SL vs BAN: ಎರಡನೇ ಪಂದ್ಯ ಗೆದ್ದು ಟೆಸ್ಟ್ ಸರಣಿಯನ್ನು ಮುಡಿಗೇರಿಸಿಕೊಂಡ ಶ್ರೀಲಂಕಾ!
ಪಥುಮ್ ನಿಸಾಂಕ ಶತಕ ಹಾಗೂ ಪ್ರಭತ್ ಜಯಸೂರ್ಯ ಅವರ ಬೌಲಿಂಗ್ ಸಹಾಯದಿಂದ ಶ್ರೀಲಂಕಾ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಇನಿಂಗ್ಸ್ ಹಾಗೂ 78 ರನ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಮುಡಿಗೇರಿಸಿಕೊಂಡಿತು.

ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ.

ಕೊಲಂಬೊ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಶ್ರೀಲಂಕಾ ತಂಡ (Sri lanka), ಎರಡನೇ ಟೆಸ್ಟ್ ಪಂದ್ಯದಲ್ಲಿ(SL vs BAN) ಪ್ರವಾಸಿ ಬಾಂಗ್ಲಾದೇಶ ತಂಡದ ವಿರುದ್ಧ ಇನಿಂಗ್ಸ್ ಮತ್ತು 78 ರನ್‌ಗಳಿಂದ ಭರ್ಜರಿ ಗೆಲುವು ಪಡೆದಿದೆ. ಇದರೊಂದಿಗೆ ಶ್ರೀಲಂಕಾ ತಂಡ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಮುಡಿಗೇರಿಸಿಕೊಂಡಿದೆ. ಈ ಸರಣಿಯ ಮೊದಲನೇ ಪಂದ್ಯ ಡ್ರಾ ಆಗಿತ್ತು. ಸ್ಪಿನ್ನರ್ ಪ್ರಭತ್ ಜಯಸೂರ್ಯ (Prabhat Jayasuriya) ಅವರ 5 ವಿಕೆಟ್‌ಗಳ ನೆರವಿನಿಂದ, ಶ್ರೀಲಂಕಾ ತಂಡ ಎರಡನೇ ಟೆಸ್ಟ್‌ನ ನಾಲ್ಕನೇ ದಿನದಂದು ಬಾಂಗ್ಲಾದೇಶವನ್ನು 133 ರನ್‌ಗಳಿಗೆ ಆಲೌಟ್ ಮಾಡಿತು. ಪ್ರಥಮ ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡಿದ ಬಾಂಗ್ಲಾದೇಶ 247 ರನ್‌ಗಳನ್ನು ಗಳಿಸಿತ್ತು. ಶಾದ್ಮನ್ ಇಸ್ಲಾಂ ಬಾಂಗ್ಲಾ ಪರ 46 ರನ್ ಗಳಿಸಿ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.
ಪಥುಮ್ ನಿಸಾಂಕ ಅವರ ಶತಕದೊಂದಿಗೆ ಶ್ರೀಲಂಕಾ ಪ್ರಥಮ ಇನಿಂಗ್ಸ್‌ನಲ್ಲಿ 458 ರನ್‌ಗಳನ್ನು ಗಳಿಸಿತು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ ಆತಿಥೇಯ ತಂಡ 211 ರನ್‌ಗಳ ಮುನ್ನಡೆ ಸಾಧಿಸಿತ್ತು. ನಿಸಾಂಕ ಅವರ 158 ರನ್‌ಗಳನ್ನು ಗಳಿಸಿದ್ದರ ಫಲವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಲ್ಲದೆ ಈ ಸರಣಿಯಲ್ಲಿ ಅವರು ಎರಡು ಶತಕಗಳು ಸೇರಿ ಒಟ್ಟು 369 ರನ್‌ಗಳನ್ನು ಕಲೆ ಹಾಕಿದ್ದರು. ಹಾಗಾಗಿ ಅವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕೂಡ ಸ್ವೀಕರಿಸಿದ್ದಾರೆ.
BAN vs SL: ಬಾಂಗ್ಲಾದೇಶ ವಿರುದ್ಧ ಸತತ ಎರಡನೇ ಶತಕ ಬಾರಿಸಿದ ಪಥುಮ್ ನಿಸಾಂಕ!
33 ರನ್‌ಗಳ ಅಂತರದಲ್ಲಿ 5 ವಿಕೆಟ್ ಪತನ
ಮೂರನೇ ದಿನದಂದು ಬಾಂಗ್ಲಾದೇಶ ತಂಡ 6 ವಿಕೆಟ್‌ಗಳಿಗೆ 115 ರನ್ ಗಳಿಸಿತ್ತು. ಆದರೆ ನಾಲ್ಕನೇ ದಿನ ಅರ್ಧ ಗಂಟೆಯೊಳಗೆ ಬಾಂಗ್ಲಾದೇಶ ಇನ್ನುಳಿದ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡ ಕೊನೆಯ 5 ವಿಕೆಟ್‌ಗಳನ್ನು ಕೇವಲ 33 ರನ್‌ಗಳಿಗೆ ಕಳೆದುಕೊಂಡಿತು. ಶ್ರೀಲಂಕಾದ ಸ್ಪಿನ್ನರ್ ಪ್ರಭತ್ ಜಯಸೂರ್ಯ ಗರಿಷ್ಠ 5 ವಿಕೆಟ್‌ಗಳನ್ನು ಪಡೆದರು. ಅವರಲ್ಲದೆ, ಧನಂಜಯ್ ಡಿ ಸಿಲ್ವಾ ಮತ್ತು ತರಿಂಡು ರತ್ನಾಯಕೆ ತಲಾ ಎರಡೆರಡು ವಿಕೆಟ್‌ಗಳನ್ನು ಪಡೆದರು. ಅಸಿತಾ ಫೆರ್ನಾಂಡೊ ಒಂದು ವಿಕೆಟ್ ಪಡೆದರು.
Awards | Sri Lanka vs Bangladesh Test Series 2025 | #SLvsBAN
— Sri Lanka Cricket 🇱🇰 (@OfficialSLC) June 28, 2025
Player of the Match: Pathum Nissanka
Player of the Series: Pathum Nissanka
Champions: Team Sri Lanka
The trophy was presented by Dr. Jayantha Dharmadasa, Vice President of Sri Lanka Cricket; Mr. Ashly de Silva, Chief… pic.twitter.com/9nT8K8SfOK
ಬಾಂಗ್ಲಾದೇಶದ ಪರ ದ್ವಿತೀಯ ಇನಿಂಗ್ಸ್ ಆರಂಭಿಸಲು ಬಂದ ಅನ್ಮುಲ್ ಹಕ್ ಅವರನ್ನು ಚಹಾ ವಿರಾಮಕ್ಕೆ ಸ್ವಲ್ಪ ಮೊದಲು ಕೊನೆಯ ಓವರ್‌ನಲ್ಲಿ ಅಸಿತಾ ಫೆರ್ನಾಂಡೊ 19 ರನ್‌ಗಳಿಗೆ ಪೆವಿಲಿಯನ್‌ಗೆ ಕಳುಹಿಸಿದರು. ಅನ್ಮುಲ್ 2 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಅವರು ಶಾದ್ಮನ್ ಇಸ್ಲಾಂ ಜೊತೆ ಮೊದಲ ವಿಕೆಟ್‌ಗೆ 31 ರನ್ ಸೇರಿಸಿದರು.
SL vs BAN: ಶತಕ ಸಿಡಿಸಿ 1000 ಟೆಸ್ಟ್ ರನ್‌ಗಳನ್ನು ಪೂರ್ಣಗೊಳಿಸಿದ ಪಥುಮ್ ನಿಸಾಂಕ!
ಶಾದ್ಮನ್ ಇಸ್ಲಾಂ (12 ರನ್), ಮೊಮಿನುಲ್ ಹಕ್ (15 ರನ್) ಮತ್ತು ಮುಷ್ಫಿಕರ್ ರಹೀಮ್ (26 ರನ್) ಔಟಾದರು. ತಂಡದ ಯಾವುದೇ ಬ್ಯಾಟ್ಸ್‌ಮನ್ ಹೆಚ್ಚು ಹೊತ್ತು ಮೈದಾನದಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ನಾಯಕ ನಜ್ಮುಲ್ ಹುಸೇನ್ ಶಾಂಟೊ ಅವರನ್ನು 19 ರನ್‌ಗಳಿಗೆ ಡಿ ಸಿಲ್ವಾ ಔಟ್ ಮಾಡಿದರು. ಮೂರನೇ ದಿನದಾಟ ಮುಗಿಯುವ ಸ್ವಲ್ಪ ಮೊದಲು, ಮೆಹಿಡಿ ಹಸನ್ ಮಿರಾಜ್ ಅವರನ್ನು 11 ರನ್‌ಗಳಿಗೆ ತರಿಂಡು ರತ್ನಾಯಕೆ ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿದರು.