Crime News: ಅಂಗನವಾಡಿ ಸಹಾಯಕಿಯಿಂದ ರಾಕ್ಷಸೀ ಕೃತ್ಯ: ಮಗುವಿನ ಕೈಗೆ ಬರೆ, ಡೈಪರ್‌ನಲ್ಲಿ ಖಾರದಪುಡಿ ಹಾಕಿ ವಿಕೃತಿ
ಮಗು ಹಠ ಮಾಡುತ್ತಿದ್ದ ಕಾರಣ ಸಹಾಯಕಿ ಚಂದ್ರಮ್ಮ ಮಗುವಿನ ಎಡಗೈ ಮೇಲೆ ಬರೆ ಹಾಕಿದ್ದಲ್ಲದೆ ಡೈಪರ್ ಒಳಗೆ ಕಾರದ ಪುಡಿ ಹಾಕಿ ಹಿಂಸಿಸಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪೋಷಕರು ಸಿಡಿಪಿಒ ತಾಲೂಕು ಅಧಿಕಾರಿ ನಾರಾಯಣ್ ಅವರಿಗೆ ದೂರು ಸಲ್ಲಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಕನಕಪುರ: ರಾಜ್ಯದಲ್ಲಿ ಚಿಕ್ಕ ಮಗುವಿನ ಮೇಲೆ ವಿಕೃತಿ ಮೆರೆದ ಅಂಗನವಾಡಿ (Anganavadi) ಸಹಾಯಕಿಯೊಬ್ಬಳ ರಾಕ್ಷಸಿ ಕೃತ್ಯದ (Crime News) ಬಗ್ಗೆ ದೂರು ದಾಖಲಾಗಿದೆ. ಈಕೆ ಎರಡೂವರೆ ವರ್ಷದ ಮಗುವಿನ ಕೈ ಮೇಲೆ ಬರೆ (child abuse) ಹಾಕಿ, ಡೈಪರ್‌ನಲ್ಲಿ ಕಾರದಪುಡಿ ಹಾಕಿ ವಿಕೃತಿ ಮೆರೆದಿದ್ದಾಳೆ. ರಾಮನಗರ (Ramanagara news) ಜಿಲ್ಲೆಯ ಕನಕಪುರ ತಾಲೂಕಿನ ಮಹಾರಾಜರಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ದೀಕ್ಷಿತ್ ಎಂಬಾತ ಸಂತ್ರಸ್ತ ಬಾಲಕ.
ಮಂಗಳವಾರ ಮಧ್ಯಾಹ್ನ ಮಗುವಿನ ಪೋಷಕರಾದ ರಮೇಶ್ ನಾಯಕ್, ಪತ್ನಿ ಚೈತ್ರಾಬಾಯಿ ತಮ್ಮ ಮಗುವನ್ನು ಕರೆದುಕೊಂಡು ಬರಲು ಅಂಗನವಾಡಿಗೆ ತೆರಳಿದ್ದಾರೆ. ಆಗ ಬಾಲಕ ಅಳುತ್ತಿರುವುದನ್ನು ಗಮನಿಸಿದ್ದಾರೆ. ವಿಚಾರಿಸಿದಾಗ ಸಹಾಯಕಿಯ ಕೃತ್ಯ ಗೊತ್ತಾಗಿದೆ. ಮಗು ಹಠ ಮಾಡುತ್ತಿದ್ದ ಕಾರಣ ಸಹಾಯಕಿ ಚಂದ್ರಮ್ಮ ಮಗುವಿನ ಎಡಗೈ ಮೇಲೆ ಬರೆ ಹಾಕಿದ್ದಲ್ಲದೆ ಡೈಪರ್ ಒಳಗೆ ಕಾರದ ಪುಡಿ ಹಾಕಿ ಹಿಂಸಿಸಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪೋಷಕರು ಸಿಡಿಪಿಒ ತಾಲೂಕು ಅಧಿಕಾರಿ ನಾರಾಯಣ್ ಅವರಿಗೆ ದೂರು ಸಲ್ಲಿಸಿದ್ದಾರೆ.
ತಾಯಿಯನ್ನು ಬೈದಿದ್ದಕ್ಕೆ ಸೋದರ ಮಾವನ ಕೊಲೆ ಮಾಡಿದ ಅಳಿಯ
ಚಿಕ್ಕಮಗಳೂರು: ತಾಯಿಯನ್ನು ಬೈದಿದ್ದಕ್ಕೆ ಯುವಕನೊಬ್ಬ ಸೋದರ ಮಾವನ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ (Murder Case) ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದರಾಮೇಗೌಡ ಹತ್ಯೆಯಾದವರು. ಇವರ ಅಕ್ಕನ ಮಗ ಸಂಜಯ್ ಕೊಲೆ ಆರೋಪಿ ಎಂದು ತಿಳಿದುಬಂದಿದೆ. ತಂದೆಯ ಆಸ್ತಿಗಾಗಿ ಅಕ್ಕ ಮತ್ತು ತಮ್ಮನ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಅಕ್ಕನಿಗೆ ಸಹೋದರ ಕೆಲವು ಕೆಟ್ಟ ಪದಗಳಿಂದ ಬೈದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಅಕ್ಕನ ಮಗ ಸ್ವಂತ ಸೋದರಮಾವನ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಮೃತ ಸಿದ್ದರಾಮೇಗೌಡ ಮತ್ತು ಆತನ ಅಕ್ಕ ನಿರ್ಮಲ ನಡುವೆ 26 ಎಕರೆ ತೆಂಗಿನ ತೋಟ, 24 ವಾಣಿಜ್ಯ ಮಳಿಗೆ, ಸೈಟ್ ವಿಚಾರವಾಗಿ ವಿವಾದವಿತ್ತು. ತಂದೆಯ ಆಸ್ತಿಗಾಗಿ ನಿರ್ಮಲ ನ್ಯಾಯಾಲಯದಲ್ಲಿ ಕೇಸ್ ಹಾಕಿದ್ದರು. ಇದೇ ವಿಚಾರವಾಗಿ ಗಲಾಟೆ ನಡೆದಿತ್ತು.
ಗಲಾಟೆ ವೇಳೆ ಸಿದ್ದರಾಮೇಗೌಡ ಅಕ್ಕನನ್ನು ಕೆಟ್ಟ ಪದಗಳಿಂದ ಬೈದಿದ್ದ. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡ ಅಕ್ಕನ ಮಗ ಸಂಜಯ್ ಮರ್ಡರ್ ಪ್ಲಾನ್ ಮಾಡಿದ್ದ. ಅದರಂತೆ ಮಾರ್ಚ್ 14 ರ ಸಂಜೆ ಪಂಚನಹಳ್ಳಿ ಗ್ರಾಮಕ್ಕೆ ಬಂದಿದ್ದ. ಮಾವ ಸಿದ್ದರಾಮೇಗೌಡನ ಜತೆ ಕೂತು ಎಣ್ಣೆ ಹೊಡೆದಿದ್ದಾನೆ. ಈ ವೇಳೆ ತನ್ನ ತಾಯಿಗೆ ಬೈದಿದ್ದರ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಆಗಿದೆ. ಈ ವೇಳೆ ಡ್ರಿಪ್ ವೈರ್ ನಿಂದ ಕುತ್ತಿಗೆ ಬಿಗಿದು ಮಾವನನ್ನೇ ಸಂಜಯ್ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ: Pakistan Spy: ಬೆಂಗಳೂರಿನಲ್ಲಿ ಆರೆಸ್ಟ್ ಆದ ಪಾಕಿಸ್ತಾನಿ ಗೂಢಚರ ಯಾರಿವನು?