Deve Gowda: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 11 ವರ್ಷಗಳ ಸಾಧನೆಗೆ ದೇವೇಗೌಡ ಹರ್ಷ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಸರ್ಕಾರದ 11 ವರ್ಷಗಳ ಆಡಳಿತವನ್ನು ಶ್ಲಾಘಿಸಿದ್ದಾರೆ. ಭಾರತದ ಭವಿಷ್ಯದ ದೃಷ್ಟಿಕೋನವು “ನಿರ್ಭಯ, ಧೈರ್ಯಶಾಲಿ ಮತ್ತು ರಚನಾತ್ಮಕ”ವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.


ಬೆಂಗಳೂರು: ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರದ 11 ವರ್ಷಗಳ ಸಾಧನೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (H.D.Deve Gowda) ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಸೋಮವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ದೇವೇಗೌಡ, ನರೇಂದ್ರ ಮೋದಿ (Prime Minister Narendra Modi) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (National Democratic Alliance) ಸರ್ಕಾರದ 11 ವರ್ಷಗಳ ಆಡಳಿತವನ್ನು ಶ್ಲಾಘಿಸಿದ್ದಾರೆ. ಭಾರತದ ಭವಿಷ್ಯದ ದೃಷ್ಟಿಕೋನವು “ನಿರ್ಭಯ, ಧೈರ್ಯಶಾಲಿ ಮತ್ತು ರಚನಾತ್ಮಕ”ವಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಜೆಡಿಎಸ್ ಎನ್‌ಡಿಎಯ ಭಾಗವಾಗಿದ್ದು ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಮೋದಿ ನೇತೃತ್ವದ ಸಂಪುಟದಲ್ಲಿ ಸಚಿವರಾಗಿದ್ದಾರೆ.
Today marks 11 years of Shri @narendramodi led NDA govt. A lot has been achieved till now, & its vision into India’s future remains fearless, bold and constructive. My best wishes to this govt to do more good, make more history and work for the larger common good always.@PMOIndia pic.twitter.com/KxqwtMB3RM
— H D Devegowda (@H_D_Devegowda) June 9, 2025
ಇಂದು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ 11 ವರ್ಷಗಳಾಗಿವೆ. ಇದುವರೆಗೆ ಹಲವು ಸಾಧನೆಗಳನ್ನು ಮಾಡಿದೆ. ಅಲ್ಲದೇ ಭಾರತದ ಭವಿಷ್ಯದ ದೃಷ್ಟಿಕೋನವು ನಿರ್ಭಯ, ಧೈರ್ಯಶಾಲಿ ಹಾಗೂ ರಚನಾತ್ಮಕವಾಗಿದೆ ಎಂದು ದೇವೇಗೌಡ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ಈ ಸರ್ಕಾರವು ಇನ್ನಷ್ಟು ಒಳಿತನ್ನು ಮಾಡಲಿ. ಇತಿಹಾಸ ರಚಿಸಲಿ ಮತ್ತು ಸದಾ ಸಾರ್ವಜನಿಕ ಒಳಿತಿಗಾಗಿ ಕಾರ್ಯನಿರ್ವಹಿಸಲಿ. ಇದಕ್ಕಾಗಿ ನನ್ನ ಶುಭಾಶಯಗಳು ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 2024ರ ಜೂ. 9ರಂದು 3ನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು. ಈಗಿನ ಮೋದಿ ಸರ್ಕಾರವು ತನ್ನ ಮೂರನೇ ಅವಧಿಯ ಮೊದಲ ವರ್ಷವನ್ನು ಸೋಮವಾರ ಪೂರೈಸಿದೆ.