ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದಕ್ಷಿಣ ಆಫ್ರಿಕಾ ತಂಡದಲ್ಲಿ ಹೆನ್ರಿಚ್‌ ಕ್ಲಾಸೆನ್‌ರ ಸ್ಥಾನವನ್ನು ಡೆವಾಲ್ಡ್‌ ಬ್ರೆವಿಸ್‌ ತುಂಬುತ್ತಾರಾ?

Dewald Brevis returns to T20I squad : ಜುಲೈ 14 ರಿಂದ 26ರವರೆಗೆ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಹಾಗೂ ಜಿಂಬಾಬ್ವೆ ನಡುವೆ ತ್ರಿಕೋನ ಟಿ20 ಸರಣಿ ನಡೆಯಲಿದೆ. ಜೂನ್ 26 ( ಗುರುವಾರ) ರಂದು ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಿದ್ದು, ಎರಡು ವರ್ಷಗಳ ನಂತರ ಡೆವಾಲ್ಡ್ ಬ್ರೆವಿಸ್‌ ಚುಟುಕು ತಂಡಕ್ಕೆ ಮರಳಿದ್ದಾರೆ. ಇತ್ತೀಚೆಗೆ ಹೆನ್ರಿಚ್‌ ಕ್ಲಾಸೆನ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರ ಸ್ಥಾನವನ್ನು ಡೆವಾಲ್ಡ್‌ ಬ್ರೆವಿಸ್‌ ತುಂಬಲಿದ್ದಾರಾ? ಎಂದು ಕಾದು ನೋಡಬೇಕಾಗಿದೆ.

ಹೆನ್ರಿಚ್‌ ಕ್ಲಾಸೆನ್‌ರ ಸ್ಥಾನವನ್ನು ಡೆವಾಲ್ಡ್‌ ಬ್ರೆವಿಸ್‌ ತುಂಬುತ್ತಾರಾ?

ದಕ್ಷಿಣ ಆಫ್ರಿಕಾ ತಂಡದಲ್ಲಿ ಡೆವಾಲ್ಡ್‌ ಬ್ರೆವಿಸ್‌ ಸ್ಥಾನ ಪಡೆದಿದ್ದಾರೆ.

Profile Ramesh Kote Jun 26, 2025 8:22 PM

ನವದೆಹಲಿ: ಸುಮಾರು ಎರಡು ವರ್ಷಗಳಿಗೂ ಹೆಚ್ಚು ಅವಧಿಯ ನಂತರ ಬೇಬಿ ಎಬಿಡಿ ಖ್ಯಾತಿಯ ಡೆವಾಲ್ಡ್ ಬ್ರೆವೀಸ್ (Dewald Brevis) ಅವರು ದಕ್ಷಿಣ ಆಫ್ರಿಕಾ ಟಿ20 ತಂಡಕ್ಕೆ ಮರಳಿದ್ದಾರೆ. ಜಿಂಬಾಬ್ವೆ, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯಲಿರುವ ತ್ರಿಕೋನ ಚುಟುಕು ಸರಣಿಗೆ ಜೂನ್ 26 (ಗುರುವಾರ) ದಕ್ಷಿಣ ಆಫ್ರಿಕಾ (South Africa) ತಂಡವನ್ನು ಪ್ರಕಟಿಸಿದ್ದು, ಏಡೆನ್ ಮಾರ್ಕ್ರಮ್ ಅನುಪಸ್ಥಿತಿಯಲ್ಲಿ ರಾಸಿ ವ್ಯಾನ್ ಡೆರ್ ಡುಸೆನ್‌ ( Rassie van der Dussen) ತಂಡವನ್ನು ಮುನ್ನಡೆಸಲಿದ್ದಾರೆ. ನಾಲ್ವರು ಯುವ ಪ್ರತಿಭೆಗಳಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. 2023ರಲ್ಲಿ ಆಸ್ಟ್ರೇಲಿಯಾ ವಿರುದ್ದ ನಡೆದಿದ್ದ ಟಿ20 ಸರಣಿಯಲ್ಲಿ ಡೆವಾಲ್ಡ್ ಬ್ರೆವಿಸ್‌ ಕೊನೆಯ ಬಾರಿ ಕಾಣಿಸಿಕೊಂಡಿದ್ದರು.

2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬದಲಿ ಆಟಗಾರನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರಿದ್ದ ಡೆವಾಲ್ಡ್‌ ಬ್ರೆವಿಸ್‌, 6 ಪಂದ್ಯಗಳಿಂದ 180ರ ಸ್ಟ್ರೆಕ್ ರೇಟ್‌ನಲ್ಲಿ 225 ರನ್‌ಗಳನ್ನು ಬಾರಿಸಿದ್ದರು. ಈ ಪ್ರದರ್ಶನವನ್ನು ಪರಿಗಣಿಸಿ ಕ್ರಿಕೆಟ್‌ ದಕ್ಷಿಣ ಆಫ್ರಿಕಾ ತನ್ನ ಟಿ20 ತಂಡದಲ್ಲಿ ಸ್ಥಾನವನ್ನು ನೀಡಿದೆ. ಲುವಾನ್‌ ಪ್ರೆಟೋರಿಸ್ ಸೇರಿದಂತೆ ನಾಲ್ವರು ಯುವ ಪ್ರತಿಭೆಗಳೂ ಸ್ಥಾನ ಪಡೆದಿದ್ದಾರೆ. ಮುಂದಿನ ವರ್ಷ ಟಿ20 ವಿಶ್ವಕಪ್‌ ಟೂರ್ನಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಡೆವಾಲ್ಡ್‌ ಬ್ರೆವಿಸ್‌ ಈ ತ್ರಿಕೋನ ಸರಣಿ ಮುಖ್ಯವಾಗಿದೆ. ಏಕೆಂದರೆ, ಇತ್ತೀಚೆಗೆ ಹೆನ್ರಿಚ್‌ ಕಾಸೆನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರ ಸ್ಥಾನವನ್ನು ಬ್ರೆವಿಸ್‌ ತುಂಬುವ ಸಾಧ್ಯತೆ ಇದೆ.

ಟಿ20 ತ್ರಿಕೋನ ಸರಣಿ; 2 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ತಂಡಕ್ಕೆ ಮರಳಿದ ಡೆವಾಲ್ಡ್ ಬ್ರೆವಿಸ್

ಹೆನ್ರಿಚ್‌ ಕ್ಲಾಸೆನ್‌ ಸ್ಥಾನವನ್ನು ಡೆವಾಲ್ಡ್‌ ಬ್ರೆವಿಸ್‌ ತುಂಬುತ್ತಾರಾ?

ಹೆನ್ರಿಚ್‌ ಕ್ಲಾಸೆನ್‌ ಅವರು ಕಳೆದ ಹಲವು ವರ್ಷಗಳಿಂದ ದಕ್ಷಿಣ ಆಫ್ರಿಕಾ ಟಿ20 ಹಾಗೂ ಏಕದಿನ ತಂಡಕ್ಕೆ ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟ್ಸ್‌ಮನ್‌ ಆಗಿದ್ದರು. ಅವರು ತಮ್ಮ ಸ್ಪೋಟಕ ಬ್ಯಾಟಿಂಗ್‌ ಕೌಶಲವನ್ನು ಹೊಂದಿದ್ದಾರೆ. ಸ್ಪಿನ್‌ಗೆ ದೊಡ್ಡ ದೊಡ್ಡ ಹೊಡೆತಗಳನ್ನು ಹೊಡೆಯುವ ಕೌಶಲವನ್ನು ಅವರು ಹೊಂದಿದ್ದರು. ಆ ಮೂಲಕ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯವನ್ನು ಹೊಂದಿದ್ದರು. 2018ರಲ್ಲಿ ಇವರು ದಕ್ಷಿಣ ಆಫ್ರಿಕಾ ಪರ ವೈಟ್‌ಬಾಲ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಅವರು ದಕ್ಷಿಣ ಆಫ್ರಿಕಾ ತಂಡಕ್ಕೆ ಮದ್ಯಮ ಕ್ರಮಾಂಕದಲ್ಲಿ ಕೀ ಬ್ಯಾಟ್ಸ್‌ಮನ್‌ ಆಗಿದ್ದರು. ಆದರೆ, ನಿವೃತ್ತಿ ಪಡೆದಿರುವ ಕಾರಣ ಅವರ ಸ್ಥಾನವನ್ನು ಯಾರು ತುಂಬುತ್ತಾರೆಂಬುದು ತೀವ್ರ ಕುತೂಹಲ ಕೆರಳಿಸಿದೆ.

2025ರ ಡೆವಾಲ್ಡ್ ಬ್ರೆವಿಸ್ ಪಾಲಿಗೆ ಅದ್ಭುತವಾಗಿದೆ. 21 ವರ್ಷದ ಈ ಆಟಗಾರ ಟಿ20 ಕ್ರಿಕೆಟ್‌ನಲ್ಲಿ ಉತ್ತಮ ವರ್ಷ ಇದಾಗಿದೆ. ದಕ್ಷಿಣ ಆಫ್ರಿಕಾ ಟಿ20, ಐಪಿಎಲ್‌ ಮತ್ತು ವಿಟಾಲಿಟಿ ಬ್ಲಾಸ್ಟ್‌ನಲ್ಲಿಅವರು ಆಡಿದ್ದಾರೆ. ಈ ವರ್ಷ ಇಲ್ಲಿಯವರೆಗೆ 22 ಇನಿಂಗ್ಸ್‌ಗಳಲ್ಲಿ ಅವರು 40.11ರ ಸರಾಸರಿಯಲ್ಲಿ ಮತ್ತು 181.86ರ ಸ್ಟ್ರೈಕ್ ರೇಟ್‌ನಲ್ಲಿ 682 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಇವರು 59 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ತಂಡದಲ್ಲಿ ಹೆನ್ರಿಚ್‌ ಕ್ಲಾಸೆನ್‌ ಅವರ ಸ್ಥಾನವನ್ನು ತುಂಬಲು ಡೆವಾಲ್ಡ್‌ ಬ್ರೆವಿಸ್‌ ಸೂಕ್ತ. ಆ ಮೂಲಕ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಡೆವಾಲ್ಡ್‌ ಬ್ರೆವಿಸ್‌ ಅವರು, ಹೆನ್ರಿಚ್‌ ಕ್ಲಾಸೆನ್‌ ಅವರ ಸ್ಥಾನವನ್ನು ತುಂಬಬಹುದು.



ತ್ರಿಕೋನ ಟಿ20 ಸರಣಿ ಆರಂಭ ಯಾವಾಗ?

ಮುಂಬರುವ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಹಾಗೂ ಜಿಂಬಾಬ್ವೆ ನಡುವಿನ ತ್ರಿಕೋನ ಟಿ20 ಸರಣಿಯ ನಿಮಿತ್ತ ಮುಖ್ಯ ತರಬೇತುದಾರ ಶುಕ್ರಿ ಕಾನ್ರಾಡ್ ಅವರ ಸಮ್ಮುಖದಲ್ಲಿ ಬಲಿಷ್ಠ 14 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ. ಹರಾರೆಯಲ್ಲಿ ಜುಲೈ 14 ರಿಂದ 26ರವರೆಗೆ ಈ ಸರಣಿ ನಡೆಯಲಿದೆ. ರಾಸಿ ವ್ಯಾನ್‌ ಡೆರ್ ಡುಸೆನ್ ತಂಡವನ್ನು ಮುನ್ನಡೆಸಲಿದ್ದು, ಕಾರ್ಬಿನ್ ಬಾಷ್, ಲುವೆನ್ ಡ್ರೆ ಪ್ರೆಟೋರಿಸ್, ರೂಬಿನ್ ಹರ್ಮನ್, ಸೆನುರಾಯ್ ಮುತ್ತುಸ್ವಾಮಿಗೆ ಚೊಚ್ಚಲ ಅವಕಾಶ ನೀಡಲಾಗಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.

ತ್ರಿಕೋನ ಸರಣಿಗೆ ದಕ್ಷಿಣ ಆಫ್ರಿಕಾ ತಂಡ

ರಾಸಿ ವ್ಯಾನ್ ಡೆರ್ ಡುಸೆನ್‌, ಲುಂಗಿ ಎನ್‌ಗಿಡಿ, ರೀಝಾ ಹೆಂಡ್ರಿಕ್ಸ್, ನಂಡ್ರೆ ಬರ್ಗರ್, ಡೆವಾಲ್ಡ್ ಬ್ರೆವಿಸ್, ಕಾರ್ಬಿನ್ ಬಾಷ್, ಜೆರಾಲ್ಡ್ ಕೊಯೆಡ್ಜಿ, ರಾಬಿನ್ ಹರ್ಮನ್, ಜಾರ್ಜ್ ಲಿಂಡೆ, ಕ್ವೆನಾ ಎಂಫಾಕ, ಸೆನುರಾಯ್ ಮುತ್ತುಸ್ವಾಮಿ, ನ್ಕಾಬಾ ಪೀಟರ್, ಲುವೆನ್ ಪ್ರೆಟೋರಿಯಸ್, ಆಂಡಿಲೆ ಸಿಮೆಲೇನ್