ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೆಸ್ಟ್ ಇಂಡೀಸ್ ಕ್ರಿಕೆಟಿಗನ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ ಆರೋಪ!

ಕ್ರಿಕೆಟ್ ವೆಸ್ಟ್ ಇಂಡೀಸ್ (CWI) ಅಧ್ಯಕ್ಷ ಡಾ. ಕಿಶೋರ್ ಶಾಲೋ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು ಮತ್ತು ಮಂಡಳಿಗೆ ಯಾವುದೇ ನಿರ್ದಿಷ್ಟ ಆರೋಪಗಳ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾರೆ "ಕ್ರಿಕೆಟ್ ವೆಸ್ಟ್ ಇಂಡೀಸ್‌ಗೆ ಈ ಬಗ್ಗೆ ತಿಳಿದಿಲ್ಲ. ಆದ್ದರಿಂದ, ಈ ಸಮಯದಲ್ಲಿ ಪ್ರತಿಕ್ರಿಯಿಸುವ ಸ್ಥಿತಿಯಲ್ಲಿಲ್ಲ" ಎಂದು ಶಾಲೋ ಹೇಳಿದರು.

ವೆಸ್ಟ್ ಇಂಡೀಸ್ ಕ್ರಿಕೆಟಿಗನ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ ಆರೋಪ!

Profile Abhilash BC Jun 27, 2025 4:33 PM

ಬಾರ್ಬಡೋಸ್‌: ಆಸ್ಟ್ರೇಲಿಯಾ ವಿರುದ್ಧ ತವರಿನ ಟೆಸ್ಟ್‌ ಸರಣಿಯನ್ನಾಡುತ್ತಿರುವಾಗಲೇ ವೆಸ್ಟ್‌ ಇಂಡಿಸ್‌ ತಂಡದ ಆಟಗಾರನೊಬ್ಬನ(West Indies cricketer) ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ(sexual harassment) ಆರೋಪ ಹೊರಿಸಲಾಗಿದೆ ಎಂದು ಹಲವಾರು ಮಾಧ್ಯಮ ವರದಿಗಳು ತಿಳಿಸಿವೆ. ಗಯಾನೀಸ್ ಸುದ್ದಿವಾಹಿನಿಯ ಕೈಟಿಯರ್ ನ್ಯೂಸ್ ಈ ಘಟನೆಯನ್ನು ವರದಿ ಮಾಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ವರದಿಯ ಆಧಾರದ ಮೇಲೆ, ಅಪ್ರಾಪ್ತ ವಯಸ್ಕ ಸೇರಿದಂತೆ ಕನಿಷ್ಠ 11 ಮಹಿಳೆಯರು ಬಲಿಪಶುಗಳಾಗಿದ್ದಾರೆ. ಆದರೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಕ್ರಿಕೆಟಿಗನ ಹೆಸರು ಇನ್ನೂ ಬಹಿರಂಗವಾಗಿಲ್ಲ.

ಕ್ರಿಕೆಟಿಗನ ವಿರುದ್ಧದ ಆರೋಪವನ್ನು ಮೊದಲು ಗಯಾನಾದ ಬರ್ಬೈಸ್‌ನ ಯುವತಿಯೊಬ್ಬಳು ಹೊರಿಸಿದ್ದಳು. ಈ ಘಟನೆ ಮಾರ್ಚ್ 3, 2023 ರಂದು ನಡೆದಿತ್ತು. ಸಂತ್ರಸ್ತೆಯ ತಾಯಿಯ ಪ್ರಕಾರ, ಕ್ರಿಕೆಟಿಗ ಕುಟುಂಬಕ್ಕೆ ಪರಿಚಿತನಾಗಿದ್ದನು ಮತ್ತು ಅಪರಾಧ ನಡೆದಾಗ ಮಗಳು 18 ವರ್ಷದವಳಾಗಿದ್ದಳು. ಆ ದುರದೃಷ್ಟಕರ ದಿನದಂದು, ಕ್ರಿಕೆಟಿಗ ಮಗಳನ್ನು ಸುತ್ತಾಡುವ ನೆಪದಲ್ಲಿ ಆಕೆಯ ಕೆಲಸದ ಸ್ಥಳದಿಂದ ಕರೆದುಕೊಂಡು ಹೋಗಿ ಬಲವಂತಪಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ತಿಳಿಸಿದ್ದಾರೆ.

ತಾಯಿಯ ಹೇಳಿಕೆ ಪ್ರಕಾರ, ಕುಟುಂಬವು ಮರುದಿನ ಪೊಲೀಸ್ ದೂರು ದಾಖಲಿಸಿತು ಮತ್ತು ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಕ್ರಿಕೆಟಿಗನ ಸಂಬಂಧಿಕರು ಖಾಸಗಿಯಾಗಿ ವಿಷಯವನ್ನು ಇತ್ಯರ್ಥಪಡಿಸಲು ಪ್ರಯತ್ನಿಸುವ ಮೂಲಕ ಪ್ರಕರಣವನ್ನು ತಪ್ಪಾಗಿ ನಿರ್ವಹಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಆರೋಪಿ ಕ್ರಿಕೆಟಿಗ ಸ್ವಯಂಪ್ರೇರಣೆಯಿಂದ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಅವರು ಹೇಳಿದ್ದಾರೆ.

ಏತನ್ಮಧ್ಯೆ, ಕ್ರಿಕೆಟ್ ವೆಸ್ಟ್ ಇಂಡೀಸ್ (CWI) ಅಧ್ಯಕ್ಷ ಡಾ. ಕಿಶೋರ್ ಶಾಲೋ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು ಮತ್ತು ಮಂಡಳಿಗೆ ಯಾವುದೇ ನಿರ್ದಿಷ್ಟ ಆರೋಪಗಳ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾರೆ "ಕ್ರಿಕೆಟ್ ವೆಸ್ಟ್ ಇಂಡೀಸ್‌ಗೆ ಈ ಬಗ್ಗೆ ತಿಳಿದಿಲ್ಲ. ಆದ್ದರಿಂದ, ಈ ಸಮಯದಲ್ಲಿ ಪ್ರತಿಕ್ರಿಯಿಸುವ ಸ್ಥಿತಿಯಲ್ಲಿಲ್ಲ" ಎಂದು ಶಾಲೋ ಹೇಳಿದರು.