ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sakshi Malik: ಮಗಳ ಹೆಸರಿನ ಹಿಂದಿನ ರಹಸ್ಯ ಹಂಚಿಕೊಂಡ ಸಾಕ್ಷಿ ಮಲಿಕ್

ಸಾಕ್ಷಿ ಸಿಂಗ್‌ ಅವರ ಪತಿ ಸತ್ಯವರ್ತ್ ಕಡಿಯನ್ ಕೂಡ ಭಾರತೀಯ ಕುಸ್ತಿಪಟು. 2010 ರ ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಲ್ಲಿ ಅವರು ಬಾಲಕರ ಫ್ರೀಸ್ಟೈಲ್ 100 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹಲವು ಪ್ರಶಸ್ತಿ ಗೆದ್ದಿರುವ ಅವರು 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಮಗಳ ಹೆಸರಿನ ಹಿಂದಿನ ರಹಸ್ಯ ಹಂಚಿಕೊಂಡ ಸಾಕ್ಷಿ ಮಲಿಕ್

Profile Abhilash BC Jun 27, 2025 1:10 PM

ನವದೆಹಲಿ: ಒಲಿಂಪಿಕ್‌ ಕಂಚಿನ ಪದಕ ವಿಜೇತೆ, ಭಾರತದ ಮಾಜಿ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್(Sakshi Malik) ಅವರು ತಮ್ಮ ಮಗಳ ಹೆಸರಿನ ಹಿಂದಿನ ಒಂದು ಸಣ್ಣ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 4 ಬಾರಿ ಒಲಿಂಪಿಕ್ ಚಾಂಪಿಯನ್ ಸೌರಿ ಯೋಶಿಡಾ(Saori Yoshida) ಅವರ ನೆನಪಿಗಾಗಿ ಮಗಳ ಹೆಸರಿನಿನೊಂದಿಗೆ ಯೋಶಿಡಾ(Yoshida Kadian) ಎಂದು ಸೇರಿಸಿರುವದಾಗಿ ಫೇಸ್ ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

'ಸೌರಿ ಯೋಶಿಡಾ 4 ಬಾರಿ ಒಲಿಂಪಿಕ್ ಚಾಂಪಿಯನ್ ಮತ್ತು ಜಪಾನಿನ ಪ್ರಸಿದ್ಧ ಕುಸ್ತಿಪಟು. ನಾನು ನನ್ನ ಕುಸ್ತಿ ಪ್ರಯಾಣವನ್ನು ಪ್ರಾರಂಭಿಸಿದಾಗ, ಒಂದು ದಿನ ಅವರನ್ನು ಭೇಟಿಯಾಗಬೇಕೆಂಬ ಆಸೆ ಮತ್ತು ಕನಸು ಕಂಡಿದ್ದೆ. ಮತ್ತು ಅಂತಿಮವಾಗಿ ನಾನು ಅದನ್ನು ಸಾಧಿಸಿದೆ. ಅವರನ್ನು ಭೇಟಿಯಾದಾಗ ನನಗೆ ಹೆಣ್ಣು ಮಗು ಜನಿಸಿದರೆ ನಾನು ಅವಳಿಗೆ ಯೋಶಿಡಾ ಎಂದು ಹೆಸರಿಡುತ್ತೇನೆ ಎಂದು ಆ ಕ್ಷಣ ನನಗೆ ನಾನೇ ಒಂದು ಭರವಸೆ ನೀಡಿದ್ದೆ. ಅದೃಷ್ಟ ಎಂಬಂತೆ ನನಗೆ ಹೆಣ್ಣು ಮಗಳು ಹುಟಿದಳು ಅದರಂತೆ ನಾನು ಮಗುವಿಗೆ ಯೋಶಿಡಾ ಕಡಿಯನ್ ಎಂದು ಹೆಸರಿಟ್ಟೆ ಎಂದರು.

"ನನ್ನ ಮಗಳು ಕುಸ್ತಿಪಟು ಆಗುತ್ತಾಳೋ, ಇಲ್ಲವೋ, ಅದು ಅವಳ ನಿರ್ಧಾರವಾಗಿದೆ. ಆದರೆ, ಅವಳು ಎಲ್ಲಕ್ಕಿಂತ ಹೆಚ್ಚಾಗಿ ದಯೆ ಮತ್ತು ಒಳ್ಳೆಯ ಮಾನವಳಾಗಿ ಬೆಳೆಯುತ್ತಾಳೆ ಎಂದು ನಾನು ಆಶಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ದೀರ್ಘ ಕಾಲದ ಪ್ರತಿಭಟನೆ ನಡೆಸಿದ್ದ ಸಾಕ್ಷಿ ಮಲಿಕ್ ಶರಣ್ ಸಿಂಗ್ ಅವರ ನಿಕಟವರ್ತಿ ಸಂಜಯ್ ಸಿಂಗ್ ಡಬ್ಲ್ಯುಎಫ್ಐ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಕುಸ್ತಿಗೆ ನಿವೃತ್ತಿ ಘೋಷಿಸಿದ್ದರು. ಬ್ರಿಜ್ ಭೂಷಣ್ ಬಂಧನಕ್ಕೆ ಆಗ್ರಹಿಸಿ ಸಾಕ್ಷಿ ಅವರೊಂದಿಗೆ ಒಲಿಂಪಿಕ್‌ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ, ವಿನೇಶಾ ಫೋಗಾಟ್‌ ಸಹ ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ IND vs ENG: ಜೋಫ್ರಾ ಆರ್ಚರ್‌ ಆಗಮನ, ಎರಡನೇ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡ ಪ್ರಕಟ!

ಸಾಕ್ಷಿ ಸಿಂಗ್‌ ಅವರ ಪತಿ ಸತ್ಯವರ್ತ್ ಕಡಿಯನ್ ಕೂಡ ಭಾರತೀಯ ಕುಸ್ತಿಪಟು. 2010 ರ ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಲ್ಲಿ ಅವರು ಬಾಲಕರ ಫ್ರೀಸ್ಟೈಲ್ 100 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹಲವು ಪ್ರಶಸ್ತಿ ಗೆದ್ದಿರುವ ಅವರು 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.