Viral Video: ಸಮುದ್ರದ ದಡದಲ್ಲಿ ನಿಂತು ವಿಡಿಯೊ ಮಾಡ್ತಿದ್ದ ಯುವತಿ ಕಾದಿತ್ತು ಬಿಗ್ ಶಾಕ್! ಈಕೆ ಬದುಕುಳಿದಿದ್ದೇ ಪವಾಡ
ಟ್ರಾವೆಲ್ ವ್ಲೋಗರ್ ಕೇಟಿ ಜಾನ್ಸನ್ ಬಾಲಿಯ ಏಂಜಲ್ಸ್ ಬಿಲ್ಲಾಬಾಂಗ್‌ನಲ್ಲಿ ಬಂಡೆಗಳ ಮೇಲೆ ಸೆಲ್ಫಿ ವಿಡಿಯೊ ಶೂಟ್ ಮಾಡುತ್ತಿದ್ದಾಗ ಬೃಹತ್ ಅಲೆಯೊಂದು ಅವಳ ಮೇಲೆ ಅಪ್ಪಳಿಸಿದೆ. ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಜಕಾರ್ತಾ: ಟ್ರಾವೆಲ್ ವ್ಲೋಗರ್ ಕೇಟಿ ಜಾನ್ಸನ್ ಬಾಲಿಯ(Bali) ಏಂಜಲ್ಸ್ ಬಿಲ್ಲಾಬಾಂಗ್‌ನಲ್ಲಿ ಬಂಡೆಗಳ ಮೇಲೆ ನಿಂತು ಸೆಲ್ಫಿ ವಿಡಿಯೊ ಶೂಟ್ ಮಾಡುತ್ತಿದ್ದಾಗ ಆಕೆಯ ಮೇಲೆ ಬೃಹತ್ ಅಲೆಯೊಂದು ಅಪ್ಪಳಿಸಿದೆಯಂತೆ.ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.ವೈರಲ್ ಆದ ವಿಡಿಯೊದಲ್ಲಿ ಬಂಡೆಯ ಮೇಲೆ ನಿಂತು ಆಕೆ ಪ್ರಕೃತಿ ಸೌಂದರ್ಯವನ್ನು ಎಂಜಾಯ್ ಮಾಡುತ್ತಿರುವಾಗ ದೊಡ್ಡದಾದ ಅಲೆಯೊಂದು ಆಕೆಯ ಮೇಲೆ ಅಪ್ಪಳಿಸಿ ಅವಳು ಕೆಳಗೆ ಬೀಳುವಂತೆ ಮಾಡಿದೆಯಂತೆ. ಇದರಿಂದ ಆಕೆ ಬೆಚ್ಚಿಬಿದ್ದಿದ್ದಾಳೆ.
ಅದು ಅಲ್ಲದೇ ಈ ಸ್ಥಳದಲ್ಲಿ ಒಂದು ಡಜನ್‌ಗಿಂತಲೂ ಹೆಚ್ಚು ಪ್ರವಾಸಿಗರು ಸಾವನ್ನಪ್ಪಿದ್ದಾರೆಂದು ತಿಳಿದಾಗ ಆಕೆ ಶಾಕ್ ಆಗಿದ್ದಾಳಂತೆ. ಈ ಸ್ಥಳದಲ್ಲಿ ಯಾವುದೇ ಎಚ್ಚರಿಕೆ ಫಲಕಗಳು ಇಲ್ಲ ಹಾಗೇ ಸರಿಯಾದ ಭದ್ರತೆಯೂ ಇಲ್ಲ ಎಂದು ಆಕೆ ತಿಳಿಸಿದ್ದಾಳೆ. ಬೇರೆ ಸ್ಥಳಗಳಿಗೆ ಪ್ರವಾಸಕ್ಕೆ ಹೋದಾಗ ಕುತೂಹಲದ ಜೊತೆಗೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಪ್ರವಾಸಿಗರಿಗೆ ಆಕೆ ಕಿವಿಮಾತು ಹೇಳಿದ್ದಾಳೆ.ಅವಳ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಅನೇಕರ ಗಮನಸೆಳೆದು ವೈರಲ್ ಆಗಿದೆ.
ವಿಡಿಯೊ ಇಲ್ಲಿದೆ ನೋಡಿ...
ಈ ಸುದ್ದಿಯನ್ನೂ ಓದಿ:Viral Video: ಪಾರಾಸೈಲಿಂಗ್ ಮಾಡ್ತಿದ್ದ ಮಾಡೆಲ್ ದುರಂತ ಸಾವು; ಕೊನೆಯ ಕ್ಷಣದ ಭಯಾನಕ ವಿಡಿಯೊ ಇಲ್ಲಿದೆ
ಬಾಲಿಯ ನುಸಾ ಪೆನಿಡಾದ ನೈಋತ್ಯ ಕರಾವಳಿಯಲ್ಲಿರುವ ಏಂಜಲ್ಸ್ ಬಿಲ್ಲಾಬಾಂಗ್ ಒಂದು ಅದ್ಭುತ ಸ್ಥಳವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹಲವಾರು ಸಾವುನೋವುಗಳೊಂದಿಗೆ, ಸುರಕ್ಷತಾ ಮೂಲಸೌಕರ್ಯಗಳ ಕೊರತೆಯಿಂದಾಗಿ ಪದೇ ಪದೇ ಈ ಸ್ಥಳ ಟೀಕೆಗೆ ಗುರಿಯಾಗಿದೆ.