ಆಟೋದಲ್ಲೇ ಕಾಶ್ಮೀರ ತಲುಪಿದ ಸ್ನೇಹಿತರು
ಸುಮಾರು ಆರೇಳು ವರ್ಷಗಳಿಂದ ಮನಸ್ಸಿನಲ್ಲಿದ್ದ ಕಾಶ್ಮೀರ ಪ್ರವಾಸದ ಕನಸಿಗೆ ಅ.10ರಂದು ಚಾಲನೆ ನೀಡಿದವರು ದೇರಳಕಟ್ಟೆಯ ಸಾದಿಕ್, ಹಜೀಮ, ಹಸನ್ ಮತ್ತು ಹಫೀದ್. ಐಷಾರಾಮಿ ಕಾರುಗಳ ಬದಲಿಗೆ ಸಾಮಾನ್ಯ ಆಟೋರಿಕ್ಷಾವನ್ನೇ ಆಯ್ಕೆ ಮಾಡಿಕೊಂಡ ಈ ನಾಲ್ವರು ಸ್ನೇಹಿತರು, ತಮ್ಮ ಕನಸಿಗೆ ಅದನ್ನೇ ಸಾರಥಿಯನ್ನಾಗಿಸಿಕೊಂಡಿದ್ದಾರೆ. ಈ ಹಿಂದೆ ನಾಲ್ವರೂ ಆಟೋರಿಕ್ಷಾ ಚಾಲನೆ ಹಾಗೂ ಅದಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು.