ರಸ್ತೆ ಗುಂಡಿಗಳ ನಡುವೆ ನಡೆದು ವಧುವಿನ ಫೋಟೋ ಶೂಟ್...!
ರಸ್ತೆ ಗುಂಡಿಗಳ ನಡುವೆ ನಡೆದು ವಧುವಿನ ಫೋಟೋ ಶೂಟ್...!




ಕೇರಳ: ಮದುವೆ ಜೀವನದಲ್ಲಿ ಮರೆಯಲಾಗದ ಸಂಭ್ರಮ. ಅದರಲ್ಲೂ ವಿಭಿನ್ನವಾಗಿ ಫೋಟೋ ಶೂಟ್ ಮಾಡೋದು ಅಂದರೆ ಈಗಿನ ಟ್ರೆಂಡ್ ಆಗಿದೆ. ಇಲ್ಲೊಂದು ಫೋಟೋ ಶೂಟ್‌ಗಾಗಿ ಆಯ್ಕೆ ಮಾಡಿಕೊಂಡ ಸ್ಥಳ ತುಂಬಾನೇ ವಿಭಿನ್ನವಾಗಿದೆ.
ಕೇರಳದ ವಧು ತಮ್ಮ ಮದುವೆಯ ಚಿತ್ರೀಕರಣವನ್ನು ಸ್ಮರಣೀಯವಾಗಿಸಲು ಗುಂಡಿಗಳ ಸಮಸ್ಯೆಯನ್ನು ಹೈಲೈಟ್ ಮಾಡಿ ದ್ದಾರೆ. ವಧು ಮತ್ತು ವಿವಾಹದ ಛಾಯಾಗ್ರಾಹಕರನ್ನು ಒಳಗೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಿಡಿಯೊದಲ್ಲಿ, ವಧು ಸಂಪೂರ್ಣವಾಗಿ ಕೆಸರು ನೀರಿನಿಂದ ತುಂಬಿದ ದೊಡ್ಡ ಗುಂಡಿಯ ಉದ್ದಕ್ಕೂ ನಡೆದುಕೊಂಡು ಬರು ತ್ತಾರೆ. ಬೀಳದಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹೆಣಗಾಡುತ್ತಿರುವಾಗ ವಾಹನಗಳು ಹಾದುಹೋಗುವುದನ್ನು ಕ್ಲಿಪ್ ತೋರಿ ಸುತ್ತದೆ. ಒಬ್ಬ ಛಾಯಾಗ್ರಾಹಕ ವಧುವಿನ ಚಿತ್ರ ಗಳನ್ನು ದೂರದಿಂದ ಸೆರೆಹಿಡಿಯುತ್ತಿರುವುದು ಕಂಡುಬರುತ್ತದೆ.
ಚಿತ್ರಗಳು ಮತ್ತು ವಿಡಿಯೊವನ್ನು Instagramನ ಹ್ಯಾಂಡಲ್ Arrow_wedding company ಪೋಸ್ಟ್ ಮಾಡಿದೆ.
ವಿಡಿಯೋ ಜೊತೆಗೆ, "ರಸ್ತೆಯ ಮಧ್ಯದಲ್ಲಿ ವಧುವಿನ ಫೋಟೋಶೂಟ್" ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ಇದುವರೆಗೆ ಈ ಕ್ಲಿಪ್ 4.3 ಮಿಲಿಯನ್ ವೀಕ್ಷಣೆಗಳನ್ನು ಮತ್ತು 37,0400 ಲೈಕ್‌ಗಳನ್ನು ಸಂಗ್ರಹಿಸಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಕೇರಳದ ರಸ್ತೆ ಪರಿಸ್ಥಿತಿಗಳನ್ನು ಗೇಲಿ ಮಾಡಿ ದ್ದಾರೆ. ಸಾಕಷ್ಟು ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಬಳಕೆದಾರರು "ಇದು ರಸ್ತೆಯಲ್ಲ ಕೊಳ" ಎಂದು ಬರೆದಿದ್ದಾರೆ. "ಇದು ನೈಸ್ ರೋಡ್" ಎಂದು ಗೇಲಿ ಮಾಡಲಾಗಿದೆ. "ಇದು ರಸ್ತೆಯೇ? ನೀವು ಕೆಲವು ಮರಿ ಮೀನುಗಳನ್ನು ಖರೀದಿಸಿದರೆ, ನೀವು ಮೀನು ಸಾಕಾಣಿಕೆಯನ್ನು ಪ್ರಾರಂಭಿಸಬಹುದು" ಎಂದು ಮೂರನೇ ಕಾಮೆಂಟ್‌ನಲ್ಲಿ ಅಪಹಾಸ್ಯ ಮಾಡಲಾಗಿದೆ.