Viral News: ಒಂದಲ್ಲ, ಎರಡಲ್ಲ ಬರೋಬ್ಬರಿ 3.3 ಲಕ್ಷ ರೂ. ಮೌಲ್ಯದ 70,000 ಲಾಲಿಪಾಪ್ ಆರ್ಡರ್ ಮಾಡಿದ ಬಾಲಕ!
8 ವರ್ಷದ ಬಾಲಕ ಅಮೆಜಾನ್‍ನಲ್ಲಿ 3.3 ಲಕ್ಷ ಮೌಲ್ಯದ 70,000 ಲಾಲಿಪಾಪ್ ಆರ್ಡರ್ ಮಾಡಿದ್ದಾನೆ. ಆರ್ಡರ್ ಮನೆ ಬಾಗಿಲಿಗೆ ಬಂದಿದ್ದನ್ನು ಕಂಡು ತಾಯಿ ಶಾಕ್ ಆಗಿದ್ದಾಳೆ. ನಂತರ ಆಕೆ ಬ್ಯಾಂಕ್ ಸಂಪರ್ಕಿಸಿ ಅಮೆಜಾನ್‍ನಿಂದ ಆ ಹಣವನ್ನು ಮರಳಿ ಪಡೆದಿದ್ದಾಳೆ. ಈ ಸುದ್ದಿ ಈಗ ವೈರಲ್(Viral News) ಆಗಿದೆ.


ಮಕ್ಕಳು ಹಠ ಮಾಡುತ್ತಾರೆ ಎಂದು ಅವರ ಬಳಿ ಮೊಬೈಲ್ ಕೊಟ್ಟರೆ ಅದು ಎಂತಹ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ಕೆಂಟುಕಿಯಲ್ಲಿ ನಡೆದ ಈ ಘಟನೆಯೇ ಉತ್ತಮ ಉದಾಹರಣೆ ಎನ್ನಬಹುದು. ಹೌದು, 8 ವರ್ಷದ ಬಾಲಕನ ಬಳಿ ತಾಯಿ ಮೊಬೈಲ್ ಕೊಟ್ಟ ಕಾರಣ ಆತ ಅಮೆಜಾನ್‍ನಲ್ಲಿ 3.3 ಲಕ್ಷ ಮೌಲ್ಯದ 70,000 ಲಾಲಿಪಾಪ್ ಆರ್ಡರ್ ಮಾಡಿದ್ದಾನೆ. ಮನೆಯ ಮುಂಭಾಗದಲ್ಲಿ ಇದ್ದಕ್ಕಿದ್ದಂತೆ ಲಾಲಿಪಾಪ್‍ಗಳ ಬಾಕ್ಸ್‌ಗಳನ್ನು ಕಂಡು ತಾಯಿ ಶಾಕ್ ಆಗಿದ್ದಾಳೆ. ಕೊನೆಗೆ ಆಕೆ ಬ್ಯಾಂಕ್ ಹಾಗೂ ಮಾಧ್ಯಮದವರನ್ನು ಸಂಪರ್ಕಿಸಿ ಈ ಆರ್ಡರ್‌ಗಳನ್ನು ವಾಪಾಸ್ ನೀಡಿ ಅಮೆಜಾನ್‌ನಿಂದ ಹಣವನ್ನು ಪಡೆದಿದ್ದಾಳಂತೆ. ಈ ಸುದ್ದಿ ಈಗ ವೈರಲ್(Viral News) ಆಗಿದೆ.
ಈ ಆರ್ಡರ್ ಅನ್ನು ಕ್ಯಾನ್ಸಲ್ ಮಾಡಲು ಆಕೆ ಎಷ್ಟೇ ಪ್ರಯತ್ನಿಸಿದರೂ, ಅದು ತುಂಬಾ ತಡವಾಗಿತ್ತು. ಯಾಕೆಂದರೆ ಈಗಾಗಲೇ ಅದನ್ನು ಡೆಲಿವರಿ ಮಾಡಲಾಗಿತ್ತು. ಮತ್ತು ಅದರಲ್ಲಿ 22 ಬಾಕ್ಸ್‌ಗಳು ಮನೆಗೆ ತಲುಪಿತ್ತು. ಆದರೆ ಇನ್ನೂ 8 ಬಾಕ್ಸ್‌ಗಳು ಇನ್ನೂ ಬರಬೇಕಿತ್ತು. ಅವಳು ತನ್ನ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಅದರ ಬೆಲೆ ಸುಮಾರು $ 4,000 (ಸುಮಾರು ರೂ. 3.3 ಲಕ್ಷ) ಎಂಬುದನ್ನು ಕಂಡು ಶಾಕ್ ಆಗಿದ್ದಾಳೆ. ಹಾಗೇ ತಕ್ಷಣ ಅವಳು ಇನ್ನು ಡೆಲಿವರಿ ಆಗಬೇಕಿದ್ದ 8 ಬಾಕ್ಸ್‌ಗಳನ್ನು ಹಿಂದಿರುಗಿಸಿದ್ದಾಳಂತೆ.
ಅದು ಅಲ್ಲದೇ, ಆಕೆ ಅಮೆಜಾನ್ ಅನ್ನು ಸಂಪರ್ಕಿಸಿ ಆರ್ಡರ್ ಅನ್ನು ವಾಪಾಸ್ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದಾಳೆ. ಆದರೆ ಅಮೆಜಾನ್ ಅದನ್ನು ಹಿಂದಕ್ಕೆ ಪಡೆಯಲು ನಿರಾಕರಿಸಿದೆಯಂತೆ. ಕೊನೆಗೆ ಆಕೆ ಬ್ಯಾಂಕ್ ಹಾಗೂ ಮಾಧ್ಯಮದರನ್ನು ಸಂಪರ್ಕಿಸಿದ ನಂತರ ಅಮೆಜಾನ್ ಕರೆ ಮಾಡಿ ಅವಳ ಹಣವನ್ನು ಮರುಪಾವತಿಸುವುದಾಗಿ ಹೇಳಿದೆ.
ಈ ಘಟನೆಯ ಬಗ್ಗೆ ಅವಳು ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾಳೆ. ಮತ್ತೆ ಇಂತಹ ಘಟನೆ ನಡೆಯುವುದನ್ನು ತಪ್ಪಿಸಲು ಮತ್ತು ಭವಿಷ್ಯದಲ್ಲಿ ತನ್ನ ಮಗನಿಂದಾಗುವ ಅನಾಹುತವನ್ನು ತಡೆಯಲು ತನ್ನ ಫೋನ್‍ನಲ್ಲಿ ಕೆಲವು ರೀತಿಯ ಸೆಟ್ಟಿಂಗ್‍ಗಳನ್ನು ಮಾಡಿರುವುದಾಗಿ ತಿಳಿಸಿದ್ದಾಳೆ.
ಈ ಸುದ್ದಿಯನ್ನೂ ಓದಿ:Viral Video: ರೈಲಿನಲ್ಲಿ ಪ್ರಯಾಣಿಸುವಾಗ ಎಚ್ಚರ... ಎಚ್ಚರ! ಈ ವಿಡಿಯೊ ನೋಡಿದ್ರೆ ಬೆಚ್ಚಿ ಬೀಳ್ತೀರಿ
ಈ ರೀತಿಯ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ನ್ಯೂಜೆರ್ಸಿಯದಲ್ಲಿ ಇಂತಹದೊಂದು ಘಟನೆ ವರದಿಯಾಗಿತ್ತು. ಕೇವಲ 22 ತಿಂಗಳ ವಯಸ್ಸಿನ ಮಗು ಆನ್‍ಲೈನ್‍ನಲ್ಲಿ 2,000 ಡಾಲರ್ (1.4 ಲಕ್ಷ ರೂ.) ಮೌಲ್ಯದ ಪೀಠೋಪಕರಣಗಳನ್ನು ಆರ್ಡರ್ ಮಾಡಿತ್ತು. ಮಗುವಿನ ಪೋಷಕರಿಗೆ ಈ ಬಗ್ಗೆ ತಿಳಿದಿರಲಿಲ್ಲ. ಆದರೆ ವಸ್ತುಗಳು ಮನೆಗೆ ಬಂದಾಗ ಅವರು ಶಾಕ್ ಆಗಿದ್ದರು. ನಂತರ ಅವನ ತಾಯಿ ತನ್ನ ಫೋನ್‍ನಲ್ಲಿ ವೆಬ್‍ಸೈಟ್ ನೋಡಿದಾಗ ತನ್ನ ಶಾಪಿಂಗ್ ಕಾರ್ಟ್‍ನಲ್ಲಿ ಸಾಕಷ್ಟು ವಸ್ತುಗಳನ್ನು ಆರ್ಡರ್ ಮಾಡಿದ ರಿಸಿಪ್ಟ್ ಕಂಡುಬಂದಿದೆಯಂತೆ.