Kareena Kapoor: ಪಾಕ್ ಡಿಸೈನರ್ ಜೊತೆ ಪೋಸ್ ನೀಡಿದ ನಟಿ ಕರೀನಾ! ನೆಟ್ಟಿಗರು ಫುಲ್ ಗರಂ
Pahalgam Terror Attack: ಪಹಲ್ಗಾಮ್ ದಾಳಿಯ ಬಳಿಕ ದುಬೈನಲ್ಲಿ ಪಾಕಿಸ್ತಾನ ಮೂಲದ ಡಿಸೈನರ್ ಜೊತೆ ಬಾಲಿವುಡ್ ನಟಿ ಕರೀನಾ ಕಪೂರ್ ಫೋಟೋ ಗೆ ಪೋಸ್ ನೀಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಕರೀನಾ ಕಪೂರ್ ಮೇಲೆ ಮುಗಿಬಿದ್ದಿದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ..



ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಬಳಿಕವೂ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಪಾಕಿಸ್ತಾನಿ ಡಿಸೈನರ್ ಫರಾಜ್ ಮನನ್ ಜೊತೆ ಫೋಟೋವೊಂದಕ್ಕೆ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ಫರಾಜ್ ಮನನ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ನಟಿ ಕರೀನಾ ಕಪೂರ್ ದುಬೈ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಪಾಕಿಸ್ತಾನಿ ಡಿಸೈನರ್ ಫರಾಜ್ ಮನನ್ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನದ ನಡುವೆ ತೀವ್ರ ಉದ್ವಿಗ್ನತೆ ಉಂಟಾಗಿದ್ದು ನಟಿಯ ಈ ನಡೆಗೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.

ಈ ಫೋಟೋವನ್ನು ಫರಾಜ್ ಮನನ್ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಫರಾಜ್ ಮನನ್ ವಿತ್ ಓಜಿ ಎಂದು ಬರೆದು ಕರೀನಾ ಜೊತೆಗಿನ ಫೋಟೋವನ್ನು ಶೇರ್ ಮಾಡಿದ್ದರು. ಆದರೆ ಈ ಫೋಟೋ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಭಾರತ ಪಾಕಿಸ್ತಾನ ಯುದ್ಧದಲ್ಲಿ ತೊಡಗಿರುವಾಗಲೇ, ಕರೀನಾ ಕಪೂರ್ ಪಾಕಿಸ್ತಾನಿ ಡಿಸೈನರ್ ಫರಾಜ್ ಮನನ್ ಜೊತೆ ಫೋಟೋಗೆ ಪೋಸ್ ನೀಡಿರುವುದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದಾರೆ

ಕಳೆದ ವರ್ಷ, ಕರೀನಾ ಪ್ಯಾಲೆಸ್ಟೈನ್ ಗೆ ಬೆಂಬಲ ವ್ಯಕ್ತಪಡಿಸಿದ್ದರು, ಆದರೆ ಈಗ ಅವರು ತಮ್ಮ ಸ್ವಂತ ದೇಶಕ್ಕೆ ಬೆಂಬಲ ನೀಡದೆ ಫೋಟೋಶೂಟ್ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ನಟಿ ಕರೀನಾ ಕಪೂರ್ ನಡೆಗೆ ನೆಟ್ಟಿಗರು ಕಿಡಿಕಾರಿದ್ದಾರೆ. ಬಳಕೆದಾರರೊಬ್ಬರು ಬಾಲಿವುಡ್ ಸೆಲೆಬ್ರಿಟಿಗಳಿಗೆ ದೇಶದ ಬಗ್ಗೆ ಯಾವುದೇ ಕರ್ತವ್ಯವಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಇಂತಹ ಸೆಲೆಬ್ರಿಟಿಗಳಿಗೆ ನಟಿಸಲು ಅವಕಾಶವೇ ನೀಡಬಾರದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಕರೀನಾ ಕಪೂರ್ ಘಟನೆಯನ್ನು ಖಂಡಿಸಿ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಪಹಲ್ಗಾಮ್ ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ಹೃದಯ ಮಿಡಿಯುತ್ತಿದೆ. ಕಳೆದುಹೋದ ಜೀವಗಳಿಗಾಗಿ ಪ್ರಾರ್ಥಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಸದ್ಯ ಕರೀನಾ ʻದೈರಾ' ಎಂಬ ಸಿನಿಮಾದಲ್ಲಿ ಮಲೆಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ರಾಝಿ ಖ್ಯಾತಿಯ ಮೇಘನಾ ಗುಲ್ಜಾರ್ ನಿರ್ದೇಶನ ಮಾಡಿದ್ದಾರೆ.