Lizard Problem: ಮನೆಯೊಳಗೆ ಹಲ್ಲಿ ಬಾರದಂತೆ ತಡೆಯುವುದು ಹೇಗೆ?
Lizard Problem: ಮನೆಯಲ್ಲಿ ಹಲ್ಲಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಇವುಗಳನ್ನು ನಾವು ಕರೆಯದೆ ಇದ್ದರೂ ನಮಗಿಂತ ಮೊದಲೇ ನಮ್ಮ ಮನೆಯಲ್ಲಿ ಹಾಜರಿರುತ್ತವೆ. ಇವುಗಳು ಬಾರದಂತೆ ತಪ್ಪಿಸುವುದಕ್ಕೆ ಪೆಸ್ಟ್ ಕಂಟ್ರೋಲ್ ಸಂಸ್ಥೆಗಳಿಗೆ ಮೊರೆ ಹೋಗುತ್ತೇವೆ. ಇದರಿಂದ ಮನೆಯೆಲ್ಲ ರಾಸಾಯನಿಕ ತುಂಬಿಕೊಂಡಂತೆ ಆಗುತ್ತದೆ ಎಂಬುದು ಹಲವರ ಸಮಸ್ಯೆ. ಹಾಗಾದ್ರೆ ಇದಕ್ಕೆ ಕಾರಣವೇನು? ಯಾವ ರೀತಿಯಾಗಿ ತಡೆಯಬಹುದು ಇಲ್ಲಿದೆ ಕೆಲವೊಂದು ಸಲಹೆ...


ನವದೆಹಲಿ: ನಮ್ಮ ಮನೆಯೆಂದರೆ ಕೇವಲ ನಮ್ಮದೇ ಆಗಿರುವುದಿಲ್ಲ. ಅದರಲ್ಲಿ ಇರುವೆ, ಜೇಡ, ಹಲ್ಲಿ, ಜಿರಳೆ ಮುಂತಾದ ಹಲವು ಬಗೆಯ ಜೀವಿ ಗಳು ನಮ್ಮೊಂದಿಗೇ ವಾಸ ಮಾಡುತ್ತವೆ. ಇವುಗಳು ಬಾರದಂತೆ ತಪ್ಪಿ ಸುವುದಕ್ಕೆ ಪೆಸ್ಟ್ ಕಂಟ್ರೋಲ್ ಸಂಸ್ಥೆಗಳಿಗೆ ಮೊರೆ ಹೋಗುತ್ತೇವೆ. ಇದ ರಿಂದ ಮನೆಯೆಲ್ಲ ರಾಸಾಯನಿಕ ತುಂಬಿಕೊಂಡಂತೆ ಆಗುತ್ತದೆ ಎಂಬುದು ಹಲವರ ಸಮಸ್ಯೆ. ಹಾಗೆಂದು ಈ ಕೀಟಗಳೊಂದಿಗೆ ರಾಜಿ ಮಾಡಿ ಕೊಳ್ಳು ವುದು ಸಹ ಸಾಧ್ಯವಿಲ್ಲವಲ್ಲ. ಉಳಿದೆಲ್ಲವುಗಳಿಗಿಂತ ಆರೋಗ್ಯಕ್ಕೆ ಅಪಾಯ ಕಾರಿ ಎನಿಸುವುದು ಹಲ್ಲಿ (Lizard Problem). ಬಿಸಿ ಆಹಾರ ಗಳಿಗೆ ಆಕಸ್ಮಿಕವಾಗಿ ಬಿದ್ದರೆ, ಇನ್ನಿಲ್ಲದ ತೊಂದರೆಯನ್ನು ಅನುಭವಿಸ ಬೇಕಾಗುತ್ತದೆ. ಈ ಸಣ್ಣ ಸರೀಸೃಪಗಳು ಮನೆಯೊಳಗೆ ಬಾರದಂತೆ ತಡೆಯುವುದು ಹೇಗೆ?
ಬರುವುದೇಕೆ?
ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ನಾವು. ಇವು ಮನೆಯೊಳಗೆ ನುಸುಳುವುದು ಆಹಾರ ಮತ್ತು ವಸತಿಯನ್ನು ಅರಸಿ ಕೊಂಡು ತಿಂದುಳಿದ ಅಹಾರಗಳು, ಭದ್ರವಾಗಿ ಮುಚ್ಚಿಕೊಂಡಿಲ್ಲದ ಆಹಾರ ಗಳು, ಹಲ್ಲಿಗಳಿಗೆ ದೊರೆಯುವಂತೆ ಇಟ್ಟ ಹಣ್ಣು-ತರಕಾರಿಗಳು, ಇತರ ಕೀಟಗಳು ಮುಂತಾದವೆಲ್ಲ ಹಲ್ಲಿಗಳಿಗೆ ಉದರಂಭರಣಕ್ಕೆ ಉಪಯೋಗ ವಾಗುತ್ತವೆ.ಜೊತೆಗೆ, ಮನೆಯೊಳಗಿನ ಬೆಚ್ಚಗಿನ ವಾತಾವರಣ, ಸಂದಿ-ಮೂಲೆಗಳು, ಪೇರಿಸಿಟ್ಟ ವಸ್ತುಗಳ ಅಡಿಯಲ್ಲಿ- ಹೀಗೆ ಹಲವು ಬಗೆಯ ಜಾಗಗಳಲ್ಲಿ ಅವುಗಳಿಗೆ ಆಶ್ರಯ ಒದಗಬಹುದು. ಒಳಗೆ ಬರುವುದಕ್ಕೆ ಅವುಗಳಿಗೆ ರಾಜಮಾರ್ಗವೇ ಬೇಕೆಂದಿಲ್ಲ. ಬಾಗಿಲ ಸಂದಿ, ಕಿಟಕಿಯ ಬಿರುಕುಗಳು, ವೆಂಟಿಲೇಶನ್ ಗವಾಕ್ಷಿ, ಎಸಿ ಪೈಪಿನ ಎಡೆ… ಹೀಗೆ ಎಲ್ಲಿಂದ ಲಾದರೂ ಒಳಗೆ ಬರಬಹುದು ಈ ಜೀವಿಗಳು. ಇವುಗಳನ್ನು ನಿಯಂತ್ರಿ ಸುವುದು ಹೇಗೆ? ಒಳಗೆ ಬಾರದಂತೆ ತಡೆಯಲು ಸಾಧ್ಯವೇ? ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ನೈಸರ್ಗಿಕ ಮಾರ್ಗಗಳು
ಪೆಪ್ಪರ್ ಸ್ಪ್ರೇ: ಕಾಳುಮೆಣಸಿನ ಪುಡಿ ಮಾತ್ರವಲ್ಲ, ಇದಕ್ಕೆ ಕೆಂಪು ಖಾರದ ಪುಡಿ ಅಥವಾ ಯಾವುದಾದರೂ ಕಿಚ್ಚು ಖಾರದ ಸಾಸ್‌ಗಳನ್ನು ಸಹ ಸೇರಿಸಿ ಬಳಸಬಹುದು. ಈ ವಸ್ತುಗಳನ್ನು ನೀರಿನಲ್ಲಿ ಬೆರೆಸಿ, ಅಹೋರಾತ್ರಿ ಇರಿಸಿ. ಬೆಳಗ್ಗೆಗೆ ಇದು ಬಳಸುವುದಕ್ಕೆ ಸಿದ್ಧ. ಸಾಮಾನ್ಯವಾಗಿ ಹಲ್ಲಿ ಓಡಾಡುವ ಸ್ಥಳಗಳು, ಮನೆಯ ಒಳಗೆ ಬರುವ ಸಂದಿಗಳಿಗೆ ಈ ದ್ರಾವಣವನ್ನು ಸಿಂಪ ಡಿಸಿ. ಈ ಜಾಗಗಳಿಗೆ ಹಲ್ಲಿಗಳು ಬರುವುದನ್ನು ನಿಲ್ಲಿಸುತ್ತವೆ.
ಮೊಟ್ಟೆ ಚಿಪ್ಪು: ವಿಚಿತ್ರವೆನಿಸಿದರೂ ಇದು ನಿಜ. ಕೋಳಿಮೊಟ್ಟೆಯ ಒಳಗಿನ ವಾಸನೆಯನ್ನು ಹಲ್ಲಿಗಳು ಸಹಿಸುವುದಿಲ್ಲ. ಹಾಗಾಗಿ ಬಳಸಿದ ಮೊಟ್ಟೆಗಳ ಚಿಪ್ಪನ್ನು ಹಲ್ಲಿಗಳು ಒಳಗೆ ಬರುವ ತಾವಿನಲ್ಲಿ ಇರಿಸಿ. ಉದಾ, ಬಾಗಿಲ ಮೂಲೆ, ಕಿಟಕಿ ಸಂದಿ ಮುಂತಾದೆಡೆಗಳಲ್ಲಿ ಇಡಿ. ಇವುಗಳನ್ನು ಹಲ್ಲಿಗಳು ದಾಟುವುದಿಲ್ಲ. ಆದರೆ ಸ್ವಚ್ಛತೆಯ ಕಾರಣದಿಂದ, ಈ ಚಿಪ್ಪುಗಳನ್ನು ಪ್ರತಿದಿನವೂ ಮರೆಯದೆ ಬದಲಿಸಿ.
ಕಾಫಿ, ತಂಬಾಕಿನ ಮಿಶ್ರಣ: ಕಾಫಿ ಪುಡಿ ಮತ್ತು ತಂಬಾಕಿನ ಪುಡಿಗಳನ್ನು ಸೇರಿಸಿ, ಚೆನ್ನಾಗಿ ಬೆರೆಸಿ. ಇದನ್ನು ಹಲ್ಲಿ ಬರುವ ದಾರಿಯಲ್ಲೆಲ್ಲ ಉದುರಿಸಿ. ಈ ಕಟುವಾದ ವಾಸನೆಗೆ ಹಲ್ಲಿಗಳು ಆ ಕಡೆ ಸುಳಿಯುವುದಿಲ್ಲ. ಆದರೆ ಇವುಗಳನ್ನು ಒಂದೆರಡು ದಿನಕ್ಕೆ ತೆಗೆದು ಹೊಸದಾಗಿ ಹಾಕುತ್ತಿರಿ; ಹಾಗಿ ಲ್ಲದೆ ಇದರ ಘಾಟು ಕಡಿಮೆಯಾದರೆ ಹಲ್ಲಿಗಳು ಮತ್ತೆ ಬರಬಹುದು.
ಬೆಳ್ಳುಳ್ಳಿ: ಇದರ ಎಣ್ಣೆಯನ್ನು ಹಲ್ಲಿಯ ಮಾರ್ಗಗಳಲ್ಲೆಲ್ಲ ಸಿಂಪಡಿಸಿ. ಬೆಳ್ಳಿಳ್ಳಿಯ ಕಟುವಾದ ವಾಸನೆಯನ್ನು ಹಲ್ಲಿಗಳು ಸಹಿಸುವುದಿಲ್ಲ. ಆದರೆ ಈ ಎಲ್ಲಾ ನೈಸರ್ಗಿಕ ಉಪಾಯಗಳಲ್ಲೂ, ಅವುಗಳನ್ನು ಒಮ್ಮೆ ಮಾಡಿ ಬಿಡು ವುದಕ್ಕಿಲ್ಲ. ಆಗಾಗ ಪುನರಾವರ್ತನೆ ಮಾಡುತ್ತಲೇ ಇರಬೇಕು. ಆಗ ಮಾತ್ರವೇ ಸುಸ್ಥಿರ ಫಲಿತಾಂಶ ದೊರೆಯುತ್ತದೆ.
ಇದನ್ನು ಓದಿ: Vastu Tips: ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿನಲ್ಲಿಟ್ಟರೆ ಶುಭ? ಇಲ್ಲಿದೆ ಮಾಹಿತಿ
ಪೆಪ್ಪರ್‌ಮಿಂಟ್: ಈ ಗಿಡವನ್ನು ಮನೆಯ ಬಾಲ್ಕನಿಯಲ್ಲಿ ಬೆಳೆಸಬಹುದು. ಇದರ ಗಾಢವಾದ ಪರಿಮಳಕ್ಕೆ ಹಲ್ಲಿಗಳು ಹತ್ತಿರ ಸುಳಿಯುವುದಿಲ್ಲ. ಪೆಪ್ಪರ್‌ಮಿಂಟ್ ಮಾತ್ರವಲ್ಲ, ನೀಲಗಿರಿಯಲ್ಲೂ ಅಷ್ಟೇ ಗಾಢವಾದ ಪರಿಮಳವಿದೆ. ಈ ಸಸ್ಯಗಳ ತೈಲಗಳನ್ನು ಸಿಂಪಡಿಸಿದರೆ ಕೀಟಗಳನ್ನು ಮತ್ತು ಹಲ್ಲಿಯನ್ನು ಓಡಿಸುವಲ್ಲಿ ಅಷ್ಟೇ ಪರಿಣಾಮಕಾರಿ ಕೆಲಸವನ್ನು ಮಾಡಬಲ್ಲವು.
ಉಷ್ಣತೆ: ವಾತಾವರಣದ ಉಷ್ಣತೆ ಕಡಿಮೆ ಇರುವಂಥ ಸ್ಥಳಗಳನ್ನು ಹಲ್ಲಿ ಗಳು ಇಷ್ಟಪಡುವುದಿಲ್ಲ. ಅವುಗಳಿಗೆ ತಮ್ಮ ದೇಹದ ಉಷ್ಣತೆಯನ್ನು ಬೇಕಾ ದಂತೆ ಹೊಂದಿಸಿಕೊಳ್ಳಲಾಗದು. ಹಾಗಾಗಿ ಕೊಠಡಿಯಲ್ಲಿ ಹವಾ ನಿಯಂತ್ರಣ ವ್ಯವಸ್ಥೆ ಇದ್ದರೆ, ಅದನ್ನು ೨೨ ಡಿ.ಸೆ. ಗಿಂತ ಕಡಿಮೆಗೆ ಇರಿಸಿ. ಇಂಥ ತಂಪಾದ ಸ್ಥಳಗಳನ್ನು ಹಲ್ಲಿಗಳು ಇಷ್ಟಪಡುವುದಿಲ್ಲ.