Viral News: ಪ್ರತಿ ಗಂಟೆಗೊಮ್ಮೆ ಸ್ನಾನ ಮಾಡಬೇಕು; ವಿಚಿತ್ರ ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದಾನೆ ಈ ಯುವಕ
ಆಂಧ್ರ ಪ್ರದೇಶದ ಅನಕಪಲ್ಲಿಯ ಪ್ರಭು ಪ್ರಸಾದ್ ಎಂಬ 21 ವರ್ಷದ ಯುವಕ ವಿಚಿತ್ರ ಚರ್ಮ ರೋಗದಿಂದ ಬಳಲುತ್ತಿದ್ದಾನಂತೆ. ಆತನ ಸ್ಥಿತಿ ಕಂಡು ಎಲ್ಲರೂ ಆತನನ್ನು ‘ಸಾಂಪ್ ಪ್ರಸಾದ್’ ಎಂದು ಅಡ್ಡ ಹೆಸರಿಟ್ಟಿದ್ದಾರಂತೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಅಮರಾವತಿ: ಆಂಧ್ರ ಪ್ರದೇಶದ ಅನಕಪಲ್ಲಿಯ ಯುವಕನೊಬ್ಬ ವಿಚಿತ್ರವಾದ ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಈತನ ಮೈ ಮೇಲಿನ ಚರ್ಮ ಹಾವಿನ ಚರ್ಮ ಸುಲಿದ ರೀತಿ ಪ್ರತಿದಿನ ಎದ್ದು ಹೋಗುತ್ತದೆಯಂತೆ. ಸೂರ್ಯನ ಬೆಳಕಿನಿಂದ ಉಂಟಾಗುವ ಉರಿಯನ್ನು ನಿವಾರಿಸಲು ಅವನು ಪ್ರತಿ ಗಂಟೆಗೊಮ್ಮೆ ಸ್ನಾನ ಮಾಡಬೇಕಂತೆ. ಆತನ ಸ್ಥಿತಿಯನ್ನು ಕಂಡು ಜನರು ಅವನ ಹೆಸರು ಪ್ರಭು ಪ್ರಸಾದ್ ಎಂದು ಕರೆಯುವ ಬದಲು ‘ಹಾವು ಪ್ರಸಾದ್’ ಎಂಬ ಅಡ್ಡ ಹೆಸರು ಕರೆದು ಗೇಲಿ ಮಾಡುತ್ತಾರೆ. ಈ ಸುದ್ದಿ ಈಗ ವೈರಲ್ (Viral News) ಆಗಿದೆ.
ಆತನ ತಾಯಿ ಅವನ ಕಾಯಿಲೆಗೆ ಚಿಕಿತ್ಸೆ ನೀಡಲು ಹಲವು ಸರ್ಕಾರಿ ಆಸ್ಪತ್ರೆಗಳಿಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರಿಗೆ ಅವನ ಈ ಕಾಯಿಲೆಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗದೆ ಅದಕ್ಕೆ ಸೂಕ್ತವಾದ ಚಿಕಿತ್ಸೆ ನೀಡಲು ಆಗುತ್ತಿಲ್ಲ. ಆದರೆ ಹಣಕಾಸಿನ ಸಮಸ್ಯೆಯಿಂದಾಗಿ ಆತನಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿಲ್ಲ.
ಈ ಸುದ್ದಿಯನ್ನೂ ಓದಿ:Viral Video: ಸಮುದ್ರದ ದಡದಲ್ಲಿ ನಿಂತು ವಿಡಿಯೊ ಮಾಡ್ತಿದ್ದ ಯುವತಿ ಕಾದಿತ್ತು ಬಿಗ್ ಶಾಕ್! ಈಕೆ ಬದುಕುಳಿದಿದ್ದೇ ಪವಾಡ
ಇನ್ನು ಪ್ರಭು ಪ್ರಸಾದ್ ಈ ಕಾಯಿಲೆಯಿಂದಾಗಿ ಎಲ್ಲರಿಂದ ದೂರವಿದ್ದು ಒಬ್ಬಂಟಿಯಾಗಿ ಜೀವನವನ್ನು ನಡೆಸುತ್ತಿದ್ದಾನೆ. ಈ ಚರ್ಮ ರೋಗದಿಂದಾಗಿ ಜನರು ತನ್ನಿಂದ ಅಂತರವನ್ನು ಕಾಯ್ದುಕೊಳ್ಳುತ್ತಾರೆ ಮತ್ತು ತನಗೆ ಸ್ನೇಹಿತರು ಕೂಡ ಇಲ್ಲ ಎಂದು ಹೇಳಿಕೊಂಡಿದ್ದಾನೆ. ಆತನಿಗೆ ಚೆನ್ನಾಗಿ ಓದಿ ವಿದ್ಯಾವಂತನಾಗಿ ಒಳ್ಳೆಯ ಕೆಲಸವನ್ನು ಪಡೆಯಬೇಕು ಎಂಬ ಆಸೆ ಕೂಡ ಇದೆ.