Viral Video: ಮಗನ ಅರಶಿನಶಾಸ್ತ್ರದಲ್ಲಿ ಪತ್ನಿಯೊಂದಿಗೆ ಸಖತ್ ಆಗಿ ಸ್ಟೆಪ್ಸ್ ಹಾಕಿದ ಸಚಿವ ಶಿವರಾಜ್ ಸಿಂಗ್ ಚೌಹಾಣ್ ; ವಿಡಿಯೊ ವೈರಲ್
ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ಮಗ ಕುನಾಲ್ ಚೌಹಾಣ್ ಅರಿಶಿನ ಶಾಸ್ತ್ರದಲ್ಲಿ ಪತ್ನಿ ಸಾಧನಾ ಸಿಂಗ್ ಜೊತೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಸಚಿವರ ಕಿರಿಯ ಪುತ್ರ ಕುನಾಲ್ ಚೌಹಾಣ್ ಹಾಗೂ ಭೋಪಾಲ್‍ನ ಡಾ.ಇಂದರ್ಮಲ್ ಜೈನ್ ಅವರ ಮೊಮ್ಮಗಳು ರಿಧಿ ಜೈನ್ ವಿವಾಹ ಇಂದು ನಡೆಯುತ್ತಿದೆ.

ಪತ್ನಿಯೊಂದಿಗೆ ಸಖತ್ ಆಗಿ ಸ್ಟೆಪ್ಸ್ ಹಾಕಿದ ಸಚಿವ ಶಿವರಾಜ್ ಸಿಂಗ್ ಚೌಹಾಣ್

ಭೋಪಾಲ್: ಮದುವೆ ಒಂದು ವಿಶೇಷವಾದ ದಿನ. ತಾವೇ ಆಡಿ ಬೆಳೆಸಿದ ಮಗ/ಮಗಳು ಹಸೆಮಣೆ ಏರುತ್ತಿದ್ದಾರೆ ಎಂದರೆ ತಂದೆ-ತಾಯಿಯ ಎದೆಯಲ್ಲಿ ಸಹಜವಾಗಿಯೇ ಖುಷಿ ಗರಿಗೆದರುತ್ತದೆ. ಆ ಸಂದರ್ಭದಲ್ಲಿ ತಾನು ಸಚಿವ, ನಾನು ಬಡವ ಎಂಬ ಭೇದ ಭಾವ ಇಲ್ಲದೇ ಕುಣಿದು ಸಂಭ್ರಮಿಸುತ್ತಾರೆ. ಇದೀಗ ಮಧ್ಯಪ್ರದೇಶ ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭೋಪಾಲ್‌ನಲ್ಲಿ ನಡೆದ ತಮ್ಮ ಮಗನ ಅರಿಶಿನ ಶಾಸ್ತ್ರದಲ್ಲಿ ಪತ್ನಿ ಸಾಧನಾ ಸಿಂಗ್ ಜೊತೆ ಕುಣಿದು ಖುಷಿಪಟ್ಟಿದ್ದಾರೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಾಗಿನಿಂದ ಇದು ಸಾವಿರಾರು ವ್ಯೂವ್‍ಗಳನ್ನು ಗಳಿಸಿದೆ.
ಸಚಿವರ ಕಿರಿಯ ಪುತ್ರ ಕುನಾಲ್ ಚೌಹಾಣ್ ಭೋಪಾಲ್‍ನ ಡಾ.ಇಂದರ್ಮಲ್ ಜೈನ್ ಅವರ ಮೊಮ್ಮಗಳು ರಿಧಿ ಜೈನ್ ಜೊತೆ ಮೇ 23, 2024 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಈ ಜೋಡಿ ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ವಿವಾಹವಾಗಲಿದ್ದಾರಂತೆ. ಹಾಗಾಗಿ ಮದುವೆಯ ಪೂರ್ವವಾಗಿ ಹಳದಿ ಶಾಸ್ತ್ರವನ್ನು ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಚಿವರು ತಮ್ಮ ಪತ್ನಿಯ ಜೊತೆ ಡ್ಯಾನ್ಸ್ ಮಾಡಿದ್ದಾರೆ.
ಈ ವಿಡಿಯೊದಲ್ಲಿ, ಕೇಂದ್ರ ಸಚಿವರು ಮತ್ತು ಅವರ ಪತ್ನಿ ಇಬ್ಬರು ಸಾಂಪ್ರದಾಯಿಕ ಉಡುಪು ಧರಿಸಿ, ನೃತ್ಯ ಮಾಡುವುದು ಸೆರೆಯಾಗಿತ್ತು. ಕುನಾಲ್ ಚೌಹಾಣ್ ವಿವಾಹ ಪೂರ್ವ ಆಚರಣೆಯು ಅದ್ಧೂರಿಯಾಗಿ ನಡೆದಿದ್ದು, ಹತ್ತಿರದ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಪಕ್ಷದ ಸಹೋದ್ಯೋಗಿಗಳು ಭಾಗವಹಿಸಿದ್ದರು. ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ನೃತ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅವರ ಬೆಂಬಲಿಗರು ಮತ್ತು ಹಿತೈಷಿಗಳು ಅಭಿನಂದನಾ ಸಂದೇಶಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ.
ಶಿವರಾಜ್ ಸಿಂಗ್ 2005 ರಿಂದ 2018 ರವರೆಗೆ ಮತ್ತು ಮತ್ತೆ 2020 ರಿಂದ 2023 ರವರೆಗೆ ನಾಲ್ಕು ಬಾರಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಅವರು ಈ ರಾಜ್ಯದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ದಾಖಲೆಯನ್ನು ಮಾಡಿದ್ದಾರೆ. ಇದಲ್ಲದೆ, ಅವರು ಐದು ಬಾರಿ ಸಂಸತ್ ಸದಸ್ಯರಾಗಿದ್ದರು ಮತ್ತು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ, ಸಂಸದೀಯ ಮಂಡಳಿ ಮತ್ತು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿದ್ದರು.
ಈ ಸುದ್ದಿಯನ್ನೂ ಓದಿ: Viral Video: ಮದುವೆಗೆ ಕರೆಯದೇ ಬಂದ ಡೇಂಜರಸ್ ಗೆಸ್ಟ್; ವಧು-ವರರು ಫುಲ್ ಶಾಕ್! ದಿಕ್ಕಾಪಾಲಾಗಿ ಓಡಿದ ಅತಿಥಿಗಳು
ಮದುವೆಗೆ ಅತಿಥಿಗಳನ್ನು ಆಹ್ವಾನಿಸುವುದು ಸಾಮಾನ್ಯ ಆದರೆ ಇಲ್ಲೊಂದು ಮದುವೆಯಲ್ಲಿ ಆಹ್ವಾನ ನೀಡದೆಯೇ ಅತಿಥಿಯೊಂದು ಆಗಮಿಸಿ ಭಾರಿ ಭೀತಿ ಮೂಡಿಸಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಅಕ್ಷಯ್ ಶ್ರೀವಾಸ್ತವ ಮತ್ತು ಜ್ಯೋತಿ ಕುಮಾರಿ ಅವರ ಮದುವೆಗೆ ಚಿರತೆಯೊಂದು ಎಂಟ್ರಿ ಕೊಟ್ಟಿದೆ. ಚಿರತೆಯನ್ನು ನೋಡಿ ಮದುವೆಯ ಸಂಭ್ರಮದಲ್ಲಿದ್ದ ಜನರು ಚಿರತೆ ನೋಡಿ ಭಯ ಬಿದ್ದು ಓಡಿದ್ದಾರೆ. ಬುಧವಾರ ರಾತ್ರಿ ಮದುವೆ ನಡೆಯುತ್ತಿತ್ತು. ರಾತ್ರಿ 11 ಗಂಟೆಯ ವೇಳೆಗೆ ಚಿರತೆ ಮನೆಗೆ ನುಗ್ಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ (Viral News) ಆಗಿದೆ.