ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sonu Nigam: ಸೋನು ನಿಗಂಗೆ ನಕಲಿ ಅಕೌಂಟ್‌ ಕಾಟ; ಆರ್‌ಸಿಬಿ ಫ್ಯಾನ್‌ಗಳನ್ನು ಕೆಣಕಿ ಪೋಸ್ಟ್‌

Sonu Nigam: ಗಾಯಕ ಸೋನು ನಿಗಂ ಹೆಸರಿನಲ್ಲಿ ಬೇರೊಬ್ಬ ವ್ಯಕ್ತಿ ಎಕ್ಸ್​ನಲ್ಲಿ ಮಾಡುತ್ತಿರುವ ಪೋಸ್ಟ್‌ಗಳು ಅಸಲಿ ಸೋನು ನಿಗಂ ಅನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಿವೆ. ಇದೀಗ ಅಂತದೇ ಇನ್ನೊಂದು ಪೋಸ್ಟ್‌ನಲ್ಲಿ ಹೀಗೆ ಆರ್‌ಸಿಬಿ ಗೆಲುವಿನ ಬಗ್ಗೆ ವ್ಯಂಗ್ಯ ಮಾಡಲಾಗಿದೆ.

ಸೋನು ನಿಗಂಗೆ ನಕಲಿ ಅಕೌಂಟ್‌ ಕಾಟ; ಆರ್‌ಸಿಬಿ ಫ್ಯಾನ್ಸ್‌ ಕೆಣಕಿ ಪೋಸ್ಟ್‌

ಸೋನು ನಿಗಂ

ಹರೀಶ್‌ ಕೇರ ಹರೀಶ್‌ ಕೇರ Jun 19, 2025 9:16 AM

ಬೆಂಗಳೂರು: ಖ್ಯಾತ ಗಾಯಕ ಸೋನು ನಿಗಂ (Sonu Nigam) ಅವರಿಗೆ ಅವರದೇ ಹೆಸರಿನ ನಕಲಿ ಸೋಶಿಯಲ್‌ ಮೀಡಿಯಾ ಅಕೌಂಟ್‌ ಕಾಟ ಜಾಸ್ತಿಯಾಗಿದೆ. ಇದೀಗ ಸೋನು ಅವರನ್ನು ಇಕ್ಕಟ್ಟಿಗೆ ಸಿಕ್ಕಿಸುವಂಥ ಪೋಸ್ಟ್‌ ಒಂದನ್ನು ಅವರದೇ ಹೆಸರಿನ ಮತ್ತೊಬ್ಬಾತ ಮಾಡಿದ್ದು, ಕನ್ನಡಿಗರಲ್ಲೂ ಹಲವರು ಇದರಿಂದ ಕನ್‌ಫ್ಯೂಸ್‌ ಆಗಿದ್ದಾರೆ. ಈ ಬಾರಿ ಆರ್‌ಸಿಬಿ ಗೆಲುವು ಮತ್ತು ದುರಂತಗಳಲ್ಲಿ ಜೊತೆಗೆ ಹೋಲಿಸಿ ಮಾಡಿದ ಸ್ವೀಟ್‌ ಹಲವರ ಕೆಂಗಣ್ಣಿಗೆ ತುತ್ತಾಗಿದೆ.

ʼಸೋನು ನಿಗಂ ಸಿಂಗ್‌ʼ ಎಂಬಾತ ಸೋನು ನಿಗಮ್‌ ಹೆಸರಿನ ಅಕೌಂಟ್‌ನಿಂದ ಮಾಡಿರುವ ಪೋಸ್ಟ್ ಸದ್ಯ ವೈರಲ್ ಆಗಿದೆ. ಆತ ಟ್ವೀಟ್ ಮಾಡಿ ʼJabse RCB IPL jeeti hai tabse duniya mein kuch bhi achcha nahi ho raha hai!ʼ ಎಂದು ಬರೆದಿದ್ದಾನೆೆ. ಅಂದರೆ ʼಆರ್​ಸಿಬಿ ಐಪಿಎಲ್ ಗೆದ್ದಾಗಿನಿಂದ ಪ್ರಪಂಚದಲ್ಲಿ ಯಾವುದೂ ಒಳ್ಳೆಯದಾಗುತ್ತಿಲ್ಲʼ ಎಂದು ಹೇಳಿದ್ದಾರೆ. ಇದು ಆರ್​ಸಿಬಿ ಅಭಿಮಾನಿಗಳನ್ನು ಕೆರಳಿಸಿದೆ. ಆದರೆ ಇದು ಅಸಲಿ ಸೋನುದಲ್ಲ ಎಂದು ಹಲವರಿಗೆ ಗೊತ್ತಾಗಿಲ್ಲ.

ಆರ್​ಸಿಬಿ ಗೆಲುವಿನ ಬೆನ್ನಲ್ಲೇ ನಡೆದ ಬೆಂಗಳೂರು ಕಾಲ್ತುಳಿತ ದುರಂತ ಸಂಭವಿಸಿದೆ. ಆ ನಂತರ ಹಲವಾರು ದುರಂತಗಳು ನಡೆದಿವೆ. ಒಂದೆಡೆ ಏರ್ ಇಂಡಿಯಾ ಅಪಘಾತ, ಇನ್ನೊಂದೆಡೆ ಇಸ್ರೇಲ್ ಹಾಗೂ ಇರಾನ್ ಯುದ್ಧ ನಡೆಯುತ್ತಿದ್ದು ಅಲ್ಲಿಂದ ಭಾರತೀಯರನ್ನು ಕರೆತರುವ ಸವಾಲು ಭಾರತದ ಮುಂದೆ ಇದೆ. ಸೋನು ನಿಗಂ ಮೇಲೆ ಜನತೆ ಅಪಾರ್ಥ ಮಾಡಿಕೊಳ್ಳುವಂತೆ, ಸಿಟ್ಟು ಮಾಡಿಕೊಳ್ಳುವಂತೆ ಈ ಹಿಂದೆಯೂ ಈತ ಟ್ವೀಟ್‌ ಮಾಡಿದ್ದಾನೆ. ಈ ಬಗ್ಗೆ ಸೋನು ನಿಗಂ ದೂರು ಕೂಡ ನೀಡಿದ್ದಾರೆ.



ಈ ಪೋಸ್ಟ್‌ ಬಗ್ಗೆ ಫ್ಯಾಕ್ಟ್ ಚೆಕ್‌ ಮಾಡಿದಾಗ, ಇದು ಬಾಲಿವುಡ್‌ ಗಾಯಕ ಸೋನು ನಿಗಮ್‌ ಅವರ ಪೋಸ್ಟ್‌ ಅಲ್ಲವೆಂಬುದು ತಿಳಿದುಬಂದಿದೆ. ಇದು ಬಿಹಾರ ಮೂಲದ ʼಸೋನು ನಿಗಮ್‌ ಸಿಂಗ್‌ʼ ಎಂಬಾತನದಾಗಿದ್ದು, ಈತ ತಾನೊಬ್ಬ ಕ್ರಿಮಿನಲ್‌ ಲಾಯರ್‌ ಎಂದು ಹಾಕಿಕೊಂಡಿದ್ದಾನೆ. ಈತ ಕಾಂಗ್ರೆಸ್‌ ಕಾರ್ಯಕರ್ತನೂ ಹೌದು ಎನ್ನುವ ಅಭಿಪ್ರಾಯ ಮೂಡುವಂತೆ ಈತ ಕಾಂಗ್ರೆಸ್‌ ಧ್ವಜ ಹಾಕಿಕೊಂಡಿದ್ದಾನೆ. ಆದರೆ, ಅಸಲಿ ಸೋನು ನಿಗಮ್‌ ಅವರ ಚಿತ್ರಗಳನ್ನೂ ತನ್ನ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿಕೊಂಡಿದ್ದು, ನೋಡುಗರು ತಪ್ಪು ಭಾವಿಸುವಂತೆ ಮಾಡಲಾಗಿದೆ.

ಈ ನಕಲಿ ಅಕೌಂಟ್‌ ಬಗ್ಗೆ ಸೋನು ನಿಗಮ್‌ ಕೆಲವು ವಾರಗಳ ಹಿಂದೆಯೇ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ವಿಷಯ ಶೇರ್‌ ಮಾಡಿಕೊಂಡಿದ್ದರು. "ಅದು ನನ್ನ ಅಕೌಂಟ್‌ ಅಲ್ಲ. ನಾನು ಎಕ್ಸ್‌ನಲ್ಲಿ ಅಕೌಂಟ್‌ ಹೊಂದಿಲ್ಲ. ಈತ ವಿವಾದಾತ್ಮಕ ಪೋಸ್ಟ್‌ಗಳನ್ನು ಮಾಡುತ್ತ, ನನ್ನ ಹೆಸರು ಹಾಗೂ ಖ್ಯಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ. ನನ್ನ ವಿಶ್ವಾಸಾರ್ಹತೆಗೆ ಕಳಂಕ ತರುತ್ತಿದ್ದಾನೆ. ನನ್ನ ಹಾಗೂ ನನ್ನ ಕುಟುಂಬವನ್ನು ಅಪಾಯಕ್ಕೆ ತಳ್ಳುತ್ತಿದ್ದಾನೆ" ಎಂದು ಸೋನು ನಿಗಮ್‌ ಪೋಸ್ಟ್‌ ಮಾಡಿದ್ದರು.

ಈಗಾಗಲೇ ಕನ್ನಡಿಗರ ಕೋಪಕ್ಕೆ ಗುರಿಯಾಗಿರುವ ಸೋನು ನಿಗಂ, ಸಂಗೀತ ರಸಮಂಜರಿಯೊಂದರಲ್ಲಿ ಹಾಡುವ ವೇಳೆ ಕನ್ನಡ ಹಾಡು ಹಾಡಿ ಎಂದಿದ್ದಕ್ಕೆ ಕೋಪಗೊಂಡಿದ್ದರು. ಕನ್ನಡ ಕನ್ನಡ ಎನ್ನುವ ಮಾತನ್ನು ಉಗ್ರರಿಗೆ ಹೋಲಿಸಿ ಮಾತನಾಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರ ಇದರ ಕುರಿತು ಕೇಸ್‌ ಕೂಡ ದಾಖಲಾಗಿದ್ದು, ಬೆಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Fact Check: ಕನ್ನಡಿಗರನ್ನು ಮತ್ತೆ ಕೆಣಕಿದರಾ ಸೋನು ನಿಗಮ್‌? ವೈರಲ್‌ ಪೋಸ್ಟ್‌ ಹಿಂದೆ ಏನಿದೆ?