Viral Video: ನಡು ರಸ್ತೆಯಲ್ಲಿ ಸ್ಕೂಟಿ ನಿಲ್ಲಿಸಿ ನಿದ್ದೆ ಮಾಡಿದ ಭೂಪ; ವಿಡಿಯೊ ವೈರಲ್
ಆಂಧ್ರ ಪ್ರದೇಶದ ವಿಜಯವಾಡದ ಶ್ರೀನಗರ ಕಾಲೋನಿಯಲ್ಲಿ ಹಗಲು ಹೊತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ಕೂಟರ್ ಅನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಅದರ ಮೇಲೆ ಮಲಗಿಕೊಂಡಿದ್ದಾನೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.


ಅಮರಾವತಿ: ಇತ್ತೀಚೆಗೆ ಮಹಿಳೆಯೊಬ್ಬಳು ಕುಡಿದು ನಡುರಸ್ತೆಯಲ್ಲಿ ಕುಳಿತ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ವ್ಯಕ್ತಿಯೊಬ್ಬ ತನ್ನ ಸ್ಕೂಟರ್ ಅನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಅದರ ಮೇಲೆ ಮಲಗಿಕೊಂಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಇಲ್ಲಿ ಅವನು ನಿದ್ದೆಗೆಟ್ಟು ಮಂಪರಿನಲ್ಲಿ ಹಾಗೇ ಮಾಡಿದನೋ? ಅಥವಾ ಕುಡಿದಿದ್ದನೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈಗ ವೈರಲ್ ಆಗಿರುವ ವಿಡಿಯೊದಲ್ಲಿ ಅವನು ತನ್ನ ಸ್ಕೂಟಿಯ ಫುಟ್‌ಬೋರ್ಡ್‌ನಲ್ಲಿ ಕುಳಿತು ತೂಕಡಿಸುತ್ತ ನಿದ್ದೆ ಮಾಡುತ್ತಿರುವುದು ಸೆರೆಯಾಗಿದೆ. ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎನ್ನುವ ಗಾದೆ ಮಾತನನು ನೆನಪಿಸುವಂತಿದೆ ಈ ಘಟನೆ.
ಈ ಘಟನೆ ಆಂಧ್ರ ಪ್ರದೇಶದ ವಿಜಯವಾಡದ ಶ್ರೀನಗರ ಕಾಲೋನಿಯಲ್ಲಿ ನಡೆದಿದೆ. ಪಕ್ಕದಲ್ಲಿ ವಾಹನಗಳು ಹಾದು ಹೋದರೂ ಅವನು ಮಾತ್ರ ಎದ್ದೇಳಲಿಲ್ಲ.ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಆದರೆ ಆತನ ಬಗ್ಗೆ ಮತ್ತು ಅವನು ಸ್ಕೂಟರ್‌ನಲ್ಲಿ ನಿದ್ರಿಸಲು ಕಾರಣವೇನು ಎಂಬುದರ ಕುರಿತು ಇನ್ನೂ ವಿವರಗಳು ತಿಳಿದು ಬಂದಿಲ್ಲ.
ವಿಡಿಯೊ ಇಲ್ಲಿದೆ ನೋಡಿ...
ఏపీలో నాణ్యమైన మద్యం ఎఫెక్ట్
— Telugu Scribe (@TeluguScribe) June 18, 2025
విజయవాడ - శ్రీనగర్ కాలనీలో రోడ్డు మీద స్కూటీ పడేసి నిద్రపోతున్న మందు బాబు pic.twitter.com/8ML9vrpNTl
ವಿಜಯವಾಡದ ರಸ್ತೆಯಲ್ಲಿ ಇಂತಹ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ವಿಜಯವಾಡದ ಜನನಿಬಿಡ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬೈಕ್‌ನಲ್ಲಿ ಯುವ ಜೋಡಿಯೊಂದು ಮದ್ಯದ ಅಮಲಿನಲ್ಲಿ ರೊಮ್ಯಾನ್ಸ್ ನಡೆಸುತ್ತಿದ್ದಾಗ ಸಿಕ್ಕಿ ಬಿದ್ದಿತ್ತು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಸುದ್ದಿಯನ್ನೂ ಓದಿ:Viral Video: ಊಟದ ವಿಷಯಕ್ಕೆ ಕಿರಿಕ್; ರೊಚ್ಚಿಗೆದ್ದ ಪ್ರಯಾಣಿಕರಿಂದ ಅನಾಗರಿಕ ವರ್ತನೆ
ಆಂಧ್ರ ಪ್ರದೇಶದಲ್ಲಿ ನಡೆದ ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಚಿತ್ತೂರು ಜಿಲ್ಲೆಯ ಕುಪ್ಪಂ ಪ್ರದೇಶದಲ್ಲಿ ಸಾಲದ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಲಾಗಿದೆ. ಪತಿ 80,000 ರೂ. ಸಾಲ ಪಡೆದು ಹಣವನ್ನು ಮರುಪಾವತಿಸಲು ವಿಫಲವಾದ ಕಾರಣ ಮಹಿಳೆಯರ ಗುಂಪೊಂದು ಆಕೆಯನ್ನು ಹಿಗ್ಗಾಮುಗ್ಗಾ ಥಳಿಸಿದ ವಿಡಿಯೊ ವೈರಲ್ ಆಗಿತ್ತು.