ಟೆಂಡರ್ ಮಾಡದೆ ಕೆಲಸ, ಹಣಕಾಸು ಇಲಾಖೆ ಅಧಿಕಾರಿಗಳ ಕೈಚಳಕ
ವಿಧಾನಸಭೆ ಪ್ರಸ್ತಾಪದೊಂದಿಗೆ ನಡೆಯುತ್ತಿರುವ ಈ ಸಮ್ಮೇಳನಕ್ಕೆ ಹಣಕಾಸು ಇಲಾಖೆ ಅನುದಾನ ಒದಗಿಸಿದ್ದು, ಈ ಹಣದಲ್ಲಿ ಸುಮಾರು 10 ಕೋಟಿ ರು.ಗಳನ್ನು ಯಾವುದೇ ಟೆಂಡರ್ ನಡೆಸದೆ ಪಾರದರ್ಶಕ ಕಾಯ್ದೆಯಡಿ ವಿನಾಯಿತಿ ನೀಡಿದೆ. ಅಂದರೆ ಇದನ್ನು ಪ್ರಕೃತಿ ವಿಕೋಪಗಳ ಪರಿಣಾಮ ನಡೆಸುವ ತುರ್ತು ಕಾಮಗಾರಿಗಳಂತೆ ಪರಿಗಣಿಸಿ ಟೆಂಡರ್ ಇಲ್ಲದೆ ಕೈಗೊಳ್ಳುವಂತೆ ಹಣಕಾಸು ಇಲಾಖೆ ಅಧಿಕಾರಿಗಳು ವಿನಾಯಿತಿ ನೀಡಿದ್ದಾರೆ.