Salman Khan: ಅಂದಾಜ್ ಅಪ್ನಾ ಅಪ್ನಾ ಚಿತ್ರ ರೀ ರಿಲೀಸ್ ಬೆನ್ನಲ್ಲೇ ನಟ ಸಲ್ಮಾನ್ ಖಾನ್ ಹಾಟ್ ಫೋಟೊ ವೈರಲ್!
ಬಾಲಿವುಡ್ ಖ್ಯಾತ ನಟ ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್(Salman Khan) ಜತೆಯಾಗಿ ನಟಿಸಿದ್ದ ಬಾಲಿವುಡ್ನ ಹಾಸ್ಯ ಸಿನಿಮಾ ‘ಅಂದಾಜ್ ಅಪ್ನಾ ಅಪ್ನಾ’ ರೀ ರಿಲೀಸ್ ಆಗಿದೆ. ಈ ಸಿನಿಮಾ ಬಿಡುಗಡೆಯಾಗಿ ಮೂರೇ ದಿನದಲ್ಲಿ 1.2 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದರ ಬೆನ್ನಲ್ಲೆ ನಟ ಸಲ್ಮಾನ್ ಖಾನ್ ಬಾಡಿ ಬಿಲ್ಡ್ ಮಾಡಿರುವ ಶರ್ಟ್ ಲೆಸ್ ಫೋಟೊವೊಂದು ವೈರಲ್ ಆಗಿದೆ. ನಟ ಸಲ್ಮಾನ್ ಖಾನ್ ಅವರು ಸೋಶಿಯಲ್ ಮಿಡಿಯಾದಲ್ಲಿ ಬಹಳ ಆ್ಯಕ್ಟಿವ್ ಆಗಿ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದು ನಟನ ಈ ಫೋಟೊಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.



ಸಲ್ಮಾನ್ ಖಾನ್ 59ನೇ ವಯಸ್ಸಿನಲ್ಲಿಯೂ ದೇಶದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಫೇಮಸ್ ಆಗಿದ್ದಾರೆ. ಸಿನಿಮಾ, ಬಿಗ್ ಬಾಸ್ ರಿಯಾಲಿಟಿ ಶೋಗಳು ಇವರ ಪಾಪ್ಯೂಲ್ಯಾರಿಟಿ ಹೆಚ್ಚಿಸಿದ್ದು, ಈಗಲೂ ಅವರು ನೋಡಲು ಬಹಳ ಯಂಗ್ ಆಗಿ ಕಾಣುತ್ತಾರೆ. ಇತ್ತೀಚೆಗಷ್ಟೇ ನಟ ಸಲ್ಮಾನ್ ಖಾನ್ ಅವರು ಬಾಡಿ ಬಿಲ್ಡ್ ಮಾಡಿರುವ ಶರ್ಟ್ ಲೆಸ್ ಫೋಟೋ ಹಂಚಿಕೊಂಡಿದ್ದು, ಇದು ಅಭಿಮಾನಿಗಳ ಗಮನ ಸೆಳೆಯುವಂತೆ ಮಾಡಿದೆ.

ವೈರಲ್ ಆದ ಚಿತ್ರಗಳಲ್ಲಿ ನಟ ಸಲ್ಮಾನ್ ಖಾನ್ ಸ್ವಿಮ್ಮಿಂಗ್ ಪೂಲ್ನಲ್ಲಿ ರಿಲ್ಯಾಕ್ಸ್ ಮೂಡ್ನಲ್ಲಿರುವಂತೆ ಕಾಣಬಹುದು. ಶರ್ಟ್ ಲೆಸ್ ಆಗಿ ಬಾಡಿ ಬಿಲ್ಡ್ ಮಾಡಿದ್ದ ಈ ಫೋಟೊ ಕ್ಲೋಸ್-ಅಪ್ ಶಾಟ್ ನಲ್ಲಿ ಸೆರೆಹಿಡಿಯಲಾಗಿದೆ. ನಟ ಸಲ್ಮಾನ್ ಖಾನ್ ಅವರಿಗೆ 59 ಆಗಿದ್ದರೂ ಅವರ ದೇಹವು ಬಹಳ ಸದೃಢವಾಗಿ ಅಭಿಮಾನಿಗಳ ಗಮನ ಸೆಳೆಯುವಂತಾಗಿದೆ. ನಟ ಸಲ್ಮಾನ್ ಖಾನ್ ಅಭಿನಯದ ಅಂದಾಜ್ ಅಪ್ನಾ ಅಪ್ನಾ ಸಿನಿಮಾ ಎಪ್ರಿಲ್ 25ರಂದು ಚಿತ್ರಮಂದಿರಗಳಲ್ಲಿ ರೀ ರಿಲೀಸ್ ಆಗಿದ್ದು, ಅದೇ ಸಿನಿಮಾದ ಡೈಲಾಗ್ ಅನ್ನು ಕ್ಯಾಪ್ಶನ್ ಆಗಿ ಬರೆದುಕೊಂಡು ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ.

ಈ ಫೋಟೊಗೆ ನೆಟ್ಟಿಗರು ಕಮೆಂಟ್ ನ ಸುರಿಮಳೆ ಗೈಯುತ್ತಿದ್ದಾರೆ. ಸಲ್ಲು ಭಾಯ್ ಅಂದಾಜ್ ಅಪ್ನಾ ಅಪ್ನಾ ಸಿನಿಮಾದ ಅದೇ ಲುಕ್ ನಲ್ಲಿ ಈಗಲೂ ಕಾಣಿಸುತ್ತಿದ್ದೀರಾ ಎಂದು ಬರೆದುಕೊಂಡಿದ್ದಾರೆ. ನಮ್ಮ ಹುಲಿ ಮತ್ತೊಮ್ಮೆ ಘರ್ಜಿಸಲು ಸಿದ್ಧವಾಗಿದೆ ಎಂದು ಮತ್ತೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಈ ಮೂಲಕ ನಟ ಸಲ್ಮಾನ್ ಖಾನ್ ಅವರ ಸ್ವಿಮ್ಮಿಂಗ್ ಪೂಲ್ನ ಶರ್ಟ್ ಲೆಸ್ನ ಫೋಟೋ ಅಭಿಮಾನಿಗಳ ಮನಗೆಲ್ಲುತ್ತಿದೆ.

ರಾಜ್ಕುಮಾರ್ ಸಂತೋಷಿ ನಿರ್ದೇಶಿಸಿದ ಮತ್ತು ವಿನಯ್ ಪಿಕ್ಚರ್ಸ್ ಅಡಿಯಲ್ಲಿ ಅಂದಾಜ್ ಅಪ್ನಾ ಅಪ್ನಾ ಚಿತ್ರವು 1994 ರಲ್ಲಿ ತೆರೆಕಂಡಿತ್ತು. ಈ ಸಿನಿಮಾದಲ್ಲಿ ನಟ ಅಮೀರ್ ಮತ್ತು ಸಲ್ಮಾನ್ ಇಬ್ಬರೂ ಕೂಡ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ರವೀನಾ ಟಂಡನ್ ಕೂಡ ಈ ಸಿನಿಮಾದಲ್ಲಿ ಲೀಡ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ತಂದೆಯ ಸಂಪತ್ತನ್ನು ಪಡೆಯಲು ಪ್ರಯತ್ನಿಸುವ ನಾಯಕಿಗೆ ಸಾಥ್ ನೀಡುವ ಕಾಮಿಡಿ ಕಂ ಆ್ಯಕ್ಷನ್ ಸಿನಿಮಾ ಈಗ ರೀ ರಿಲೀಸ್ ಆದ ಮೇಲೆ ಅಭಿಮಾನಿಗಳನ್ನು ರಂಜಿಸುತ್ತಿದೆ.

ಅಂದಾಜ್ ಅಪ್ನಾ ಅಪ್ನಾ ಸಿನಿಮಾ ಮರು ಬಿಡುಗಡೆಯಾದ ಮೊದಲ ದಿನ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಮೂರು ದಿನಗಳಲ್ಲಿ, ಚಿತ್ರವು 1.2 ಕೋಟಿ ರೂ. ಅಧಿಕ ಗಳಿಸಿದೆ. ಸಿನಿಮಾ ಮೊದಲ ಬಾರಿಗೆ ತೆರೆಕಂಡಾಗ ಆರಂಭದಲ್ಲಿ ಯಶಸ್ಸು ಕಾಣಲಿಲ್ಲ. ಬಳಿಕ ಟಿವಿಯಲ್ಲಿ ಪ್ರಸಾರವಾದ ಬಳಿಕ ಈ ಸಿನಿಮಾ ಹೆಚ್ಚಿನ ಜನರನ್ನು ಸೆಳೆಯಿತು. ಈಗ ರೀ ರಿಲೀಸ್ನಲ್ಲಿ ಬಾಕ್ಸ್ ಆಫೀಸ್ ಧೂಳೆಬ್ಬಿಸುವಂತೆ ಮಾಡಿದೆ.