Sreeleela: ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ನಟಿ ಶ್ರೀಲೀಲಾ ಡೇಟಿಂಗ್? ವಿಡಿಯೊ ಫುಲ್ ವೈರಲ್!
ನಟಿ ಶ್ರೀಲೀಲಾ ಅವರು ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ನಡುವೆ ಏನೋ ಇದೆ ಎಂಬ ಗಾಸಿಪ್ ಕೂಡ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಈ ನಡುವೆ ನಟಿ ಶೀಲೀಲಾ ಮತ್ತು ನಟ ಕಾರ್ತಿಕ್ ಆರ್ಯನ್ ಅವರು ಮುಂಬೈ ನ ಪ್ರತಿಷ್ಠಿತ ರೆಸ್ಟೋರೆಂಟ್ ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಕಿಸ್ ಬೆಡಗಿಗೆ ನಟ ಕಾರ್ತಿಕ್ ಆರ್ಯನ್ ಮೇಲೆ ಲವ್ ಆಗಿದ್ಯಾ? ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರಾ? ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಉಂಟಾಗಿದೆ.


ಮುಂಬೈ: ಸ್ಯಾಂಡಲ್‌ವುಡ್ ಬ್ಯೂಟಿ ಕ್ವೀನ್ ನಟಿ ಶ್ರೀಲೀಲಾ (Sreeleela) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಕಿಸ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾ ರ್ಪಣೆ ಮಾಡಿದ್ದ ನಟಿ ಶ್ರೀಲೀಲಾ ಅವರು ಕನ್ನಡ, ತಮಿಳು ಸೇರಿದಂತೆ ಬಾಲಿವುಡ್ ಸಿನಿಮಾ ಗಳಲ್ಲಿ ಯೂ ಅಭಿನಯಿಸುವ ಮೂಲಕ ಖ್ಯಾತಿ ಪಡೆದಿದ್ದಾರೆ. ನಟಿ ಶ್ರೀಲೀಲಾ ಅವರು ಬಾಲಿ ವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ನಡುವೆ ಏನೋ ಇದೆ ಎಂಬ ಗಾಸಿಪ್ ಕೂಡ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಈ ನಡುವೆ ನಟಿ ಶೀಲೀಲಾ ಮತ್ತು ನಟ ಕಾರ್ತಿಕ್ ಆರ್ಯನ್ ಅವರು ಮುಂಬೈ ನ ಪ್ರತಿಷ್ಠಿತ ರೆಸ್ಟೋರೆಂಟ್ ಒಂದರಲ್ಲಿ ಜೊತೆ ಯಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಕಿಸ್ ಬೆಡಗಿಗೆ ನಟ ಕಾರ್ತಿಕ್ ಆರ್ಯನ್ ಮೇಲೆ ಲವ್ ಆಗಿದ್ಯಾ? ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರಾ? ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಉಂಟಾಗಿದೆ.
ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ಆಶಿಕಿ 3 ಸಿನಿಮಾದಲ್ಲಿ ನಾಯಕಿಯಾಗಿ ನಟಿ ಶ್ರೀಲೀಲಾ ಆಯ್ಕೆ ಆಗಿದ್ದರು. ಈಗಾಗಲೇ ಈ ಸಿನಿಮಾದ ಶೂಟಿಂಗ್ ಕೆಲಸ ಕೂಡ ನಡೆ ಯುತ್ತಿದೆ. ಈ ನಡುವೆ ಇಬ್ಬರು ಜೊತೆಗೆ ಸಿನಿಮಾ ಮಾಡುತ್ತಿದ್ದು ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಗಾಸಿಪ್ ಹರಿದಾಡಿದ ಬೆನ್ನಲ್ಲೆ ಇತ್ತೀಚೆಗಷ್ಟೆ ನಟಿ ಶೀಲೀಲಾ ಮತ್ತು ನಟ ಕಾರ್ತಿಕ್ ಆರ್ಯನ್ ಅವರು ಮುಂಬೈನ ರೆಸ್ಟೋರೆಂಟ್ ಒಂದಕ್ಕೆ ಈ ಜೋಡಿ ತೆರಳಿದ್ದು ಇವರಿಬ್ಬರ ರಿಲೇಶನ್ ಶಿಪ್ ಪಕ್ಕಾ ಎನ್ನಲಾಗುತ್ತಿದೆ.
ಇವರಿಬ್ಬರು ರೆಸ್ಟೋರೆಂಟ್ ನಲ್ಲಿ ಒಟ್ಟಿಗೆ ಭಾಗಿಯಾಗಿದ್ದರೂ ಕೂಡ ಅಲ್ಲಿ ಮಾಧ್ಯಮದವರನ್ನು ಕಂಡ ಬಳಿಕ ಇಬ್ಬರು ಸಂಬಂಧವೇ ಇಲ್ಲ ಎಂಬಂತೆ ಪ್ರತ್ಯೇಕವಾಗಿ ರೆಸ್ಟೋರೆಂಟ್ ನಿಂದ ಹೊರ ನಡೆದಿದ್ದಾರೆ. ಈ ಮೂಲಕ ಈ ರೀತಿ ಕದ್ದು ಮುಚ್ಚಿ ಯಾಕೆ ತಿರುಗಾಡುತ್ತಿದ್ದಾರೆ, ಇವರಿಬ್ಬರು ಡೇಟಿಂಗ್ ನಲ್ಲಿದ್ದಾರೆ ಎನ್ನಲು ಇದೇ ಸಾಕ್ಷಿ ಎಂದು ನೆಟ್ಟಿಗರೊಬ್ಬರು ಸೋಶಿಯಲ್ ಮಿಡಿ ಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿ:Capital City Movie: ರಾಜೀವ್ ರೆಡ್ಡಿ ನಟನೆಯ ‘ಕ್ಯಾಪಿಟಲ್ ಸಿಟಿ’ ಚಿತ್ರ ಈ ವಾರ ತೆರೆಗೆ
ಈ ಹಿಂದೆ ನಟಿ ಸಾರಾ ಅಲಿ ಖಾನ್ ಅವರೊಂದಿಗೆ ನಟ ಕಾರ್ತಿಕ್ ಆರ್ಯನ್ ಹೆಸರು ಕೇಳಿ ಬಂದಿತ್ತು. ಈಗ ಶ್ರೀಲೀಲಾ ಹೆಸರು ಕೇಳಿಬರುತ್ತಿದೆ. ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಅವರು ಸಿನಿಮಾ ಹೊರತಾಗಿಯೂ ಪರಸ್ಪರ ಆತ್ಮೀಯವಾಗಿರುವುದು ಕಂಡು ಇವರಿಬ್ಬರು ಶೀಘ್ರವೇ ವಿವಾಹವಾಗ್ತಾರೆ ಎಂಬ ಅನುಮಾನ ಹುಟ್ಟುಹಾಕುವಂತೆ ಮಾಡಿದೆ.
ನಟಿ ಶ್ರೀಲೀಲಾ ಅವರು ಸದ್ಯ ಭಗತ್ ಸಿಂಗ್ ಚಿತ್ರದ ಶೂಟಿಂಗ್ ಅಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ಅನುರಾಗ್ ಬಸು ನಿರ್ದೇಶನದ ಭೂಷಣ್ ಕುಮಾರ್ ನಿರ್ಮಾಣದ ಆಶಿಕಿ 3 ಸಿನಿಮಾದಲ್ಲಿ ನಟ ಕಾರ್ತಿಕ ಆರ್ಯನ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದು ಈ ಸಿನಿಮಾ ಹಿಟ್ ಆದರೆ ಬಾಲಿವುಡ್‌ನ ಅನೇಕ ಸಿನಿಮಾ ಆಫರ್ ಅವರಿಗೆ ಒಲಿದುಬರಲಿದೆ.