ಹೆಣ್ಣು ಮಕ್ಕಳನ್ನು ಪ್ರೀತಿಸಿ, ಗೌರವಿಸಿದಾಗ ಮಾತ್ರ ಹೆಣ್ಣು ಮಕ್ಕಳು ಹೊರಗೆ ಓಡಾಡುವಾಗ ಅಭದ್ರತೆ ಕಾಡುವುದಿಲ್ಲ: ರೋರಿಂಗ್ ಸ್ಟಾರ್ ಶ್ರೀಮುರಳಿ
ಸ್ಟೂಡೆಂಟ್ ಲೈಪಲ್ಲಿ ಎಂಜಾಯ್ ಮಾಡಬೇಕು. ಆದರೆ ಎಂಜಾಯ್ ಮಾಡಿ ಹಾಳಾಗಬೇಕು ಎಂದು ಎಲ್ಲೂ ಬರೆದಿಲ್ಲ. ಎಂಜಾಯ್ ಮಾಡುತ್ತಾ ಓದಿನ ಕಡೆ ಗಮನವಿಟ್ಟು ಗಂಭೀರವಾಗಿ ಪರಿಗಣಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ನಿಜ. ಆದರೆ ಎಂಜಾಯ್ ಮಾಡಿ ಹಾಳಾಗಬೇಕು ಎಂದು ಎಲ್ಲೂ ಬರೆದಿಲ್ಲ. ನಿಮಗೆ ಪಾಠ ಮಾಡುವ ಗುರುಗಳು ತಮ್ಮ ಮನೆಯಲ್ಲಿ ಎನೇ ಕಷ್ಟ ಮತ್ತು ತೊಂದರೆಗಳಿದ್ದರೂ ಅದನ್ನು ಬದಿಗಿಟ್ಟು ನಿಮಗೆ ಪಾಠ ಮಾಡುತ್ತಾರೆ


ಚಿಕ್ಕಬಳ್ಳಾಪುರ: ಹೆಣ್ಣು ಮಕ್ಕಳನ್ನು ಪ್ರೀತಿಸಿ, ಗೌರವಿಸಿ, ಅವರನ್ನು ಸ್ನೇಹಿತರಂತೆ ಕಾಳಜಿ ವಹಿಸಿ ದಾಗ ಮಾತ್ರ ಹೆಣ್ಣು ಮಕ್ಕಳು ಹೊರಗೆ ಓಡಾಡುವಾಗ ಅಭದ್ರತೆ ಕಾಡುವುದಿಲ್ಲ ಎಂದು ಚಲನಚಿತ್ರ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿಪ್ರಾಯಪಟ್ಟರು. ನಗರ ಹೊರವಲಯದ ಎಸ್ ಜೆ ಸಿ ತಾಂತ್ರಿಕ ಮಹಾವಿದ್ಯಾಲಯದ ಬಿ.ಜಿ.ಎಸ್ ಆಡಿಟೋರಿಯಂ ನಲ್ಲಿ ಮಂಗಳವಾರ ಎಸ್ ಜೆ ಸಿ ತಾಂತ್ರಿಕ ಮಹಾವಿದ್ಯಾಲಯ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಉತ್ಸವ “ಸಂಭ್ರಮ-2025" ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಎಲ್ಲ ಕಡೆ ಗಂಡು ಮಕ್ಕಳ ಧ್ವನಿ ಜೋರಾಗಿರುತ್ತದೆ ಆದರೆ ಚಿಕ್ಕಬಳ್ಳಾಪುರ ಎಸ್ ಜೆ ಸಿಐಟಿ ವಿದ್ಯಾರ್ಥಿನಿಯರ ಧ್ವನಿ ಜೋರಾ ಗಿದೆ ಅದು ಹಾಗೇಯೇ ಇರಲಿ ಎಂದರು.
ಸ್ಟೂಡೆಂಟ್ ಲೈಪಲ್ಲಿ ಎಂಜಾಯ್ ಮಾಡಬೇಕು. ಆದರೆ ಎಂಜಾಯ್ ಮಾಡಿ ಹಾಳಾಗಬೇಕು ಎಂದು ಎಲ್ಲೂ ಬರೆದಿಲ್ಲ. ಎಂಜಾಯ್ ಮಾಡುತ್ತಾ ಓದಿನ ಕಡೆ ಗಮನವಿಟ್ಟು ಗಂಭೀರವಾಗಿ ಪರಿಗಣಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ನಿಜ. ಆದರೆ ಎಂಜಾಯ್ ಮಾಡಿ ಹಾಳಾಗಬೇಕು ಎಂದು ಎಲ್ಲೂ ಬರೆದಿಲ್ಲ. ನಿಮಗೆ ಪಾಠ ಮಾಡುವ ಗುರುಗಳು ತಮ್ಮ ಮನೆಯಲ್ಲಿ ಎನೇ ಕಷ್ಟ ಮತ್ತು ತೊಂದರೆಗಳಿದ್ದರೂ ಅದನ್ನು ಬದಿಗಿಟ್ಟು ನಿಮಗೆ ಪಾಠ ಮಾಡುತ್ತಾರೆ. ಏಕೆಂದರೆ ನಿಮಗೆ ಅವರ ಕಷ್ಟ ತಿಳಿಯಬಾರದು ಎಂದು. ಅದೇ ರೀತಿ ನಿಮ್ಮ ಪೋಷಕರು ಸಹಾ ನಿಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದ ತಮ್ಮ ಕಷ್ಟ ನಿಮಗೆ ತಿಳಿಸುವುದಿಲ್ಲ. ಈ ವಯಸ್ಸಿನಲ್ಲಿ ಇದನ್ನೆಲ್ಲಾ ಎಷ್ಟರ ಮಟ್ಟಿಗೆ ಅರ್ಥ ಮಾಡಿ ಕೊಂದು ಬದುಕುತ್ತೀರೋ ನಿಮ್ಮ ಭವಿಷ್ಯ ಅಷ್ಟು ಗಟ್ಟಿಯಾಗಿರುತ್ತದೆ. ವಿದ್ಯಾಭ್ಯಾಸದಲ್ಲಿ ಆಲೋ ಚನಾ ಶಕ್ತಿ, ತಾಳ್ಮೆ ಇಟ್ಟು, ಪೋಷಕರನ್ನು ಪ್ರೀತಿಸಿ, ಗುರುಗಳನ್ನು ಗೌರವಿಸಿ, ಭವಿಷ್ಯದ ಕಡೆ ಗಮನವಿದ್ದರೆ ಯಶಸ್ಸು ನಿಮ್ಮ ಮುಂದೆ ಇರುತ್ತದೆ. ಅದನ್ನು ಓಡಿಸಿಕೊಂಡು ಹೋಗುವವರಾಗ ಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಇದನ್ನೂ ಓದಿ: Actor Srinath: ದಳಪತಿ ವಿಜಯ್ ಪಕ್ಷಕ್ಕೆ ಮತ್ತಷ್ಟು ಬಲ; ಟಿವಿಕೆಗೆ ಬೆಂಬಲ ನೀಡಿದ ಹಿರಿಯ ನಟ ಶ್ರೀನಾಥ್
ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ. ಮಕ್ಕಳ ನಡತೆ ಬಗ್ಗೆ ನೆರೆ ಹೊರೆಯವರು ಕೆಟ್ಟದಾಗಿ ಮಾತನಾಡಿದಾಗ ಪೋಷಕರಿಗೆ ಆಗುವ ಅವಮಾನ ಬಹಳ ದೊಡ್ಡದು.
ಆದುದರಿಂದ ಮಕ್ಕಳ ವರ್ತನೆ ನಾಗರೀಕವಾಗಿ ಉತ್ತಮವಾಗಿರಬೇಕು, ಹೇಗೆಂದರೆ ಗೌತಮಬುದ್ದ ಹೇಳಿದಂತೆ ಜೇನು ಹುಳು ವಿವೇಕದಿಂದ ಎಲ್ಲಿ ಕುಳಿತು ಕೊಳ್ಳ ಬೇಕು, ಎಲ್ಲಿ ಕುಳಿತು ಕೊಳ್ಳಬಾರದು ಎಂದು ತೀರ್ಮಾನಿಸುತ್ತದೆಯೋ ಹಾಗೆ ಮತ್ತು ಜೇನು ಹುಳು ಹೂವಿಗೆ ತೊಂದರೆ ಕೊಡದೆ ಮಕರಂಧ ಹೀರಿಕೊಂದು ಪರರಿಗಾಗಿ ಜೇನು ತಯಾರಿಸುವಂತೆ ಸಂಭ್ರಮದಿಂದ ಜೀವಿಸಬೇಕು. ಪರರಿಗಾಗಿ ಬದುಕಿದಾಗಲೇ ಜನ್ಮ ಸಾರ್ಥಕ ಎಂದರು.

ಪಾಂಡವರಿಗೆ ಕುಂತಿ ಉತ್ತಮ ಸಂಸ್ಕಾರ ನೀಡಿದಂತೆ, ಚಿಕ್ಕವಯಸ್ಸಿನಲ್ಲಿ ಮಕ್ಕಳಿಗೆ ಪೋಷಕರು ನೀಡುವ ಸಂಸ್ಕಾರವನ್ನು ಮಕ್ಕಳು ಉಳಿಸಿಕೊಂಡಾಗ ಮಾತ್ರ ಧರ್ಮನಿಷ್ಟ, ನ್ಯಾಯಪರ, ಉತ್ತಮ ಸಂಸ್ಕಾರವಂತರಾಗಲು ಸಾಧ್ಯ. ಇಲ್ಲದಿದ್ದರೆ ಗಾಂಧಾರಿಯಂತೆ ಕಣ್ಣಿಗೆ ಬಟ್ಟೆ ಕಟ್ಟಿ ಕೊಂಡು ಕೌರವರಿಗೆ ಸಂಸ್ಕಾರ ನೀಡಲಿಲ್ಲ. ಅದಕ್ಕೆ ಕೌರವರು ಅಧರ್ಮಿಯ, ನ್ಯಾಯ ವಿರೋಧಿಗಳಾಗಿ ಅಂತ್ಯ ಗೊಂಡರು.
ಪ್ರೇರಣೆಗಾಗಿ ಕೆಲ ವ್ಯೆಕ್ತಿಗಳು ಭಾಷಣ ಕೇಳಿದರೆ ಜೋಷ್ ಬರಬೇಕು, ಆದರೆ ಕೆಲವರು ಜೋಷ್ ಗಾಗಿ ಅಲ್ಲಾ ರೋಷ್ ಗಾಗಿ ಬಾಷಣ ಮಾಡುತ್ತಾರೆ. ಇಂತಹ ಸಮಯದಲ್ಲಿ ನಮ್ಮ ಬುದ್ದಿ ನಮಗೆ ಇರಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಶಾಖಾ ಮಠದ ಕಾರ್ಯದರ್ಶಿ ಮಂಗಳಾನಾಥಸ್ವಾಮೀಜಿ, ಉದ್ಯಮಿ ರವಿ ಚಂದ್ರ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಮುಖ್ಯ ಆಡಳಿತಾಧಿಕಾರಿ ಡಾ.ಎನ್.ಶಿವರಾಮರೆಡ್ಡಿ, ಆಡಳಿತ ಮಂಡಳಿ ಸದಸ್ಯೆ ಡಾ.ಅನಿಲ್, ಪ್ರಾಂಶುಪಾಲ ಡಾ.ಜಿ.ಟಿ.ರಾಜು ಎಸ್.ಜೆ.ಸಿ.ಐ.ಟಿ ಆಡಳಿತ ಅಧಿಕಾರಿ ಜಿ.ಆರ್. ರಂಗಸ್ವಾಮಿ , ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ರಾಜಶೇಖರ್, ಡಾ.ಭಾರತಿ, ಡಾ.ತ್ಯಾಗರಾಜ್, ಡಾ.ನಾರಾಯಣ್,ಪ್ರೋ.ಜಮುನಾಕುಮಾರ್, ಕಾಲೇಜಿನ ಭೋಧಕ,ಭೋಧಕೇತರ ಸಿಬ್ಬಂಧಿ,ವಿದ್ಯಾರ್ಥಿಗಳು ಇದ್ದರು.