ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Abuse: ಸ್ನೇಹಿತನ ಲಿಂಗ ಪರಿವರ್ತನೆ ಮಾಡಿಸಿ ಅತ್ಯಾಚಾರ: ಆಘಾತಕಾರಿ ಘಟನೆ ಬೆಳಕಿಗೆ!

ಮಧ್ಯಪ್ರದೇಶದ ನರ್ಮದಾಪುರಂ ನಿವಾಸಿಯೊಬ್ಬನೊಂದಿಗೆ ತಾನು ಸ್ನೇಹಿತನಾಗಿದ್ದು, ಆತ ನನ್ನ ಮೇಲೆ ಮಾಟ ಮಂತ್ರ (Black Magic) ಮಾಡಿ ದೈಹಿಕ ಸಂಬಂಧ ಹೊಂದುವಂತೆ ಮಾಡಿದ್ದಾನೆ. ಅಲ್ಲದೇ ಲಿಂಗ ಬದಲಾವಣೆ (sex-change operation) ಮಾಡಿಕೊಂಡು ತಾನು ಹೆಣ್ಣಾಗಬೇಕು ಎಂದು ಒತ್ತಡ ಹೇರಿದ್ದಾನೆ ಎಂದು ವ್ಯಕ್ತಿಯೊಬ್ಬ ದೂರು ನೀಡಿದ್ದಾನೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ) ಮಲ್ಕೀತ್ ಸಿಂಗ್ ತಿಳಿಸಿದ್ದಾರೆ.

ಸ್ನೇಹಿತನ ಲಿಂಗ ಪರಿವರ್ತನೆ ಮಾಡಿಸಿ ಅತ್ಯಾಚಾರ

ಭೋಪಾಲ್‌: ಸ್ನೇಹಿತನ ಮೇಲೆಯೇ ವ್ಯಕ್ತಿಯೊಬ್ಬ ಅತ್ಯಾಚಾರ (physical abuse) ನಡೆಸಿದ್ದು, ಬಲವಂತದಿಂದ ಲಿಂಗ ಪರಿವರ್ತನೆ ಮಾಡಿಸಿರುವ ಆತಂಕಕಾರಿ ಘಟನೆ ಮಧ್ಯಪ್ರದೇಶದಲ್ಲಿ (Madhyapradesh) ನಡೆದಿದೆ. ನರ್ಮದಾಪುರಂ ನಿವಾಸಿಯೊಬ್ಬನೊಂದಿಗೆ ತಾನು ಸ್ನೇಹಿತನಾಗಿದ್ದು, ಆತ ನನ್ನ ಮೇಲೆ ಮಾಟ ಮಂತ್ರ (Black Magic) ಮಾಡಿ ದೈಹಿಕ ಸಂಬಂಧ ಹೊಂದುವಂತೆ ಮಾಡಿದ್ದಾನೆ. ಅಲ್ಲದೇ ಲಿಂಗ ಬದಲಾವಣೆ (sex-change operation) ಮಾಡಿಕೊಂಡು ತಾನು ಹೆಣ್ಣಾಗಬೇಕು ಎಂದು ಒತ್ತಡ ಹೇರಿದ್ದಾನೆ ಎಂದು ವ್ಯಕ್ತಿಯೊಬ್ಬ ದೂರು ನೀಡಿದ್ದಾನೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ) ಮಲ್ಕೀತ್ ಸಿಂಗ್ ತಿಳಿಸಿದ್ದಾರೆ.

ಸ್ನೇಹಿತನಿಗೆ ವ್ಯಕ್ತಿಯೊಬ್ಬ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒತ್ತಾಯಿಸಿ, ಹಲವಾರು ದಿನಗಳ ಕಾಲ ತನ್ನ ಮನೆಯಲ್ಲಿ ಕೂಡಿ ಹಾಕಿ ಅತ್ಯಾಚಾರ ನಡೆಸಿದ್ದಾನೆ ಎಂದು ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ) ಮಲ್ಕೀತ್ ಸಿಂಗ್, ಕಳೆದ ಕೆಲವು ವರ್ಷಗಳಿಂದ ನರ್ಮದಾಪುರಂ ನಿವಾಸಿಯೊಬ್ಬ ತನ್ನ ಸ್ನೇಹಿತನೊಂದಿಗೆ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದು, ಇದಕ್ಕಾಗಿ ಆತ ತನ್ನ ಮೇಲೆ ಮಾಟ ಮಂತ್ರ ಮಾಡುತ್ತಿದ್ದ. ಆ ವ್ಯಕ್ತಿ ತಾನು ಲಿಂಗ ಪರಿವರ್ತನೆ ಮಾಡಿಕೊಂಡು ಹೆಣ್ಣಾಗಬೇಕು ಎಂದು ಬಯಸುತ್ತಿದ್ದ. ತನ್ನನ್ನು ನಿಯಂತ್ರಿಸಲು ಮತ್ತು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಲು ಮಾಟ ಮಂತ್ರ ಮಾಡಿದ್ದಾನೆ ಎಂದು ದೂರುದಾರ ಆರೋಪಿಸಿದ್ದಾನೆ ಎಂದು ಹೇಳಿದ್ದಾರೆ.



ಆರೋಪಿಯು ತಾನು ನಿನ್ನನ್ನು ಮದುವೆಯಾಗುವುದಾಗಿ ಹೇಳಿ ಲಿಂಗ ಪರಿವರ್ತನೆ ಪ್ರಕ್ರಿಯೆಗೆ ಒಳಗಾಗುವಂತೆ ಒತ್ತಡ ಹೇರಿದ್ದು, ಇದರಿಂದ ಕಳೆದ ವರ್ಷ ನವೆಂಬರ್‌ನಲ್ಲಿ ತಾನು ಲಿಂಗ ಪರಿವರ್ತನೆ ಮಾಡಿಕೊಂಡಿದ್ದೇನೆ. ಬಳಿಕ ತನ್ನನ್ನು 10 ದಿನಗಳ ಕಾಲ ಬಂಧಿಸಿ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ್ದಾನೆ. ಇದೀಗ ಆ ವ್ಯಕ್ತಿ ತನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದು, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ ಎಂದು ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾನೆ ಎಂದು ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: Heart attack: ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ನಿಂದ ಮತ್ತೊರ್ವ ಯುವಕ ಸಾವು; ಸಾವಿನ ಸಂಖ್ಯೆ 34ಕ್ಕೆ ಏರಿಕೆ

ಗಾಂಧಿನಗರದಲ್ಲಿ ಈ ಪ್ರಕರಣ ದಾಖಲಾಗಿದ್ದು, ಇದನ್ನು ನರ್ಮದಾಪುರಂಗೆ ವರ್ಗಾಯಿಸಲಾಗಿದ್ದು, ಆರೋಪಿಯ ವಿರುದ್ಧ ಅತ್ಯಾಚಾರ ಮತ್ತು ಸುಲಿಗೆ ಸೇರಿದಂತೆ ಭಾರತೀಯ ನ್ಯಾಯ ಸಾಹಿತ್ಯ (ಬಿಎನ್‌ಎಸ್) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೂರುದಾರರ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಎಡಿಸಿಪಿ ತಿಳಿಸಿದ್ದಾರೆ.