India's intra-squad game: ಮೊದಲ ದಿನದ ಇಂಟ್ರಾ-ಸ್ಕ್ವಾಡ್ ಪಂದ್ಯದಲ್ಲಿ ಮಿಂಚಿದ ಗಿಲ್, ರಾಹುಲ್
ಶುಭಮನ್ ಗಿಲ್ ಮತ್ತು ಕೆಎಲ್ ರಾಹುಲ್ ಅರ್ಧಶತಕ ಗಳಿಸಿದರೆ, ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅತ್ಯಧಿಕ ವಿಕೆಟ್ ಪಡೆಯುವಲ್ಲಿ ಯಶಸ್ಸು ಕಂಡಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ. ಆದರೆ ನಿರ್ಧಿಷ್ಟವಾಗಿ ಆಟಗಾರರು ಗಳಿಸಿದ ರನ್ ಮತ್ತು ವಿಕೆಟ್ ಬಗ್ಗೆ ಮಾಹಿತಿ ನೀಡಿಲ್ಲ.


ಬೆಕೆನ್ ಹಾಮ್ (ಕೆಂಟ್): ಬೆಕೆನ್‌ಹ್ಯಾಮ್‌ನಲ್ಲಿ(Beckenham) ನಡೆಯುತ್ತಿರುವ ಭಾರತ ಇಂಟ್ರಾ-ಸ್ಕ್ವಾಡ್(India's intra-squad game) ಪಂದ್ಯದ ಮೊದಲ ದಿನದಂದು ಭಾರತದ ತಂಡದ ಪರವಾಗಿ ನಾಯಕ ಶುಭಮನ್ ಗಿಲ್(Shubman Gill), ಕೆಎಲ್ ರಾಹುಲ್(KL Rahul) ಮತ್ತು ಶಾರ್ದೂಲ್ ಠಾಕೂರ್(Shardul Thakur) ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಜೂನ್ 20 ರಿಂದ ಪ್ರಾರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ಎ ವಿರುದ್ಧದ ಇಂಟ್ರಾ-ಸ್ಕ್ವಾಡ್ ಅಭ್ಯಾಸ ಪಂದ್ಯದ ಮೂಲಕ ಭಾರತ ತನ್ನ ಸಿದ್ಧತೆಗಳನ್ನು ಅಂತಿಮಗೊಳಿಸುತ್ತಿದೆ.
ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಒತ್ತಾಯದ ಮೇರೆಗೆ, ಮಾಧ್ಯಮಗಳಿಂದ ಯಾವುದೇ ವರದಿ ಇಲ್ಲದೆ ಮುಚ್ಚಿದ ಬಾಗಿಲುಗಳ ಹಿಂದೆ ನಡೆಯುತ್ತಿರುವ ಈ ನಾಲ್ಕು ದಿನಗಳ ಪಂದ್ಯದ ಅಭ್ಯಾಸವು ಹಲವಾರು ಆಟಗಾರರು ಇಂಗ್ಲೆಂಡ್‌ನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಬಿಸಿಸಿಐ (ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ) ಪಂದ್ಯದ 1 ನೇ ದಿನದ ಅತ್ಯುತ್ತಮ ಪ್ರದರ್ಶನ ನೀಡಿದವರ ಪಟ್ಟಿಯನ್ನು ಬಹಿರಂಗಪಡಿಸಿದೆ.
📍 Beckenham
— BCCI (@BCCI) June 13, 2025
A solid Opening Day in the Intra-Squad game!
Half-centuries for KL Rahul & Captain Shubman Gill 👌 👌
Shardul Thakur amongst the wickets 👍 👍 pic.twitter.com/7lfEFoL4KE
ಶುಭಮನ್ ಗಿಲ್ ಮತ್ತು ಕೆಎಲ್ ರಾಹುಲ್ ಅರ್ಧಶತಕ ಗಳಿಸಿದರೆ, ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅತ್ಯಧಿಕ ವಿಕೆಟ್ ಪಡೆಯುವಲ್ಲಿ ಯಶಸ್ಸು ಕಂಡಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ. ಆದರೆ ನಿರ್ಧಿಷ್ಟವಾಗಿ ಆಟಗಾರರು ಗಳಿಸಿದ ರನ್ ಮತ್ತು ವಿಕೆಟ್ ಬಗ್ಗೆ ಮಾಹಿತಿ ನೀಡಿಲ್ಲ.
ಎದುರಾಳಿ ತಂಡಕ್ಕೆ ಆಟದ ಕುರಿತು ಯಾವುದೇ ಸುಳಿವು ಸಿಗಬಾರದೆನ್ನುವ ಉದ್ದೇಶದಿಂದ ಈ ಪಂದ್ಯವನ್ನು ಮುಚ್ಚಿದ ಬಾಗಿಲುಗಳ ನಡುವೆ ನಡೆಸಲು ಭಾರತೀಯ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಬಯಸಿದ್ದರು. ಹೀಗಾಗಿ ಪಂದ್ಯ ಮುಚ್ಚಿದ ಬಾಗಿಲುಗಳ ಹಿಂದೆ ನಡೆಯುತ್ತಿದೆ. ಯುರೋಪಿಯನ್ ಫುಟ್‌ಬಾಲ್ ಕ್ಲಬ್‌ನಲ್ಲಿ ಈ ರೀತಿ ಅಭ್ಯಾಸ ನಡೆಸಲಾಗುತ್ತದೆ.
ಇದನ್ನೂ ಓದಿ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ದಿಢೀರ್ ತವರಿಗೆ ಮರಳಿದ ಕೋಚ್ ಗಂಭೀರ್