ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಜಿಮ್‍ನಲ್ಲಿ ವರ್ಕೌಟ್ ಮಾಡುವಾಗ ಕುಸಿದುಬಿದ್ದು ವ್ಯಕ್ತಿ ಸಾವು; ವಿಡಿಯೊ ವೈರಲ್

ಸುಮಾರು 170 ಕೆಜಿ ತೂಕ ಹೊಂದಿರುವ 37 ವರ್ಷದ ಪಂಕಜ್ ಶರ್ಮಾ ಎಂಬ ವ್ಯಕ್ತಿ ತೂಕ ಇಳಿಸಿಕೊಳ್ಳಲು ಫರಿದಾಬಾದ್‌ನ ಬಲ್ಲಭಗಢದಲ್ಲಿರುವ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಹೃದಯಾಘಾತದಿಂದ ಸಾವನಪ್ಪಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ವರ್ಕೌಟ್‌ ಮಾಡುವಾಗ ಕುಸಿದುಬಿದ್ದು ವ್ಯಕ್ತಿ ಸಾವು!

Profile pavithra Jul 3, 2025 1:21 PM

ಚಂಡೀಗಢ: ಜೀವನ ಎನ್ನುವುದು ನೀರ ಮೇಲಿನ ಗುಳ್ಳೆಯಂತೆ. ಸಾವು ಯಾವಾಗ ಬರುತ್ತದೆ ಎಂದು ಊಹಿಸಲಾಗದು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಹೃದಯಾಘಾತದಿಂದ ಸಾವನಪ್ಪುತ್ತಿದ್ದಾರೆ. ಅದೇರೀತಿ ಇದೀಗ ಫರಿದಾಬಾದ್‌ನ ಬಲ್ಲಭಗಢದಲ್ಲಿರುವ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಸುಮಾರು 170 ಕೆಜಿ ತೂಕ ಹೊಂದಿರುವ 37 ವರ್ಷದ ವ್ಯಕ್ತಿಯೊಬ್ಬ ಹೃದಯಾಘಾತದಿಂದ(Heart Attack) ಸಾವನ್ನಪ್ಪಿದ ದುರಂತ ಘಟನೆ ಇತ್ತೀಚೆಗೆ ಸಂಭವಿಸಿದೆ. ಈ ದೃಶ್ಯ ಜಿಮ್‍ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.

ಮೃತನನ್ನು ಪಂಕಜ್ ಶರ್ಮಾ ಎಂದು ಗುರುತಿಸಲಾಗಿದೆ. ಈತ ಬೆಳಿಗ್ಗೆ 10 ಗಂಟೆ ಸುಮಾರಿಗೆ ತನ್ನ ಸ್ನೇಹಿತ ರೋಹಿತ್ ಜೊತೆ ಜಿಮ್‌ಗೆ ಬಂದಿದ್ದನು. ಪಂಕಜ್ ತನ್ನ ವ್ಯಾಯಾಮವನ್ನು ಶುರುಮಾಡುವ ಮೊದಲು ಒಂದು ಸಣ್ಣ ಕಪ್ ಬ್ಲ್ಯಾಕ್ ಕಾಫಿ ಕುಡಿದು ಪುಲ್-ಅಪ್‌ಗಳನ್ನು ಮಾಡಿದ್ದಾನೆ. ಹೀಗೆ 3ನೇ ಸಲ ಪುಲ್-ಅಪ್‌ಗೆ ಪ್ರಯತ್ನಿಸಿದಾಗ, ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ.

ವಿಡಿಯೊ ಇಲ್ಲಿದೆ ನೋಡಿ...



ಶಬ್ದ ಕೇಳಿ ಇತರ ಜಿಮ್ ಸದಸ್ಯರು ಅವನನ್ನು ಬದುಕಿಸಲು ಪ್ರಯತ್ನಿಸಿದ್ದಾರೆ. ಆದರೆ ಅವನು ವಾಂತಿ ಮಾಡಿಕೊಂಡು ಮತ್ತೆ ಬಿದ್ದಿದ್ದಾನೆ. ನಂತರ ಸ್ನೇಹಿತರು ಅವನಿಗೆ ಎರಡು ಬಾರಿ ಸಿಪಿಆರ್ ಮಾಡಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ತಕ್ಷಣ ಹತ್ತಿರದ ಆಸ್ಪತ್ರೆಯ ವೈದ್ಯರನ್ನು ಕರೆಸಲಾಯಿತು. ಅವರು ಪಂಕಜ್ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿ ಪಂಕಜ್ ಕಳೆದ ನಾಲ್ಕು ತಿಂಗಳಿನಿಂದ ನಿಯಮಿತವಾಗಿ ಜಿಮ್‌ಗೆ ಹೋಗುತ್ತಿದ್ದನು ಎಂದು ಆತನ ಸ್ನೇಹಿತ ರೋಹಿತ್ ಹೇಳಿದ್ದಾನೆ. ಇನ್ನು ಪಂಕಜ್ ತನ್ನ ಆರೋಗ್ಯದ ಬಗ್ಗೆ ಬಹಳ ಜಾಗರೂಕರಾಗಿದ್ದನು ಮತ್ತು ಯಾವುದೇ ಪ್ರೋಟೀನ್ ಪೌಡರ್ ಅಥವಾ ಸ್ಟೀರಾಯ್ಡ್‌ಗಳನ್ನು ಎಂದಿಗೂ ಸೇವಿಸಲಿಲ್ಲ ಎಂದು ಅವನ ತಂದೆ ರಾಜೇಶ್ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ವಿಮಾನದಲ್ಲಿ ಲೈಫ್ ಜಾಕೆಟ್ ಕದ್ದ ಪ್ರಯಾಣಿಕ; ಆಮೇಲೆ ನಡೆದಿದ್ದೇನು? ವೈರಲ್‌ ವಿಡಿಯೊ ಇಲ್ಲಿದೆ

ಜಿಮ್ ತರಬೇತುದಾರ ವಿಕ್ರಮ್ ದಾಸ್ ಇದು ಒಂದು ಅನಿರೀಕ್ಷಿತವಾಗಿ ಸಂಭವಿಸಿದ ಘಟನೆ. ಸಮಯಕ್ಕೆ ಸರಿಯಾಗಿ ಸಿಪಿಆರ್ ನೀಡಲಾಗಿದೆ. ಆದರೆ ಅದು ಯಾವುದೇ ಪರಿಣಾಮ ಬೀರಲಿಲ್ಲ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಹೆಚ್ಚಿನ ತನಿಖೆಗಾಗಿ ಜಿಮ್‌ನಿಂದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ವಿವರಗಳನ್ನು ತೆಗೆದುಕೊಂಡಿದ್ದಾರೆ. ಮೃತ ಪಂಕಜ್ ಮದುವೆಯಾಗಿ ನಾಲ್ಕು ವರ್ಷಗಳಾಗಿವೆ ಮತ್ತು ಆತನಿಗೆ ಎರಡೂವರೆ ವರ್ಷದ ಮಗಳಿದ್ದಾಳೆ ಎನ್ನಲಾಗಿದೆ.