ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Theft case: 40 ಸಾವಿರ ಮೌಲ್ಯದ ಧಾನ್ಯ ಕಳ್ಳತನ; ಐವರು ಆರೋಪಿಗಳು ಅರೆಸ್ಟ್

Theft case: ಹಾವೇರಿ ಜಿಲ್ಲೆಯ ತವರ‌ಮಳ್ಳಿಹಳ್ಳಿಯ ರೈತ ಶಂಕ್ರಪ್ಪ ದೊಡ್ಡಮನಿ ಅವರು ದಾಸ್ತಾನು ಮಾಡಿದ್ದ40 ಸಾವಿರ ಮೌಲ್ಯದ ಧಾನ್ಯ ಕಳವಾಗಿತ್ತು. ಈ ಬಗ್ಗೆ ಶಂಕ್ರಪ್ಪ ಸವಣೂರು ಠಾಣೆಗೆ ದೂರು ನೀಡಿದ್ದರು. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿ, ಧಾನ್ಯ ವಶಕ್ಕೆ ಪಡೆದಿದ್ದಾರೆ.

40 ಸಾವಿರ ಮೌಲ್ಯದ ಧಾನ್ಯ ಕಳ್ಳತನ; ಐವರು ಆರೋಪಿಗಳು ಅರೆಸ್ಟ್

Profile Prabhakara R Mar 16, 2025 9:27 PM

ಹಾವೇರಿ: ಜಿಲ್ಲೆಯ ಸವಣೂರ ತಾಲೂಕಿನಲ್ಲಿ ರೈತರೊಬ್ಬರ 40 ಸಾವಿರ ರೂ. ಮೌಲ್ಯದ ಧಾನ್ಯ ಕಳ್ಳತನ (Theft case) ಮಾಡಿದ್ದ ಐವರು ಆರೋಪಿಗಳನ್ನು ಸವಣೂರು ಪೊಲೀಸರು ಬಂಧಿಸಿ, ದವಸ-ಧಾನ್ಯವನ್ನು ವಶಕ್ಕೆ ಪಡೆದಿದ್ದಾರೆ. ಮಾರ್ಚ್ 8ರಂದು ಸವಣೂರು ತಾಲೂಕಿನ ತವರ‌ಮಳ್ಳಿಯ ರೈತ ಶಂಕ್ರಪ್ಪ ದೊಡ್ಡಮನಿ ಎಂಬುವರಿಗೆ ಸೇರಿದ ಧಾನ್ಯ ಕಳ್ಳತನವಾಗಿತ್ತು. ಹೀಗಾಗಿ ರೈತ ಸವಣೂರು ಠಾಣೆಗೆ ದೂರು ನೀಡಿದ್ದರು. ಇದೀಗ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಅವರಿಂದ ಆಹಾರ ಧಾನ್ಯ ವಶಕ್ಕೆ ಪಡೆದಿದ್ದಾರೆ.

ಶಿಗ್ಗಾಂವಿಯ ದುರ್ಗಪ್ಪ ಕೊರವರ, ಗಂಗಾಧರ ಕುಕನೂರ, ಮಹಂತೇಶ ಗದಗ, ಹುಬ್ಬಳ್ಳಿಯ ಅಮೀತ್ ಗೋಸಾವಿ, ಅಭಿಷೇಕ್ ನರೇಗಲ್‌ ಬಂಧಿತರ ಆರೋಪಿಗಳು. ಬಂಧಿತ ಆರೋಪಿಗಳ ಮೇಲೆ 9 ಕಳ್ಳತನ ಪ್ರಕರಣಗಳಿದ್ದು, ಅವರಿಂದ ಸುಮಾರು 10 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ತವರ‌ಮಳ್ಳಿಹಳ್ಳಿಯ ರೈತ ಶಂಕ್ರಪ್ಪ ದೊಡ್ಡಮನಿ ಅವರು ದಾಸ್ತಾನು ಮಾಡಿದ್ದ 60 ಕೆ.ಜಿ ತೂಕದ 18 ಜೋಳದ ಚೀಲಗಳು ಹಾಗೂ 60 ಕೆ.ಜಿ ತೂಕದ 2 ಗೋಧ ಪ್ಯಾಕೇಟ್ ಸೇರಿ ಒಟ್ಟು 40 ಸಾವಿರ ಮೌಲ್ಯದ ಧಾನ್ಯದ ಚೀಲಗಳ ಕಳವಾಗಿತ್ತು. ಈ ಬಗ್ಗೆ ಶಂಕ್ರಪ್ಪ ಸವಣೂರು ಠಾಣೆಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಸವಣೂರ ಠಾಣೆಯ ಪೊಲೀಸ್ ಅಧಿಕಾರಿಗಳು, ಕಳ್ಳರ ಪತ್ತೆಗಾಗಿ ಒಂದು ತನಿಖಾ ತಂಡ ರಚಿಸಿಕೊಂಡು ಹುಡುಕಾಟ ನಡೆಸಿದಾಗ ಶನಿವಾರ ಕಳ್ಳರ ಬಗ್ಗೆ ಸುಳಿವು ಸಿಕ್ಕಿತ್ತು. ಆ ತಕ್ಷಣವೇ ಅವರಿರುವ ಜಾಗಕ್ಕೆ ತೆರಳಿ ಐವರನ್ನು ಅರೆಸ್ಟ್ ಮಾಡಿ ಅವರಿಂದ ಸುಮಾರು ಸುಮಾರ 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಬಂಧಿತ ಆರೋಪಿಗಳ ಮೇಲೆ 9 ಕಳ್ಳತನ ಪ್ರಕರಣ ಇದ್ದು, 55 ಚೀಲ ಜೋಳ, 15 ಚೀಲ ಗೋವಿನ ಜೋಳ, 16 ಚೀಲ ಸಾವಿ, 5 ಚೀಲ ಸೋಯಾಬೀನ್, 5 ಚೀಲ್ ಕಡಲೆ, 2 ಚೀಲ ಗೋಧಿ ಸೇರಿ ಕಳ್ಳತನಕ್ಕೆ ಬಳಸುತ್ತಿದ್ದ ಬೊಲೆರೋ, ಒಂದು ಬೈಕ್‌ ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಸುದ್ದಿಯನ್ನೂ ಓದಿ | Self Harming: ಬೋಳು ತಲೆಯವ ಎಂದು ಹೆಂಡ್ತಿ ಅಪಹಾಸ್ಯ; ಮನನೊಂದು ಪತಿ ಆತ್ಮಹತ್ಯೆ

ಆರೋಪಿಗಳ ಬಗ್ಗೆ ತನಿಖೆ ಮುಂದುವರಿಸಲಾಗಿದ್ದು, ಕಳ್ಳರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿದ ಸವಣೂರು ಠಾಣೆ ಪಿಎಸ್ಐ ಆನಂದ ಒಣಕುದ್ರೆ, ಎಂ.ಎಸ್ ದೊಡ್ಡಮನಿ, ಪೊಲೀಗೌಡ್ರ ಸಿಬ್ಬಂದಿ ಎ. ಎಚ್ ನದಾಪ್ ಬಸವರಾಜ ಲಮಾಣಿ ಸೇರಿ ಇನ್ನಿತರ ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಎಸ್ಪಿ ಅಂಶುಕುಮಾರ್ ಪ್ರಶಂಸೆ‌ ವ್ಯಕ್ತಪಡಿಸಿದ್ದಾರೆ.