Esha Gupta: ಬಾಲಿವುಡ್ ನಟಿಯ ಹಾಟ್ ಹಾಟ್ ಪಿಕ್ಸ್ಗೆ ಪಡ್ಡೆ ಹುಡುಗರ ಹಾರ್ಟ್ಬೀಟ್ ಏರುಪೇರು!
ಟೋಟಲ್ ಧಮಾಲ್, ಬೇಬಿ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಫೇಮ್ ಗಿಟ್ಟಿಸಿಕೊಂಡ ಬಾಲಿವುಡ್ ನಟಿ ಇಶಾ ಗುಪ್ತಾ ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರದಲ್ಲೂ ಸುದ್ದಿಯಲ್ಲಿರುತ್ತಾರೆ. ಅದೇ ರೀತಿ ಬೋಲ್ಡ್ ಡ್ರೆಸ್ ಮೂಲಕ ಫೋಟೋ ಶೂಟ್ ಮಾಡಿಸುವ ನಟಿ ಈ ಭಾರಿ ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ.



ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿರುವ ನಟಿ ಇಶಾ ಗುಪ್ತಾ ತಮ್ಮ ಹಾಟ್ ಫೋಟೋಗಳ ಮೂಲಕ ಪಡ್ಡೆ ಹೈಕ್ಳ ಹೃದಯಕ್ಕೆ ಬೆಂಕಿ ಹಚ್ಚುತ್ತಾರೆ. ಈ ಭಾರಿಯು ನಟಿ ಸಖತ್ ಬೋಲ್ಡ್ ಆಗಿ ಫೋಟೋ ಶೇರ್ ಮಾಡಿದ್ದಾರೆ.

ಇಶಾ ಗುಪ್ತಾ ತನ್ನ ರಜಾ ದಿನಗಳನ್ನು ಗ್ರೀಸ್ ನಲ್ಲಿ ಎಂಜಾಯ್ ಮಾಡಿದ್ದು ಅಲ್ಲಿ ತೆಗೆದಿರುವ ಪೋಟೋವನ್ನು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇಶಾ ಯಾವಾಗಲೂ ತಮ್ಮ ಆಕರ್ಷಕ ಸ್ಟೈಲ್ ನಿಂದ ಹೆಚ್ಚು ಹೈಲೈಟ್ ಆಗುತ್ತಾರೆ. ಬ್ಲ್ಯಾಕ್ ಸ್ವಿಮ್ಸೂಟ್ನಲ್ಲಿ ಇಷಾ ಗುಪ್ತಾ ಸಖತ್ ಹಾಟ್ ಲುಕ್ ನೀಡಿದ್ದಾರೆ.ನಟಿಯ ಈ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಕಪ್ಪು ಈಜು ಉಡುಪಿನಲ್ಲಿ ಅವರ ಸ್ಲಿಂ ಫಿಗರ್ನ್ನು ತೋರಿಸಿದ್ದಾರೆ. ಅವರು ಈ ಲುಕ್ಗೆ ಸನ್ಗ್ಲಾಸ್ ಮತ್ತು ಪ್ರೀಮಿಯಂ ವಾಚ್ ತೊಟ್ಟು ಹೆಚ್ಚು ಆ್ಯಟ್ರಾಕ್ಟೀವ್ ಆಗಿ ಕಂಡರು.

ಇನ್ನೊಂದು ಫೋಟೋದಲ್ಲಿ ನಟಿ ಎಲ್ಲೋ ಕಲರ್ ಔಟ್ಫಿಟ್ ನಲ್ಲಿ ಹಾಟ್ನೆಸ್ ಹೆಚ್ಚಿಸಿದ್ದಾರೆ. ಸಿಂಪಲ್ ಮೇಕಪ್ ನೊಂದಿಗೆ ಸನ್ ಗ್ಲಾಸ್ ತೊಟ್ಟು ಇಶಾ ತನ್ನ ಲುಕ್ ಪೂರ್ಣಗೊಳಿಸಿದರು.

ಬಾಲಿವುಡ್ನಲ್ಲಿ ಬೋಲ್ಡ್ ಉಡುಪು ಧರಿಸಿ ಕಾರ್ಯಕ್ರ ಮಗಳಲ್ಲಿ ಪಾಲ್ಗೊಳ್ಳುವವರ ಪೈಕಿ ಈಶಾ ಗುಪ್ತ ಯಾವತ್ತೂ ಮುಂಚೂಣಿ ಯಲ್ಲಿರುತ್ತಾರೆ. ಈ ಫೋಟೋದಲ್ಲಿಯೂ ನಟಿ ಬಿಳಿ ಸ್ಲೀವ್ಲೆಸ್ ಡ್ರೆಸ್ನಲ್ಲಿ ಸ್ಟನಿಂಗ್ ಲುಕ್ ನೀಡಿದ್ದಾರೆ.

ಇಶಾ ಗುಪ್ತಾ ಗೋರಿ ತೇರೆ ಪ್ಯಾರ್ ಮೇ, ರುಸ್ತಂ, ಕಮಾಂಡೋ 2, ಬಾದ್ಶಾಹೋ, ಪಲ್ಟನ್, ಟೋಟಲ್ ಧಮಾಲ್, ಜನ್ನತ್ 2', ರಾಜ್ 3' ಸೇರಿದಂತೆ ಹಲವು ಬಾಲಿವುಡ್ ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. 2007 ರಲ್ಲಿ ಫೆಮಿನಾ ಮಿಸ್ ಇಂಡಿಯಾದಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದರು. ಅದಕ್ಕೂ ಮುನ್ನ ಮಾಡೆಲಿಂಗ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು.. ಮಿಸ್ ಇಂಡಿಯಾ ಇಂಟರ್ನ್ಯಾಶನಲ್ ಪ್ರಶಸ್ತಿಯನ್ನು ಗೆದ್ದ ನಂತರ, ಇಶಾ ಗುಪ್ತಾ ಸಿನಿಮಾಗಳಲ್ಲಿ ಹೆಚ್ಚಿನ ಆಫರ್ ಗಿಟ್ಟಿಸಿಕೊಂಡಿದ್ದಾರೆ.