಗಿ ಬದುಕನ್ನು ಮುಡಿಪಾಗಿಟ್ಟು, ಮದುವೆ, ಮಕ್ಕಳು ಮಾಡಿಕೊಳ್ಳುವುದರಿಂದ ತುಸು ದೂರ ಉಳಿ ಯುವ ಹೆಣ್ಣುಮಕ್ಕಳಿಗೆ ಈ ವಿಧಾನ ದೊಡ್ಡ ವರದಾನವಾಗಿದೆ. ಇದನ್ನು ಅಂಡಾಣು ಕ್ರಯೋಪ್ರೆ ಸರ್ವೇಷನ್‌ ಎಂದೂ ಕರೆಯಲಾಗುತ್ತದೆ.

ಆಧುನಿಕ ಬದುಕಿನಲ್ಲಿ ವೃತ್ತಿಯ ಒತ್ತಡ ಹಾಗೂ ದೈಹಿಕ ಅನಾರೋಗ್ಯದ ನಡುವೆ ಬದುಕುತ್ತಿರುವ ಹೆಣ್ಣುಮಕ್ಕಳಿಗೆ ಸಂತಾನೋತ್ಪತ್ತಿಯ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಅಂಡಾಣು ಸಂರಕ್ಷಣೆ ಉತ್ತಮ ಮಾರ್ಗವಾಗಿದೆ. ಔಷಧಿಗಳನ್ನು ಸೂಕ್ತ ರೀತಿಯಲ್ಲಿ ನೀಡಿ ಅಂಡಾಣುಗಳನ್ನು ಬಿಡುಗಡೆ ಮಾಡುವಂತೆ ಅಂಡಾಶಯಗಳಿಗೆ ಉತ್ತೇಜನ ನೀಡಲಾಗುತ್ತದೆ.ನಂತರ ಅಂಡಾಣುಗಳನ್ನು ಹೊರ ತೆಗೆದು ಅದನ್ನು ಫಲಿತಗೊಳಿಸಲು ಸಂರಕ್ಷಿಸಲಾಗುತ್ತದೆ. ಗರ್ಭಾಶಯದಲ್ಲಿ ಇರಿಸುವ ಮೊದಲೇ ಇಂಟ್ರಾಸೈಟೋಪ್ಲಾಸ್ಮಿಕ್‌ ವೀರ್ಯ ಇಂಜೆಕ್ಷನ್‌ ಮೂಲಕ ಅಂಡಾಣುಗಳನ್ನು ಫಲಿತಗೊಳಿಸ ಬಹುದು. ಒಂದು ವಯಸ್ಸಿನವರೆಗೆ ಆರೋಗ್ಯಕರ ಅಂಡಾಣುಗಳು ಉತ್ಪತ್ತಿಯಾಗುವುದರಿಂದ ಆ ವಯೋಮಿತಿಯಲ್ಲಿಯೇ ಈ ಚಿಕಿತ್ಸೆಗೆ ಒಳಗಾಗುವುದು ಮುಖ್ಯವಾಗುತ್ತದೆ.

ಇದನ್ನೂ ಓದಿ: Health Tips: ಕಲ್ಲಂಗಡಿಯೆಂಬ ರಸಭರಿತ ಹಣ್ಣಿನ ಸತ್ವಗಳು ಗೊತ್ತೇ?

ಸಂರಕ್ಷಿಸುವ ವಿಧಾನ ಹೇಗೆ?

ಅಲ್ಟ್ರಾಸೊನೋಗ್ರಾಫಿಕ್‌ ಚಿಕಿತ್ಸೆಯ ಮೂಲಕ ಅಂಡಾಣುಗಳನ್ನು ಸಂರಕ್ಷಿಸಲಾಗುತ್ತದೆ. ಈ ಪ್ರಕ್ರಿಯೆ ಮೂರು ವಾರಗಳ ಕಾಲ ತೆಗೆದುಕೊಳ್ಳುತ್ತದೆ. ಒಮ್ಮೆ ತೆಗೆದ ಅಂಡಾಣುಗಳನ್ನು ವರ್ಷಗಳ ಕಾಲ ಸಂರಕ್ಷಿಸಿಡಬಹುದು.

ಆಧುನಿಕ ಜೀವನಶೈಲಿಯಿಂದಾಗಿ ಮಹಿಳೆಯರಲ್ಲಿ ಈಚೆಗೆ ಪಿಸಿಒಡಿ ಮತ್ತು ಪಿಸಿಒಎಸ್‌ನಂಥ ಸಮಸ್ಯೆಗಳು ಸಾಮಾನ್ಯವಾಗಿವೆ. ಇಂಥ ಸಮಸ್ಯೆಗಳನ್ನು ಎದುರಿಸುತ್ತಿರುವ ಶೇ 75ಕ್ಕಿಂತ ಹೆಚ್ಚು ಮಹಿಳೆಯರು ಸೂಕ್ತ ರೀತಿಯಲ್ಲಿ ಗರ್ಭ ಧರಿಸಲು ಸಾಧ್ಯವಾಗುವುದಿಲ್ಲ ಎನ್ನುತ್ತದೆ ಸಂಶೋಧನೆ. ಭವಿಷ್ಯದಲ್ಲಿ ಸಂತಾನೋತ್ಪತ್ತಿ ಸಮಸ್ಯೆ ಬಾರದಂತೆ ಮಾಡಲು ಪ್ರಾಯೋಗಿಕ ಮಾರ್ಗವೆಂದರೆ ಅಂಡಾಣು ಸಂರಕ್ಷಣಾ ವಿಧಾನ. ವಯಸ್ಸಾದಂತೆ ಫಲವತ್ತತೆ ಕಡಿಮೆಯಾಗುವುದರಿಂದ ಗುಣಮಟ್ಟದ ಅಂಡಾಣುಗಳನ್ನು 35ರಿಂದ 40 ವಯೋಮಿತಿಯಲ್ಲಿರುವ ಮಹಿಳೆಯರು ಸರಂಕ್ಷಿಸಿ ಇಡಬಹುದು.

ಅಂಡಾಣುಗಳನ್ನು ಸಂಗ್ರಹಿಸಿ, ಸಂರಕ್ಷಿಸುವ (ಫ್ರೀಜಿಂಗ್‌) ಪ್ರಕ್ರಿಯೆಯಲ್ಲಿ ಹಲವು ಹಂತಗಳಿವೆ. ಮೊದಲಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು. ಈ ಸಂದರ್ಭದಲ್ಲಿ ಮಹಿಳೆಯ ಸಂಪೂರ್ಣ ವೈದ್ಯಕೀಯ ಇತಿಹಾಸವನ್ನು ಪಡೆಯಲಾಗುತ್ತದೆ. ಅಲ್ಟ್ರಾಸೌಂಂಡ್‌ ಸ್ಕ್ಯಾನ್‌ ಮೂಲಕ ಅಂಡಾ ಶಯ ಮತ್ತು ಅದರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ.

ಅಂಡಾಶಯದ ಕೋಶಕಗಳನ್ನು ಉತ್ತೇಜಿಸುವ ಲ್ಯುಟೈನೈಜಿಂಗ್‌ ಹಾರ್ಮೋನ್‌ಗಳ ಚುಚ್ಚು ಮದ್ದನ್ನು ಹತ್ತರಿಂದ ಹನ್ನೆರಡು ದಿನಗಳವರೆಗೆ ಅಂಡಾಶಯಗಳಿಗೆ ಚುಚ್ಚಲಾಗುತ್ತದೆ. ನಿಯಮಿತ ವಾಗಿ ರಕ್ತಪರೀಕ್ಷೆ ಮತ್ತು ಸ್ಕ್ಯಾನ್‌ನಿಂದ ಮೇಲ್ವಿಚಾರಣೆ ನಡೆಸಲಾಗುತ್ತದೆ. ಈ ಸಮಯದಲ್ಲಿ ಆದಷ್ಟು ಕಠಿಣ ವ್ಯಾಯಾಮದಿಂದ ದೂರವಿರಲು ಸಲಹೆ ನೀಡಲಾಗುತ್ತದೆ.

ಟ್ರಾನ್ಸ್‌ವಾಜಿನಲ್‌ ಅಲ್ಟ್ರಾಸೌಂಡ್‌ನಿಂದ ನೆರವಿನಿಂದ ಅರಿವಳಿಕೆ ಮದ್ದುನೀಡಿ, ಅಂಡಾಣುಗಳನ್ನು ಪಡೆಯಲಾಗುತ್ತದೆ. ನಂತರ ಇವುಗಳನ್ನು ವಿಟ್ರಿಫಿಕೇಷನ್‌ ಮೂಲಕ ಕ್ರಯೋಪ್ರಿಸರ್ವ್‌ ಮಾಡಲಾ ಗುತ್ತದೆ. ದೀರ್ಘಕಾಲದವರೆಗೆ ಅಂಡಾಣುಗಳನ್ನು ಸರಂಕ್ಷಿಸಬಹುದು. ಈ ಸಂದರ್ಭದಲ್ಲಿ ಚಿಕಿತ್ಸೆಗೆ ಒಳಗಾಗುವ ಮಹಿಳೆಯರಲ್ಲಿ ಹೊಟ್ಟೆ ಉಬ್ಬರಿಸುವುದು, ಸ್ತನಗಳಲ್ಲಿ ಮೃದುತ್ವ, ಸೆಳೆತ ಅಥವಾ ಸ್ವಲ್ಪ ರಕ್ತಸ್ರಾವದಂಥ ಸಾಧಾರಣ ಅಡ್ಡ ಪರಿಣಾಮಗಳು ಉಂಟಾಗಬಹುದು. 35ರ ಒಳಗೆ ಅಂಡಾ ಣುಗಳನ್ನು ಸಂಗ್ರಹಿಸುವ ಆಯ್ಕೆಗೆ ಒತ್ತು ನೀಡಿದರೆ ಸಂತಾನೋತ್ಪತ್ತಿ ಗರ್ಭಧಾರಣೆಯ ಸಾಧ್ಯತೆ ಹೆಚ್ಚಿರುತ್ತದೆ.

ಡಾ.ಸಂಧ್ಯಾ ಮಿಶ್ರಾ

ಸ್ತ್ರೀರೋಗತಜ್ಞೆ, ಮಿಲನ ಫರ್ಟಿಲಿಟಿ ಸೆಂಟರ್‌