ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: 2 ಗಂಟೆ ಈ ಮನೆಯಲ್ಲಿರಲು ಈತ ನೀಡುವ ಬಾಡಿಗೆ ಕೇಳಿದ್ರೆ ನೀವು ಶಾಕ್‌ ಆಗ್ತೀರಿ; ಅಂಥದ್ದೇನಿದೆ ಇಲ್ಲಿ?

ಮೆಕ್ಸಿಕನ್ ಮೂಲದ ವ್ಯಕ್ತಿಯೊಬ್ಬ ಬೆಂಗಳೂರಿನ ಹೊರಗೆ ನಂದಿ ಹಿಲ್ಸ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಎರಡು ಗಂಟೆಗಳ ಕಾಲ ಉಳಿದುಕೊಳ್ಳಲು ತಿಂಗಳಿಗೆ 4 ಲಕ್ಷ ರೂ. ಬಾಡಿಗೆ ನೀಡಿದ್ದಾನೆ. ಆತ ವಾಸವಾಗಿದ್ದ ಐಷಾರಾಮಿ ಮನೆಯನ್ನು ತೋರಿಸುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಈ ಮನೆಯ ಬಾಡಿಗೆ ಕೇಳಿದ್ರೆ ನಿಮ್ಮ ತಲೆ ತಿರುಗುವುದು ಗ್ಯಾರಂಟಿ!

Profile pavithra Jun 18, 2025 7:08 PM

ಬೆಂಗಳೂರು: ಮೆಕ್ಸಿಕನ್ ಮೂಲದ ವ್ಯಕ್ತಿಯೊಬ್ಬ ಬೆಂಗಳೂರಿನ ಹೊರಗೆ ಮನೆಯೊಂದರಲ್ಲಿ 2 ಗಂಟೆಗಳ ಕಾಲ ಉಳಿದುಕೊಳ್ಳಲು ತಿಂಗಳಿಗೆ 4 ಲಕ್ಷ ರೂಪಾಯಿ ಬಾಡಿಗೆ ಪಾವತಿಸುವ ಮೂಲಕ ಸುದ್ದಿಯಾಗಿದ್ದಾನೆ. ಹೌದು, ನಂದಿ ಹಿಲ್ಸ್ ರಸ್ತೆಯಲ್ಲಿರುವ ಈ ಐಷಾರಾಮಿ ಮನೆಗೆ ಆತ 4 ಲಕ್ಷ ರೂಪಾಯಿ ಬಾಡಿಗೆ ತೆರುತ್ತಿದ್ದಾನೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.

ವಿಡಿಯೊದಲ್ಲಿ ಮನೆ ಹಾಗೂ ಅಲ್ಲಿನ ಸುತ್ತಮುತ್ತಲಿನ ದೃಶ್ಯ ಸೆರೆಯಾಗಿದೆ. ಬೆಟ್ಟಗುಡ್ಡಗಳು ಮತ್ತು ಹಚ್ಚ ಹಸಿರಿನಿಂದ ಸುತ್ತುವರಿದಿರುವ ಈ ಮನೆಯು ಖಾಸಗಿ ಈಜುಕೊಳ ಮತ್ತು ಸುಂದರವಾದ ಗಾರ್ಡನ್‌ ಹೊಂದಿದೆ. ಇನ್ನು ಲಿವಿಂಗ್ ರೂಮ್ ಪೀಠೋಪಕರಣಗಳನ್ನು ಮೆಕ್ಸಿಕೋದಿಂದ ತರಲಾಗಿದೆ ಎಂದು ಅವನು ಹೇಳಿದ್ದಾನೆ. ಈ ಮನೆಯ ಸೌಂದರ್ಯ ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ.



ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದ್ದು ಸಾಕಷ್ಟು ಜನ ನೆಟ್ಟಿಗರು ಇದಕ್ಕೆ ಕಾಮೆಂಟ್‌ ಮಾಡಿದ್ದಾರೆ. "ಈ ಬಾಡಿಗೆ ಪಾವತಿಸಲು ಅವರು ತಿಂಗಳಿಗೆ ಕೋಟಿಗಟ್ಟಲೆ ದುಡಿಯುತ್ತಿರಬಹುದು" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಇದು ಪ್ರತಿ ಪೈಸೆಗೂ ಯೋಗ್ಯವಾಗಿದೆ" ಎಂದು ಬರೆದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗಿನಿಂದ 13 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ.

ಈ ಸುದ್ದಿಯನ್ನೂ ಓದಿ:Viral Video: ಲವ್ವರ್‌ ಜೊತೆ ಜಾಲಿ ಮಾಡ್ತಿದ್ದಾಗ ರೆಡ್‌ಹ್ಯಾಂಡಾಗಿ ಹಿಡಿದ ಪತಿ; ಹೊಟೇಲ್‌ ಮಹಡಿಯಿಂದ ಹಾರಿದ ಕಿಲಾಡಿ ಪತ್ನಿ

ಬೆಂಗಳೂರಿನಲ್ಲಿ ದುಬಾರಿ ಬಾಡಿಗೆ ಮನೆಗಳ ವಿಚಾರ ಬಹಳ ಹಿಂದಿನಿಂದಲೂ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಯ ವಿಷಯವಾಗಿದೆ. ಈ ವರ್ಷದ ಶುರುವಿನಲ್ಲಿ ನಗರದ ಹರಳೂರು ನೆರೆಹೊರೆಯಲ್ಲಿರುವ ತ್ರಿಬಲ್ ಬೆಡ್ ರೂಂ ಅಪಾರ್ಟ್‌ಮೆಂಟ್‌ ಒಂದರಲ್ಲಿ ಬಾಡಿಗೆ ಬಹಳ ದುಬಾರಿಯಾಗಿದ್ದು, ಮಾಸಿಕ ಬಾಡಿಗೆ 2.7 ಲಕ್ಷ ರೂ. ಮತ್ತು ಭದ್ರತಾ ಠೇವಣಿ 15 ಲಕ್ಷ ರೂ. ಎಂಬುದಾಗಿ ಸುದ್ದಿ ಆಗಿತ್ತು.