ಗೇಟ್ ಮೇಲೆ ಹರಿದ ಕಾರು! ಚಾಲಕನ ನಿರ್ಲಕ್ಷ್ಯದಿಂದ ಬಾಲಕಿ ಸ್ಥಳದಲ್ಲೇ ಸಾವು
ಸೂರತ್‌ನ ಹೌಸಿಂಗ್ ಸೊಸೈಟಿ ಬಳಿ ಚಾಲಕನು ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದಾನೆ. ಈತನ ನಿರ್ಲಕ್ಷ್ಯದಿಂದ ಕಾರು ಗೇಟ್ ಒಂದಕ್ಕೆ ಢಿಕ್ಕಿ ಹೊಡೆದು ಬಳಿಕ ಬಾಲಕಿಯ ಮೇಲೆ ಚಲಾಯಿಸಿದ್ದಾನೆ. ಇದರ ಪರಿಣಾಮ ಗೇಟಿನ ಕೆಳಗೆ ಬಾಲಕಿ ಸಿಲುಕಿಕೊಂಡಿದ್ದು ಕಾರು ಭೀಕರವಾಗಿ ಗುದ್ದಿದ ಪರಿಣಾಮ ಕಾರು ಕಟ್ಟಡದ ಒಳಗೆ ಹೊಕ್ಕಿದ್ದು ಮುಗ್ದ ಬಾಲಕಿ ಸ್ಥಳದಲ್ಲೆ ಸಾವಿಗೀಡಾಗಿದ್ದಾಳೆ.

Surat man runs car

ಗಾಂಧಿನಗರ: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಡಿಕ್ಕಿ ಹೊಡೆದ ಪರಿಣಾಮ ಆರು ವರ್ಷದ ಬಾಲಕಿ ಸಾವನ್ನಪ್ಪಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಸೂರತ್‌ನ ಹೌಸಿಂಗ್ ಸೊಸೈಟಿ ಬಳಿ ಈ ಘಟನೆ ನಡೆದಿದ್ದು ಬಾಲಕಿಯ ಮೇಲೆ ಕಾರು ಚಲಾಯಿಸಿದ್ದ (Driver's negligence) ಪರಿಣಾಮ ಆಕೆ ಸ್ಥಳದಲ್ಲೇ ಅಸುನೀಗಿದ್ದಾಳೆ. ಈ ಹೃದಯ ವಿದ್ರಾವಕ ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದ್ದು ಚಾಲಕನ ಬೇಜವಬ್ದಾರಿತನಕ್ಕೆ ನೆಟ್ಟಿಗರು ಕಿಡಿ ಕಾರಿದ್ದಾರೆ. ಕಾರು ಚಾಲಕನನ್ನು ರಕ್ಷಿತ್ ಚೌರಾಸಿಯಾ ಎಂದು ಗುರುತಿಸಲಾಗಿದ್ದು ವ್ಯಕ್ತಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಈ ಭೀಕರ ಅಪಘಾತದ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ಚಾಲಕನ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸೂರತ್‌ನ ಹೌಸಿಂಗ್ ಸೊಸೈಟಿ ಬಳಿ ಚಾಲಕನು ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದಾನೆ. ಈತನ ನಿರ್ಲಕ್ಷ್ಯದಿಂದ ಕಾರು ಗೇಟ್ ಒಂದಕ್ಕೆ ಢಿಕ್ಕಿ ಹೊಡೆದೆ. ಬಳಿಕ ಬಾಲಕಿಯ ಮೇಲೆ ಚಲಾಯಿಸಿದ್ದಾನೆ. ಇದರ ಪರಿಣಾಮ ಗೇಟಿನ ಕೆಳಗೆ ಬಾಲಕಿ ಸಿಲುಕಿಕೊಂಡಿದ್ದು ಕಾರು ಭೀಕರವಾಗಿ ಗುದ್ದಿದ ಪರಿಣಾಮ ಕಾರು ಕಟ್ಟಡದ ಒಳಗೆ ಹೊಕ್ಕಿದ್ದು ಮುಗ್ದ ಬಾಲಕಿ ಸ್ಥಳದಲ್ಲೆ ಸಾವಿಗೀಡಾಗಿದ್ದಾಳೆ.
ಮೃತ ಬಾಲಕಿಯು ಸೊಸೈಟಿಯಲ್ಲಿ ಕೆಲಸ ಮಾಡುವ ಭದ್ರತಾ ಸಿಬಂದ್ದಿಯ ಮಗಳಾಗಿದ್ದು ಗೇಟ್ ಬಳಿ ಆಟ ಆಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅಪಘಾತ ನಡೆದ ಸಂದರ್ಭದಲ್ಲಿ ಅಲ್ಲಿದ್ದ ಜನರು ಬಾಲಕಿಯ ರಕ್ಷಣೆಗಾಗಿ ಮುಂದಾಗಿದ್ದರೂ ಕಾರು ಗುದ್ದಿದ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ. ಕಾರು ಚಾಲಕನು ಕುಡಿದು ಗಾಡಿ ಓಡಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಲ್ಲದೇ ಭೀಕರ ಅಪಘಾತದ ಬಳಿಕ ಕಾರಿನಿಂದ ಕೆಳಗೆ ಇಳಿದ ಚೌರಾಸಿಯಾ ಅಮಲಿನಲ್ಲಿ ತೇಲುತ್ತಿದ್ದ ಎನ್ನಲಾಗಿದೆ. ಈತನ ನಿರ್ಲಕ್ಷ್ಯದಿಂದಲೇ ಬಾಲಕಿಯ ದಾರುಣ ಅಂತ್ಯ ಕಂಡಿದ್ದು ನ್ಯಾಯಕ್ಕಾಗಿ ಆಕೆಯ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಇದನ್ನು ಓದಿ: Fire Accident: ಉತ್ತರ ಮೆಸಿಡೋನಿಯಾದ ನೈಟ್ ಕ್ಲಬ್‌ನಲ್ಲಿ ಬೆಂಕಿ ಅವಘಡ: 50 ಮಂದಿ ಸಾವು
ಅಪಘಾತ ಉಂಟಾದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು ಬೇರೊಬ್ಬರ ವಾಹನವನ್ನು ಈತ ಚಲಾಯಿಸಿದ್ದಾನೆ ಎಂದು ತಿಳಿದು ಬಂದಿದೆ. ಈ ನಿರ್ಲಕ್ಷ್ಯ ದಿಂದಾಗಿ ಕಾರು ಚಾಲಕ ರಕ್ಷಿತ್ ಚೌರಾಸಿಯಾನನ್ನು ಬಂಧಿಸಲಾಗಿದ್ದು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಆರೋಪಿಯ ಮೇಲೆ ವಿವಿಧ ವಿಭಾಗದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೀಗ ಈ ದೃಶ್ಯ ಬಗ್ಗೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದು ಚಾಲಕನ ನಿರ್ಲಕ್ಷ್ಯ ದಿಂದ ಬಾಲಕಿಯ ಪ್ರಾಣವೇ ಹೋಗಿದೆ. ಈತ ನಿಗೆ ಸರಿಯಾದ ಶಿಕ್ಷೆ ನೀಡಿ ಎಂದು ಬಳಕೆದಾರ ರೊಬ್ಬರು ಕಮೆಂಟ್ ಮಾಡಿದ್ದಾರೆ. ಮೊತ್ತೊಬ್ಬರು ಇನ್ನಾದರೂ ಮಕ್ಕಳ ಬಗ್ಗೆ ಜಾಗೃತೆ ವಹಿಸಿ ಎಂದು ಈ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.