Viral News: ಪಬ್‍ಜೀ ಗೆಳೆಯನಿಗಾಗಿ ಪತಿ, ಮಗುವನ್ನು ಬಿಟ್ಟು ಹೊರಟ ಮಹಿಳೆ; ಎಂಥ ಕಾಲ ಬಂತು ನೋಡಿ
ಉತ್ತರ ಪ್ರದೇಶದ ಮಹೋಬಾದಲ್ಲಿ ಆರಾಧನಾ ಎಂಬ ವಿವಾಹಿತ ಮಹಿಳೆ ಪಬ್‍ಜೀ ಆಡುವಾಗ ಪರಿಚಯವಾದ ಪಂಜಾಬ್‍ನ ವ್ಯಕ್ತಿ ಶಿವಂ ಎಂಬಾತನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಆತನಿಗಾಗಿ ತನ್ನ ಮಗು ಹಾಗೂ ಪತಿಯನ್ನು ಬಿಡಲು ನಿರ್ಧರಿಸಿದ್ದಾಳೆ. ಈ ದೃಶ್ಯವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಲಖನೌ: ಈ ಹಿಂದೆ ಪಾಕಿಸ್ತಾನದ ಸಿಂಧ್ ನಿವಾಸಿ ಮತ್ತು ನಾಲ್ಕು ಮಕ್ಕಳ ತಾಯಿ ಸೀಮಾ ಹೈದರ್, ಪಬ್‍ಜೀ ಆಡುವಾಗ ಪರಿಚಯವಾದ ಉತ್ತರ ಪ್ರದೇಶದ ಸಚಿನ್ ಮೀನಾನನ್ನು ಮದುವೆಯಾಗಲು ನೇಪಾಳದ ಮೂಲಕ ಆಕ್ರಮವಾಗಿ ಭಾರತಕ್ಕೆ ಬಂದಿದ್ದಳು. ಅದೇರೀತಿ ಇದೀಗ ಉತ್ತರ ಪ್ರದೇಶದ ಮಹೋಬಾದ ವಿವಾಹಿತ ಮಹಿಳೆಯೊಬ್ಬಳು ಆನ್‌ಲೈನ್ ಗೇಮ್ ಪಬ್‍ಜೀ ಆಡುವಾಗ ಪರಿಚಿತನಾದ ಪಂಜಾಬ್‍ನ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಅದು ಅಲ್ಲದೇ ಆತ ಈಕೆಯನ್ನು ಭೇಟಿಯಾಗಲು ಬಂದಿದ್ದಾನೆ. ಆತನ ಪ್ರೀತಿಯ ಬಲೆಯಲ್ಲಿ ಬಿದ್ದ ಮಹಿಳೆ ಗಂಡ-ಮಗುವನ್ನು ಬಿಡಲು ತಯಾರಾಗಿದ್ದಾಳೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಇದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
ಮಹಿಳೆ ಪ್ರೀತಿಸಿದ ವ್ಯಕ್ತಿ ಪಂಜಾಬ್‌ನ ಲುಧಿಯಾನದವನಾಗಿದ್ದು, ಅಲ್ಲಿಂದ ಉತ್ತರ ಪ್ರದೇಶದ ಮಹೋಬಾಗೆ ಬಂದು ಮಹಿಳೆಯ ಅತ್ತೆ-ಮಾವನ ಮನೆಯಲ್ಲಿ ಭೇಟಿಯಾಗಿದ್ದಾನೆ ಎಂದು ವರದಿಯಾಗಿದೆ. ಪ್ರಿಯಕರನ ಅನಿರೀಕ್ಷಿತ ಭೇಟಿಯಿಂದ ಆಕೆಯ ಪತಿ ಮತ್ತು ಆತನ ಕುಟುಂಬ ಶಾಕ್‌ಗೆ ಒಳಗಾಗಿದೆ. ಅಲ್ಲದೇ ತನ್ನ ಆನ್‌ಲೈನ್ ಪ್ರಿಯಕರನ ಜತೆ ಇರಲು ತನ್ನ ಪತಿ ಮತ್ತು ಮಗುವನ್ನು ಬಿಟ್ಟು ಹೋಗುವುದಾಗಿ ಮಹಿಳೆ ನಿರ್ಧರಿಸಿದ್ದಾಳೆ.
ವಿಡಿಯೊ ಇಲ್ಲಿದೆ ನೋಡಿ...
#Mahoba
— News1India (@News1IndiaTweet) June 26, 2025
एक हजार किलोमीटर दूर से शादी शुदा प्रेमिका के पास पहुंचा प्रेमी
ऑनलाइन गेम पब्जी खेलने के दौरान हुई थी दोनों की मुलाकात
शादी के 3 साल बाद बच्चे और पति को छोड़कर प्रेमी के साथ जाने की जिद पर अड़ी प्रेमिका
प्रेमिका के पति की शिकायत पर पुलिस ने प्रेमी के खिलाफ क़ी… pic.twitter.com/aHjDsbnRy0
ಈ ನಡುವೆ ಮಹಿಳೆ ತನ್ನ ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಳೆ ಎಂಬ ವರದಿಗಳೂ ಇವೆ. ಮೀರತ್ ಕೊಲೆ ಪ್ರಕರಣದಂತೆ, ತನ್ನ ಮತ್ತು ತನ್ನ ಪ್ರೇಮಿಯ ನಡುವೆ ಪತಿ ಬಂದರೆ, ಅವನನ್ನು 55 ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ಹಾಕುವುದಾಗಿ ಅವಳು ಹೇಳಿದ್ದಳು ಎನ್ನಲಾಗಿದೆ.
ಆ ಮಹಿಳೆಯನ್ನು ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಆರಾಧನಾ ಎಂದು ಗುರುತಿಸಲಾಗಿದ್ದು, 2022ರಲ್ಲಿ ಮಹೋಬಾದ ಶೀಲು ಎಂಬಾತನನ್ನು ಮದುವೆಯಾಗಿದ್ದಳು. ಅವರಿಗೆ ಒಂದೂವರೆ ವರ್ಷದ ಗಂಡು ಮಗುವೂ ಇದೆ. ಮದುವೆಯಾದ ಕೆಲವು ತಿಂಗಳ ನಂತರ ಆರಾಧನಾ ಪಬ್‍ಜೀ ಗೇಮ್‌ನಲ್ಲಿ ದಿನ ಕಳೆಯುತ್ತಿದ್ದಳಂತೆ. ಆಟದ ವೇಳೆ ಶಿವಂ ಎಂಬಾತನ ಪರಿಚಯ ಮಾಡಿಕೊಂಡಿದ್ದಾಳೆ. ಶಿವಂ ಪಂಜಾಬ್‌ನ ಲುಧಿಯಾನದವನಾಗಿದ್ದು, ಇವರ ಸ್ನೇಹ ಪ್ರೀತಿಯಾಗಿ ಬದಲಾಯಿತು.
ಶಿವಂ ಹೇಳುವಂತೆ ಸುಮಾರು 14 ತಿಂಗಳ ಹಿಂದೆ ಪಬ್‍ಜೀ ಆಡುವಾಗ ಆರಾಧನಾಳ ಜತೆ ಸ್ನೇಹ ಬೆಳೆಯಿತಂತೆ. ಆಕೆಯನ್ನು ನೋಡಲು ಶಿವಂ ಮಹೋಬಾಗೆ ಬಂದಿದ್ದಾನೆ. ಅವನು ಅವಳ ಮನೆಗೆ ಬಂದಾಗ, ಅವನ ಮತ್ತು ಅವಳ ಪತಿ ಶೀಲು ನಡುವೆ ಜಗಳ ನಡೆಯಿತು. ಶೀಲು ಪೊಲೀಸರಿಗೆ ಕರೆ ಮಾಡಿದ ನಂತರ ಪೊಲೀಸರು ಶಿವಂನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: 54 ವರ್ಷದ ಪ್ರಿಯಕರನನ್ನು ಪರಿಚಯಿಸಿ ಟ್ರೋಲ್ ಆದ 27 ವರ್ಷದ ಕಂಟೆಂಟ್ ಕ್ರಿಯೇಟರ್; ನೆಟ್ಟಿಗರು ಹೇಳಿದ್ದೇನು?
ಪೊಲೀಸರು ಶಿವಂನನ್ನು ಎಸ್‌ಡಿಎಂ (ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್) ನ್ಯಾಯಾಲಯಕ್ಕೆ ಕರೆದೊಯ್ದ ನಂತರ ತಹಸಿಲ್ ಕಚೇರಿಯಲ್ಲಿ ತೀವ್ರ ವಾಗ್ವಾದ ನಡೆಯಿತು. ಆರಾಧನಾ ಅವನನ್ನು ಹಿಂಬಾಲಿಸಿ ಬಂದು ಆತನೊಂದಿಗೆ ಹೋಗುವುದಾಗಿ ಹೇಳಿದ್ದಾಳೆ. ಪೊಲೀಸರು ಶಿವಂ ವಿರುದ್ಧ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 151 ರ ಅಡಿಯಲ್ಲಿ (ಸಾರ್ವಜನಿಕ ಶಾಂತಿಗೆ ಭಂಗ ತಂದಿದ್ದಕ್ಕಾಗಿ) ಪ್ರಕರಣ ದಾಖಲಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ ಎಂದು ವರದಿಗಳಿವೆ. ಹೆಚ್ಚಿನ ತನಿಖೆ ನಡೆಯುತ್ತಿದೆ.