ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deadly Accident: ಕೂದಲೆಳೆಯ ಅಂತರದಲ್ಲಿ ಪಾರಾದ ವ್ಯಕ್ತಿ; ಬೆಚ್ಚಿಬೀಳಿಸುವ ವಿಡಿಯೊ ವೈರಲ್!

ಇತ್ತೀಚೆಗೆ ವಿಯೆಟ್ನಾಂನಲ್ಲಿ ಕಿರಿದಾದ ಸೇತುವೆಯ ಬಳಿ ಬೈಕಿನಲ್ಲಿ ಟ್ರಿಪಲ್ ರೈಡಿಂಗ್‍ನಲ್ಲಿ ಬರುವಾಗ ಇನ್ನೊಂದು ಕಡೆಯಿಂದ ಬರುತ್ತಿದ್ದ ವ್ಯಾನ್‍ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೈಕ್ ಹೊಳೆಗೆ ಬಿದ್ದಿದೆ. ಆದರೆ ಈ ಘಟನೆಯಲ್ಲಿ ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಕೂದಲೆಳೆಯ ಅಂತರದಲ್ಲಿ ಪಾರಾದ ವ್ಯಕ್ತಿ- ವಿಡಿಯೊ ವೈರಲ್!

Profile pavithra Jun 3, 2025 5:07 PM

ಹನೋಯಿ: ಇತ್ತೀಚೆಗೆ ವಿಯೆಟ್ನಾಂನಲ್ಲಿ ವ್ಯಕ್ತಿಯೊಬ್ಬ ಬೈಕ್ ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾನೆ ಈ ಘಟನೆ ದೃಶ್ಯ ಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.ವೈರಲ್ ಆದ ವಿಡಿಯೊದಲ್ಲಿ, ಕಿರಿದಾದ ಸೇತುವೆಯ ಬಳಿ ಒಂದೇ ಬೈಕಿನಲ್ಲಿ ಮೂವರು ಹೋಗುತ್ತಿರುವಾಗ ಎದುರುಗಡೆ ಬರುತ್ತಿದ್ದ ವ್ಯಾನ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೈಕ್‌ ಹೊಳೆಗೆ ಬಿದ್ದಿರುವುದು ಸೆರೆಯಾಗಿದೆ. ಆದರೆ ಈ ಅಪಘಾತದ ವೇಳೆ ಬೈಕಿನ ಹಿಂಬದಿಯಲ್ಲಿ ಕುಳಿತ ವ್ಯಕ್ತಿ ಮಾತ್ರ ಪವಾಡದ ರೀತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಈ ಅಪಘಾತದ ವೇಳೆ ಆತ ಬೈಕಿನಿಂದ ಜಿಗಿದು ಸೇತುವೆಯ ಉದ್ದಕ್ಕೂ ಇರುವ ಕಬ್ಬಿಣದ ಬೇಲಿಯನ್ನು ಹಿಡಿದಿದ್ದಾನೆ. ಬೈಕ್‌ ಹಾಗೂ ಅದರಲ್ಲಿದ್ದ ಇಬ್ಬರು ವ್ಯಕ್ತಿಗಳು ನೀರಿಗೆ ಬಿದ್ದಿದ್ದಾರೆ. ಈ ಘಟನೆಯ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ವಿಡಿಯೊ ಇಲ್ಲಿದೆ ನೋಡಿ...



ಈ ವಿಡಿಯೊ ನೋಡಿ ನೆಟ್ಟಿಗರು ಸಿಕ್ಕಾಪಟ್ಟೆ ಕಾಮೆಂಟ್‌ ಮಾಡಿದ್ದಾರೆ. ನೆಟ್ಟಿಗರು ಅವನನ್ನು ‘ಪ್ರೊಫೆಶನಲ್ ಸ್ಟಂಟ್‌ಮ್ಯಾನ್’ ಎಂದು ಕರೆದಿದ್ದಾರೆ. ಇನ್ನೂ ಅನೇಕರು ತಮಾಷೆಯ ಕಾಮೆಂಟ್‌ಗಳೊಂದಿಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೊದಲ್ಲಿ ನೀರಿಗೆ ಬಿದ್ದ ಇಬ್ಬರು ವ್ಯಕ್ತಿಗಳ ಸ್ಥಿತಿ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಆದರೆ, ಮಾಹಿತಿ ಪ್ರಕಾರ, ಬೈಕ್ ಅಪಘಾತವು ವಿಯೆಟ್ನಾಂನಲ್ಲಿ ಸಂಭವಿಸಿದೆ. ಇದು ನಿಜವಾದ ಘಟನೆಯೇ? ಅಥವಾ ಸೋಶಿಯಲ್‌ ಮೀಡಿಯಾದಲ್ಲಿ ಲೈಕ್ಸ್‌ಗಳಿಗಾಗಿ ಈ ರೀತಿ ಮಾಡಿದ್ದಾರೆಯೇ ಎಂಬುದರ ಬಗ್ಗೆ ಇನ್ನು ಸ್ಪಷ್ಟವಾಗಿಲ್ಲ!

ಈ ಸುದ್ದಿಯನ್ನೂ ಓದಿ:‌Viral Video: ಶ್ವಾನದ ಪ್ರಾಣ ಉಳಿಸಲು ತನ್ನ ಜೀವದ ಹಂಗು ತೊರೆದು ನೀರಿಗೆ ಜಿಗಿದ ವ್ಯಕ್ತಿ; ಹೃದಯಸ್ಪರ್ಶಿ ವಿಡಿಯೊ ವೈರಲ್

ಮತ್ತೊಂದು ವೈರಲ್ ವಿಡಿಯೊದಲ್ಲಿ, ಮೂವರು ಹುಡುಗಿಯರು ಸ್ಕೂಟಿಯಲ್ಲಿ ಹೋಗುವಾಗ ಆಯತಪ್ಪಿ ಚರಂಡಿಗೆ ಬಿದ್ದಿದ್ದಾರೆ. ಸ್ಥಳೀಯರು ಅವರ ಸ್ಕೂಟರ್ ಅನ್ನು ಮೇಲಕ್ಕೆತ್ತಲು ಪ್ರಯತ್ನಿಸಿದ್ದಾರೆ.ಈ ಘಟನೆಯ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.