Shubman Gill: ಶುಭಮನ್ ಗಿಲ್ ವಿರುದ್ಧ ಕ್ರಿಕೆಟ್ ಅಭಿಮಾನಿಗಳ ಆಕ್ರೋಶ; ಕಾರಣವೇನು?
ರೋಹಿತ್ ಶರ್ಮ ಟೆಸ್ಟ್ ನಿವೃತ್ತಿಯ ಬಳಿಕ ಶುಭಮನ್ಗೆ ಭಾರತ ಟೆಸ್ಟ್ ತಂಡದ ನಾಯಕತ್ವ ಪಟ್ಟ ಕಟ್ಟಲಾಯಿತು. ಇಂಗ್ಲೆಂಡ್ ಸರಣಿ ಅವರಿಗೆ ನಾಯಕನಾಗಿ ಮೊದಲ ಅಗ್ನಿ ಪರೀಕ್ಷೆ. ಭಾರತ 2007 ರ ಬಳಿಕ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ಇದೀಗ ಗಿಲ್ ಸಾಧಿಸಿ ತೋರಿಸುತ್ತಾರ ಎಂದು ಕಾದು ನೋಡಬೇಕಿದೆ.


ಲಂಡನ್: ಭಾರತ ಟೆಸ್ಟ್ ತಂಡದ ನೂತನ ನಾಯಕ ಶುಭಮನ್ ಗಿಲ್(Shubman Gill) ನಾಯಕನಾಗಿ ತಂಡವನ್ನು ಮುನ್ನಡೆಸುವ ಮೊದಲೇ ಅವರ ವಿರುದ್ಧ ಆಕ್ರೋಶದ ವ್ಯಕ್ತವಾಗಿದೆ. ಇಂಗ್ಲೆಂಡ್ ಟೆಸ್ಟ್(England Tests) ಸರಣಿಗೆ ಮುನ್ನ ನಡೆಸಿದ ಫೋಟೋಶೂಟ್ನಲ್ಲಿ ಗಿಲ್ ಬ್ಯಾಟ್(Shubman Gill Bat) ಹಿಡಿದು ಫೋಸ್ ನೀಡಿದ್ದರು. ಈ ವೇಳೆ ಅವರು ತಮ್ಮ ಬ್ಯಾಟ್ನಲ್ಲಿ 'ಫಿನ್ಸ್' ಎಂದು ಬರೆದಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಗಿಲ್ ಕ್ರಿಕೆಟ್ನಲ್ಲಿ ಇನ್ನೂ ಕೂಡ ಬೆಳೆದಿಲ್ಲ. ಹೀಗಿರುವಾಗಲೇ ತಾನೊಬ್ಬ ಶ್ರೇಷ್ಠ ಕ್ರಿಕೆಟಿಗ ಎನ್ನುವುದು ಅವರ ತಲೆಯಲ್ಲಿದೆ. ತಮ್ಮನ್ನು ತಾವೇ ವೈಭವೀಕರಿಸಿಕೊಂಡಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಅವರ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರಂತ ದಿಗ್ಗಜ ಆಟಗಾರರು ಕೂಡ ಕ್ರಿಕೆಟ್ನಲ್ಲಿ ಲೆಕ್ಕವಿಲ್ಲದಷ್ಟು ಸಾಧನೆ ಮಾಡಿದ್ದರೂ ಒಂದು ದಿನ ಕೂಡ ತಾನೊಬ್ಬ ಖ್ಯಾತ ಕ್ರಿಕೆಟರ್ ಎಂದು ಪ್ರಚಾರ ಮಾಡಿದರಲ್ಲ. ಗಿಲ್ ಭಾರತ ಪರ ಕ್ರಿಕೆಟ್ ಆಡಲು ಆರಂಭಿಸಿ ಕೇವಲ 5 ವರ್ಷ ಆಗಿದೆ. ಆದಾಗಲೇ ಅವರು ಎಲ್ಲವನ್ನು ಸಾಧಿಸಿ ಬೆಟ್ಟಿ ಎನ್ನುವಂತೆ ನಡೆದುಕೊಂಡಿರುವುದು ಅವರ ಕ್ರಿಕೆಟ್ ವೃತ್ತಿಬದುಕಿಗೆ ಮುಳುವಾಗುವ ಸಾಧ್ಯತೆ ಇದೆ.
ರೋಹಿತ್ ಶರ್ಮ ಟೆಸ್ಟ್ ನಿವೃತ್ತಿಯ ಬಳಿಕ ಶುಭಮನ್ಗೆ ಭಾರತ ಟೆಸ್ಟ್ ತಂಡದ ನಾಯಕತ್ವ ಪಟ್ಟ ಕಟ್ಟಲಾಯಿತು. ಇಂಗ್ಲೆಂಡ್ ಸರಣಿ ಅವರಿಗೆ ನಾಯಕನಾಗಿ ಮೊದಲ ಅಗ್ನಿ ಪರೀಕ್ಷೆ. ಭಾರತ 2007 ರ ಬಳಿಕ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ಇದೀಗ ಗಿಲ್ ಸಾಧಿಸಿ ತೋರಿಸುತ್ತಾರ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ IND vs ENG: ಮೊದಲನೇ ಟೆಸ್ಟ್ಗೆ ಭಾರತದ ಪ್ಲೇಯಿಂಗ್ XI ಆರಿಸಿದ ಸಂಜಯ್ ಬಾಂಗರ್!
ಭಾರತ ಪರ ಇದುವರೆಗೆ 32 ಟೆಸ್ಟ್ ಪಂದ್ಯ ಆಡಿರುವ ಶುಭಮನ್ ಗಿಲ್ 1893 ರನ್ ಬಾರಿಸಿದ್ದಾರೆ. ಈ ಪೈಕಿ 5 ಶತಕ ಮತ್ತು 7 ಅರ್ಧಶತಕ ಸಿಡಿಸಿದ್ದಾರೆ. ಏಕದಿನದಲ್ಲಿ 55 ಮತ್ತು ಟಿ20ಯಲ್ಲಿ 21 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 2775, ಟಿ20ಯಲ್ಲಿ 578 ರನ್ ಗಳಿಸಿದ್ದಾರೆ.
ಮೊದಲ ಟೆಸ್ಟ್ಗೆ ಭಾರತ ಸಂಭಾವ್ಯ ತಂಡ
ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಶುಭ್ಮನ್ ಗಿಲ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರಿಷಭ್ ಪಂತ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ.