ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಪಾಕಿಸ್ತಾನದಲ್ಲೂ ಇದ್ದಾರೆ ಅಪ್ಪು ಫ್ಯಾನ್ಸ್‌; ಕ್ಯಾಬ್‌ ಡ್ರೈವರ್‌ ಕಾರಿನಲ್ಲಿ ಪ್ಲೇ ಆಗುತ್ತೆ ಪುನೀತ್‌ ಸಾಂಗ್‌!

ಆಪರೇಷನ್‌ ಸಿಂದೂರದ (Opp Sindoor) ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಬಂಧ ಸಂಪೂರ್ಣ ಹದಗೆಟ್ಟಿದೆ. ಪಾಕಿಸ್ತಾನಿ ಪ್ರಜೆಗಳಿಗೆ ಭಾರತಕ್ಕೆ ಬರುವುದನ್ನು ನಿಷೇಧಿಸಲಾಗಿದೆ.ಅಷ್ಟೇ ಅಲ್ಲ ಪಾಕಿಸ್ತಾನದ ಸಿನಿಮಾ ಹಾಗೂ ಕಲಾವಿದರನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಆದರೆ ಕಲೆಗೆ ಯಾವುದೇ ಅಡೆ ತಡೆ ಇರುವುದಿಲ್ಲ.

ಪಾಕಿಸ್ತಾನದಲ್ಲೂ ಇದ್ದಾರೆ ಅಪ್ಪು ಫ್ಯಾನ್ಸ್‌; ಏನಿದು ಘಟನೆ?

Profile Vishakha Bhat Jun 26, 2025 1:24 PM

ಬೆಂಗಳೂರು: ಆಪರೇಷನ್‌ ಸಿಂದೂರದ (Opp Sindoor) ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಬಂಧ ಸಂಪೂರ್ಣ ಹದಗೆಟ್ಟಿದೆ. ಪಾಕಿಸ್ತಾನಿ ಪ್ರಜೆಗಳಿಗೆ ಭಾರತಕ್ಕೆ ಬರುವುದನ್ನು ನಿಷೇಧಿಸಲಾಗಿದೆ.ಅಷ್ಟೇ ಅಲ್ಲ ಪಾಕಿಸ್ತಾನದ ಸಿನಿಮಾ ಹಾಗೂ ಕಲಾವಿದರನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಆದರೆ ಕಲೆಗೆ ಯಾವುದೇ ಅಡೆ ತಡೆ ಇರುವುದಿಲ್ಲ. ಪಾಕಿಸ್ತಾನದ ಪ್ರಜೆಯೊಬ್ಬ ಭಾರತದ ಚಿತ್ರಗಳಿಗೆ ಫಿದಾ ಆಗಿದ್ದಾನೆ. ಅಷ್ಟೇ ಅಲ್ಲದೆ ಆತ ಕನ್ನಡದ ಖ್ಯಾತ ನಟ ಪುನೀತ್‌ ರಾಜಕುಮಾರ್‌ ಅವರ ಅಭಿಮಾನಿಯಾಗಿದ್ದಾನೆ. ಪಾಕಿಸ್ತಾನದಲ್ಲಿ ಕನ್ನಡ ಮೊಳಗುತ್ತಿದೆ.

ಪಾಕಿಸ್ತಾನದ ಈ ಕ್ಯಾಬ್ ಡ್ರೈವರ್ ಪುನೀತ್‌ ರಾಜಕುಮಾರ್‌ ಅವರ ಹಾಡನ್ನು ದಿನಾಲೂ ಕೇಳುತ್ತಾನೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪ್ರಿಯಾಂಕಾ ಎಂಬುವವರು ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಕರ್ನಾಟಕದವರಾಗಿದ್ದು, ದುಬೈನಲ್ಲಿ ವಾಸವಾಗಿದ್ದಾರೆ. ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅವರು ಕ್ಯಾಬ್ ಏರುತ್ತಿದ್ದಂತೆ ಆ ವ್ಯಕ್ತಿ ನೀವು ಯಾವ ಊರಿನವರು ಎಂದು ಕೇಳಿದರಂತೆ. ಅದಕ್ಕೆ ಇವರು ಕರ್ನಾಟಕ, ಭಾರತ ಎಂದಿದ್ದಾರೆ. ಡ್ರೈವರ್‌ ಆ ಕೂಡಲೇ ಪುನೀತ್‌ ರಾಜ್‌ಕುಮಾರ್‌ ಹೆಸರನ್ನು ಅವರು ಹೇಳಿದ್ದಾರೆ.

ಪ್ರಿಯಾಂಕಾ ಅವರ ಬಳಿ ಈ ವಿಚಾರವನ್ನು ಹಂಚಿಕೊಳ್ಳುತ್ತಿದ್ದಂತೆ ಅವರಿಗೆ ಆಶ್ಚರ್ಯವಾಗಿದೆ. ಈ ವ್ಯಕ್ತಿ ಪಾಕಿಸ್ತಾನದವರು. ಆದರೆ, ಇವರಿಗೆ ಕನ್ನಡ ಹಾಡು ಅದರಲ್ಲೂ ಪುನೀತ್ ರಾಜ್​ಕುಮಾರ್ ಹಾಡನ್ನು ಅವರು ಸಾಕಷ್ಟು ಇಷ್ಟಪಡುತ್ತಾರೆ’ ಎಂದರು ಪ್ರಿಯಾಂಕಾ. ಇದಕ್ಕೆ ಕ್ಯಾಬ್ ಡ್ರೈವರ್, ‘ನನಗೆ ಈ ಸಾಂಗ್ ತುಂಬಾನೇ ಇಷ್ಟ. ಪುನೀತ್ ಸಿನಿಮಾದ ಹಾಡು ನನಗೆ ಇಷ್ಟ’ ಎಂದು ಅವರು ಹೇಳಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ಈ ಸುದ್ದಿಯನ್ನೂ ಓದಿ: Ceasefire Violation: ಪಾಕ್‌ ಕದನ ವಿರಾಮ ಉಲ್ಲಂಘನೆ ಬೆನ್ನಲ್ಲೇ ಬಾಲಿವುಡ್‌ನ ಈ ಸಿನಿಮಾ ಸೀನ್‌ ಫುಲ್‌ ವೈರಲ್‌-ಅಂತಹದ್ದೇನಿದೆ ಇದರಲ್ಲಿ?

ಪುನೀತ್‌ ರಾಜ್‌ಕುಮಾರ್‌ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಅವರು ನಿಧನರಾದ ನಂತರವೂ ಅಭಿಮಾನಿ ಸಾವಿರಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಪುನೀತ್ ಹೆಸರಲ್ಲಿ ರಸ್ತೆಗಳು ನಿರ್ಮಾಣ ಆಗಿವೆ. ಪಾರ್ಕ್​ಗಳಿಗೆ ಪುನೀತ್ ಹೆಸರನ್ನು ಕೂಡ ಇಡಲಾಗಿದೆ.