Shafiq Syed: ಒಂದು ಕಾಲದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದ ಈ ಸ್ಟಾರ್ ನಟ ಈಗ ಬೆಂಗಳೂರಿನಲ್ಲಿ ಆಟೋ ಡ್ರೈವರ್!
ಒಂದು ಕಾಲದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ ಸ್ಟಾರ್ ನಟ ಇಂದು ತನ್ನ ಕುಟುಂಬವನ್ನು ನೋಡಿ ಕೊಳ್ಳಲು ಆಟೋ ಓಡಿ ಸುತ್ತಿದ್ದಾರೆ. ಯಾರು ಆ ನಟ ಎನ್ನುವ ಕುತೂಹಲ ನಿಮಗೂ ಇರಬಹುದು. 1988ರಲ್ಲಿ ಮೀರಾ ನಾಯರ್ ನಿರ್ದೇಶನದಲ್ಲಿ ನೈಜ ಜೀವನಾಧಾರ ಕುರಿತ ಸಿನಿಮಾ ಒಂದು ತೆರೆ ಕಂಡಿತ್ತು. ಈ ಸಿನಿಮಾ ಅಷ್ಟಾಗಿ ಸಕ್ಸಸ್ ಕಂಡಿಲ್ಲ ವಾದರೂ ಇದರಲ್ಲಿ ನಟನೆ ಮಾಡಿದ್ದ 12 ವರ್ಷದ ಬಾಲಕ ಸಿಕ್ಕಾಪಟ್ಟೆ ಖ್ಯಾತಿ ಪಡೆದಿದ್ದ ಬಾಲ ನಟನೆ ಶಫೀಕ್ ಸೈಯದ್.



ತನ್ನ ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳ ಮನದಲ್ಲಿ ಇಂದಿಗೂ ನೆಲೆಸಿರುವ ಶಫೀಕ್ ಸೈಯದ್ ಇಂದು ಬೆಂಗಳೂರಿನ ರಸ್ತೆಗಳಲ್ಲಿ ಆಟೋ ಓಡಿಸುತ್ತಿದ್ದಾರೆ. ಮೀರಾ ನಾಯರ್ ನಿರ್ದೇಶಿತ ಸಲಾಮ್ ಬಾಂಬೆ ಚಿತ್ರದಲ್ಲಿ ‘ಕೃಷ್ಣ’ ಪಾತ್ರದ ಮೂಲಕ ಮಿಂಚಿದ ಈ ನಟ ಇಂದು ತಮ್ಮ ಕುಟುಂಬವನ್ನು ಪೋಷಿಸಲು ದಿನನಿತ್ಯ ಶ್ರಮಿಸುತ್ತಿದ್ದಾರೆ.

ತಮ್ಮ 12 ನೇ ವಯಸ್ಸಿನಲ್ಲಿ ಶಫೀಕ್ ಸೈಯದ್ ಅವರು ಬಾಲ ಕಲಾವಿದನಾಗಿ ಸಲಾಮ್ ಬಾಂಬೆ ಚಿತ್ರ ಒಂದರಲ್ಲಿ ನಟಿಸಿದ್ದರು. ಇವರು ನಟಿಸಿದ ಈ ಸಿನಿಮಾ 1988ರಲ್ಲಿ ರಿಲೀಸ್ ಆಗಿತ್ತು. ವಯಸ್ಸು ಕೇವಲ 12 ಆದರೂ ಈ ಚಿತ್ರದಲ್ಲಿ ಶಫೀಕ್ ಅಭಿನಯಿಸಿದ ಪಾತ್ರ ಅಭಿಮಾನಿಗಳ ಹೃದಯ ಗೆದ್ದಿತ್ತು. ಆ ಸಮಯದಲ್ಲಿ ಅವರ ಅಭಿನಯ ವಿಶ್ವಾದ್ಯಂತ ಮೆಚ್ಚುಗೆಗೂ ಪಾತ್ರವಾಯಿತು.

ಮುಂಬೈ ಬೀದಿಗಳಲ್ಲಿ ವಾಸಿಸುವ ಮಕ್ಕಳ ಕಷ್ಟಗಳ ಬಗ್ಗೆ ನೈಜ ಕಥೆಯನ್ನು ಈ ಚಿತ್ರದಲ್ಲಿ ತೋರ್ಪಡಿಸಲಾಗಿತ್ತು. ಈ ಚಿತ್ರಕ್ಕೆ ಜೀವ ತುಂಬಿದ್ದು 'ಕೃಷ್ಣ ಅಲಿಯಾಸ್ ಚೈಪೌ' ಪಾತ್ರಕ್ಜೆ ಶಫೀಕ್.. ಇವರ ಅದ್ಭುತ ಅಭಿನಯಕ್ಕಾಗಿ ಅವರು ಅತ್ಯುತ್ತಮ ಬಾಲನಟ ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ಪಡೆದರು.

ಸಲಾಮ್ ಬಾಂಬೆ ಚಿತ್ರದ ನಂತರ ಶಫೀಕ್ ಅವರ ಜೀವನ ಬದಲಾಗುತ್ತದೆ ಎಂದು ಎಲ್ಲರೂ ಊಹಿಸಿದ್ದರು. ಆ ಬಳಿಕ ಇನ್ನೊಂದು ಚಿತ್ರ ಪತಂಗ್ ನಲ್ಲಿ ಕಾಣಿಸಿಕೊಂಡರು. ಆದರೆ ಅಷ್ಟೊಂದು ಖ್ಯಾತಿಯನ್ನು ಪಡೆದಿದ್ದರೂ ಚಲನಚಿತ್ರೋದ್ಯಮದಿಂದ ಅವರು ಕಣ್ಮರೆಯಾದರು

ಶಫೀಕ್ ಸೈಯದ್ ಹುಟ್ಟಿದ್ದು ಬೆಂಗಳೂರಿನ ಒಂದು ಪುಟ್ಟ ಸ್ಲಮ್ನಲ್ಲಿ.ತನ್ನ ಆರಂಭಿಕ ವರ್ಷ ಗಳಲ್ಲಿ, ಶಫೀಕ್ ಚರ್ಚ್ಗೇಟ್ ರೈಲ್ವೆ ನಿಲ್ದಾಣದ ಬಳಿಯ ಫುಟ್ಪಾತ್ನಲ್ಲಿ ವಾಸಿಸುತ್ತಿದ್ದರು ನಿರ್ದೇಶಕಿ ಮೀರಾ ನಾಯರ್ ಅವರನ್ನು ಸಲಾಂ ಬಾಂಬೆ ಚಿತ್ರ ಮಾಡುವಂತೆ ಅವರ ಬಳಿ ಕೇಳಿದ್ದರಂತೆ.. ಈ ಸಿನಿಮಾಗಾಗಿ ಆಗಿನ ಕಾಲಕ್ಕೆ ದಿನಕ್ಕೆ 20 ರೂ. ನೀಡುವ ಒಪ್ಪಂದವನ್ನು ಕೂಡ ಮಾಡಲಾಗಿತ್ತು. ಹಾಗೆಯೇ ಊಟಕ್ಕೆ ಒಂದು ವಡಾವನ್ನು ಕೂಡ ನೀಡಲಾಗುತ್ತಿತ್ತು.

ಚಲನಚಿತ್ರ ಅವಕಾಶಗಳು ಕಡಿಮೆಯಾದ ನಂತರ, ಶಫೀಕ್ 1990 ರ ದಶಕದಲ್ಲಿ ಬೆಂಗಳೂರಿಗೆ ಮರಳಿದರು.ನಂತರ ಶಫೀಕ್ ಅವರು ತಮ್ಮ ದೈನಂದಿನ ಖರ್ಚುಗಳನ್ನು ಪೂರೈಸಿಕೊಳ್ಳಲು ಬೆಂಗಳೂರಿನಲ್ಲಿ ಬಂದು ಆಟೋ ಓಡಿಸಲು ಶುರು ಮಾಡಿದ್ದರು.

ಇಂದು ನಾಲ್ಕು ಮಕ್ಕಳ ತಂದೆಯಾಗಿರುವ ಶಫೀಕ್, ತಮ್ಮ ತಾಯಿ, ಪತ್ನಿ ಮತ್ತು ಮಕ್ಕಳ ಪಾಲನೆ ಗಾಗಿ ಆಟೋ ಓಡಿಸುತ್ತಿದ್ದಾರೆ. ಕೆಲ ಕಾಲ ಟಿವಿ ಸೀರಿಯಲ್ಗಳಲ್ಲಿ ಕ್ಯಾಮೆರಾ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಒಂದು ಕಾಲದಲ್ಲಿ ನನ್ನ ಮೇಲೇನು ಜವಾಬ್ದಾರಿಯಿರಲಿಲ್ಲ.ಆದರೆ ಈಗ ನನ್ನ ಕುಟುಂಬದ ಸಂಪೂರ್ಣ ಹೊರೆ ನನ್ನ ಮೇಲಿದೆ ಎಂದು ಅವರು ಒಂದೊಮ್ಮೆ ಪ್ರಾಮಾಣಿಕವಾಗಿ ಹೇಳಿದ್ದರು.