ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಕೆಎಲ್‌ ರಾಹುಲ್‌ ಬೇಡ, ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸಲಿ ಎಂದ ಬ್ರಾಡ್ ಹಾಗ್!

Brad Hogg On Shubman Gill: ಇಂಗ್ಲೆಂಡ್ ಹಾಗೂ ಭಾರತ ತಂಡಗಳ ನಡುವೆ ಜೂನ್ 20 ರಂದು 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಅವರೊಂದಿಗೆ ನಾಯಕ ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸಬೇಕೆಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಸಲಹೆ ನೀಡಿದ್ದಾರೆ.

ಶುಭಮನ್‌ ಗಿಲ್‌ ಇನಿಂಗ್ಸ್‌ ಆರಂಭಿಸಲಿ ಎಂದ ಬ್ರಾಡ್‌ ಹಾಗ್!

ಶುಭಮನ್‌ ಗಿಲ್‌ ಇನಿಂಗ್ಸ್‌ ಆರಂಭಿಸಬೇಕೆಂದ ಬ್ರಾಡ್‌ ಹಾಗ್‌.

Profile Ramesh Kote Jun 14, 2025 7:16 PM

ನವದೆಹಲಿ: ಭಾರತ ತಂಡದ ಯುವ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರೊಂದಿಗೆ ಶುಭಮನ್ ಗಿಲ್ (Shubman Gill) ಇನಿಂಗ್ಸ್ ಆರಂಭಿಸಬೇಕು ಎಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ (Brad Hogg) ಸಲಹೆ ನೀಡಿದ್ದಾರೆ. ಜೂನ್ 20 ರಂದು ಭಾರತ ಹಾಗೂ ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಮೊದಲನೇ ಟೆಸ್ಟ್‌ ಪಂದ್ಯ ಲೀಡ್ಸ್‌ನಲ್ಲಿ ನಡೆಯಲಿದೆ. ಅಂದ ಹಾಗೆ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ ಜೊತೆ ಕೆಎಲ್‌ ರಾಹುಲ್‌ ಇನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ಶುಭಮನ್‌ ಗಿಲ್‌ ಬಹುಶಃ ಮೂರು ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಬಹದು.

ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಹಾಗಾಗಿ ಬಿಸಿಸಿಐ ಹೊಸ ಆರಂಭಿಕ ಜೋಡಿಯ ಹುಡುಕಾಟದಲ್ಲಿದೆ. ಯಶಸ್ವಿ ಜೈಸ್ವಾಲ್ ಆಗಮನಕ್ಕೂ ಮುನ್ನ ಶುಭಮನ್ ಗಿಲ್ ಅವರು ನಾಯಕ ರೋಹಿತ್ ಶರ್ಮಾರಿಗೆ ಆರಂಭಿಕ ಜೋಡಿಯಾಗಿದ್ದರು. ಈಗ ರೋಹಿತ್ ಶರ್ಮಾ ಅವರು ನಿವೃತ್ತಿಯಿಂದ ತೆರವಾಗಿರುವ ಜಾಗದಲ್ಲಿ ಶುಭಮನ್ ಗಿಲ್ ಅವರೇ ಜೈಸ್ವಾಲ್‌ಗೆ ಆರಂಭಿಕ ಜೊತೆಗಾರನಾಗಬೇಕೆಂದು ಎಂದು ಹಾಗ್ ಹೇಳಿದ್ದಾರೆ.

IND vs ENG: ಮೊದಲನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ಸಂಜಯ್‌ ಬಾಂಗರ್‌!

ಶುಭಮನ ಗಿಲ್ ಇನಿಂಗ್ಸ್ ಆರಂಭಿಸಲಿ: ಬ್ರಾಡ್ ಹಾಗ್

ಇಂಗ್ಲೆಂಡ್ ಹಾಗೂ ಭಾರತ ತಂಡಗಳ ನಡುವಿನ ಟೆಸ್ಟ್ ಸರಣಿ ಕುರಿತು ರೇವ್ ಸ್ಪೋರ್ಟ್ಸ್ ಜೊತೆಗೆ ನಡೆಸಿದ ಸಂವಾದದಲ್ಲಿ ಬ್ರಾಡ್ ಹಾಗ್ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

"ಟೀಮ್ ಇಂಡಿಯಾ ಪರ ಕರುಣ್ ನಾಯರ್ ಆಡುವುದನ್ನು ನೋಡಲು ನಾನು ತುಂಬಾ ಸಂತೋಷಪಡುತ್ತೇನೆ. ಅದೇ ರೀತಿ ಶುಭಮನ್ ಗಿಲ್ ಅವರು ಯಶಸ್ವಿ ಜೈಸ್ವಾಲ್ ಜೊತೆಗೆ ಇನಿಂಗ್ಸ್‌ ಆರಂಭಿಸಬೇಕೆಂದು ನಾನು ಭಾವಿಸುತ್ತೇನೆ. ಬಹುಶಃ ರಿಷಭ್ ಪಂತ್ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ ಎಂಬುದು ನನ್ನ ಭಾವನೆ. ಏಕೆಂದರೆ ತಂಡದಲ್ಲಿ ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ ಅವರಂತಹ ಆಟಗಾರರಿದ್ದಾರೆ. ಅಲ್ಲದೆ ಮೂರನೇ ಕ್ರಮಾಂಕದಲ್ಲಿ ಸಾಯಿ ತಿಳಿಸಿದ್ದಾರೆ.

IND vs ENG: ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಮಿಂಚಬಲ್ಲ ಭಾರತೀಯ ಆಟಗಾರರನ್ನು ಆರಿಸಿದ ಸೌರವ್‌ ಗಂಗೂಲಿ!

ಸಾಯಿ ಸುದರ್ಶನ್ ಬಗ್ಗೆ ಬ್ರಾಡ್‌ ಹಾಗ್ ಶ್ಲಾಘನೆ

"ಟಿ20 ಕ್ರಿಕೆಟ್‌ನಲ್ಲಿ ಸಾಯಿ ಸುದರ್ಶನ್ ಅವರ ಆಟದ ವೈಖರಿ ಗಮನಿಸಿದರೆ ಅವರಲ್ಲಿ ಅದ್ಭುತ ತಂತ್ರಗಾರಿಕೆ ಇದೆ. ಆತ ಚೆಂಡಿನ ಗತಿ ಅರಿತು ಆಡಲು ತುಂಬಾ ಇಷ್ಟಪಡುತ್ತಾನೆ. ಮೈದಾನದಲ್ಲಿ ಸಿಗುವ ಖಾಲಿ ಜಾಗವನ್ನು ತುಂಬಾ ಚೆನ್ನಾಗಿ ಬಳಸಿಕೊಂಡು ರನ್ ಕದಿಯುವ ಕಲೆ ಹೊಂದಿದ್ದಾನೆ. ಅದೇ ರೀತಿ ಚೆಂಡನ್ನು ನೇರವಾಗಿ ಬೌಂಡರಿ ಗೆರೆ ತಲುಪಿಸುತ್ತಾರೆ. ಆದ್ದರಿಂದ ಅವರು ಎದುರಾಳಿ ತಂಡದ ಬೌಲರ್ಗಳ‌ ಮನಸ್ಥಿತಿ ಅರಿತು ಆಡುವ ಉತ್ತಮ ತಂತ್ರಗಾರಿಕೆ ಹೊಂದಿದ್ದಾರೆ. ಒಂದು ವೇಳೆ ಗಿಲ್ ಮೂರನೇ ಕ್ರಮಾಂಕದಲ್ಲಿ ಆಡಲು ಬಯಸಿದರೆ, ಆಗ ಸಾಯಿ ಸುದರ್ಶನ್ ನನ್ನು ಆರಂಭಿಕ ಆಟಗಾರನಾಗಿ ನೋಡಲು ಬಯಸುತ್ತೇನೆ. ಏಕೆಂದರೆ ತಂಡದಲ್ಲಿ ಎಡ-ಬಲ ಸಂಯೋಜನೆ ತುಂಬಾ ಮುಖ್ಯ," ಎಂದು ಬ್ರಾಡ್ ಹಾಗ್ ಹೇಳಿದ್ದಾರೆ.

IND vs ENG: ಜಸ್‌ಪ್ರೀತ್‌ ಬುಮ್ರಾ ಬಗ್ಗೆ ಇಂಗ್ಲೆಂಡ್‌ಗ ವಾರ್ನಿಂಗ್‌ ಕೊಟ್ಟ ಮಾರ್ನೆ ಮಾರ್ಕೆಲ್!

ಸಾಯಿ ಸುದರ್ಶನ್ ಅವರು ಇದುವರೆಗೂ ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ ಆಡದಿದ್ದರೂ, ಪ್ರಥಮ ದರ್ಜೆ ಹಾಗೂ ಐಪಿಎಲ್ ಟೂರ್ನಿಯಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಸಾಯಿ ಸುದರ್ಶನ್, ಶುಭಮನ್ ಗಿಲ್ ಅಲ್ಲದೆ ಕನ್ನಡಿಗ ಕೆಎಲ್ ರಾಹುಲ್ ಕೂಡ ಯಶಸ್ವಿ ಜೈಸ್ವಾಲ್ ಜೊತೆಗೆ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ದ ನಡೆದ ಪ್ರತಿಷ್ಠಿತ ಬಾರ್ಡರ್ - ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಒಂದೆರಡು ಪಂದ್ಯಗಳಲ್ಲಿ ಆರಂಭಿಕ ಜೋಡಿಯಾಗಿ ತಂಡಕ್ಕೆ ಆಸರೆಯಾಗಿದ್ದರು.