ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ʼಕಜ್ರಾ ರೇʼ ಹಾಡಿಗೆ ಸಖತ್‌ ಆಗಿ ಸೊಂಟ ಬಳುಕಿಸಿದ ಅಜ್ಜಿ; ವಿಡಿಯೊ ವೈರಲ್!

ಮೆಹಂದಿ ಕಾರ್ಯಕ್ರಮವೊಂದರಲ್ಲಿ ‘ಕಜ್ರಾ ರೇ' ಹಾಡಿಗೆ ವೃದ್ಧ ಮಹಿಳೆಯೊಬ್ಬಳು ಸಖತ್‌ ಆಗಿ ಸೊಂಟ ಬಳುಕಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ. ನೃತ್ಯ ತಂಡವೊಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ವಿಡಿಯೊ ಈಗಾಗಲೇ 40 ಮಿಲಿಯನ್ ವ್ಯೂವ್ಸ್ ಗಳಿಸಿದೆ.

ಇಳಿವಯಸ್ಸಲ್ಲೂ ಅಜ್ಜಿಯ ಸೊಂಟ ಬಳುಕಿಸಿದ ಅಜ್ಜಿ-ವಿಡಿಯೊ ವೈರಲ್

Profile pavithra May 26, 2025 7:13 PM

ನವದೆಹಲಿ: ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ಅಜ್ಜಿಯರ ಡ್ಯಾನ್ಸ್‌ ವಿಡಿಯೊ ವೈರಲ್‌ ಆಗುತ್ತಿರುತ್ತವೆ. ಇದೀಗ ನಟಿ ಐಶ್ವರ್ಯಾ ರೈ ಸೊಂಟ ಬಳುಕಿಸಿದ ‘ಕಜ್ರಾ ರಾರೇ' ಹಾಡಿಗೆ ವೃದ್ಧ ಮಹಿಳೆಯೊಬ್ಬಳು ಕುಣಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿ ನೆಟ್ಟಿಗರ ಹೃದಯಗಳನ್ನು ಗೆದ್ದಿದೆ. ನೃತ್ಯ ತಂಡವೊಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ವಿಡಿಯೊ ಈಗಾಗಲೇ 40 ಮಿಲಿಯನ್ ವ್ಯೂವ್ಸ್ ಗಳಿಸಿದೆ.ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ಅಜ್ಜಿಯೊಬ್ಬಳು ಅದ್ಭುತವಾಗಿ ನೃತ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.
ಐಶ್ವರ್ಯಾ ರೈ, ಅಮಿತಾಬ್ ಮತ್ತು ಅಭಿಷೇಕ್ ಬಚ್ಚನ್ ಮೂವರು ಸೇರಿ ಹೆಜ್ಜೆ ಹಾಕಿದ ಈ ಐಕಾನಿಕ್ ಹಾಡಿಗೆ ವೃದ್ಧ ಮಹಿಳೆ ಅನುಭವಿ ಡ್ಯಾನ್ಸರ್‌ನಂತೆ ಸೊಂಟ ಬಳುಕಿಸಿದ್ದಾಳೆ. ಅಜ್ಜಿಯ ಡ್ಯಾನ್ಸ್‌ ನೋಡಿ ಅಲ್ಲಿ ಸೇರಿದ್ದವರು ಕೂಡ ಫುಲ್‌ ಖುಷಿಯಾಗಿ ಅವರನ್ನೂ ಕುಣಿಯುವಂತೆ ಮಾಡಿದೆ.

ಅಜ್ಜಿಯ ಡ್ಯಾನ್ಸ್‌ ವಿಡಿಯೊ ಇಲ್ಲಿದೆ ನೋಡಿ...

ಕಾಮೆಂಟ್‌ ವಿಭಾಗದಲ್ಲಿ ನೆಟ್ಟಿಗರು ವೃದ್ಧೆಯ ಡ್ಯಾನ್ಸ್‌ ಪ್ರೀತಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕ ನೆಟ್ಟಿಗರು ಅವಳನ್ನು ಅತ್ಯುತ್ತಮ ನೃತ್ಯಗಾರ್ತಿ ಎಂದು ಹೊಗಳಿದ್ದಾರೆ. ಈ ವಿಡಿಯೊ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ವಯಸ್ಸಿನ ಹಂಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ.

ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೊಗೆ ಸಾಕಷ್ಟು ಜನ ಕಾಮೆಂಟ್‌ ಮಾಡಿದ್ದಾರೆ, “ ಆ ವಯಸ್ಸಾದ ಮಹಿಳೆಯ ನೃತ್ಯದಿಂದ ಮೆಹಂದಿ ಫಂಕ್ಷನ್‍ಗೆ ಒಂದು ಕಳೆ ಬಂದಿದೆ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು " ನೀವು ಯಾವಾಗಲೂ ಸಂತೋಷವಾಗಿ ಹೀಗೆ ಕುಣಿಯುತ್ತೀರಿ” ಎಂದು ಹಾರೈಸಿದ್ದಾರೆ. ಮತ್ತೊಬ್ಬ ನೆಟ್ಟಿಗರು, "ಈ ಅಜ್ಜಿಗೆ ಡ್ಯಾನ್ಸ್‌ ಮೂಲಕ ಎಲ್ಲರನ್ನೂ ಸೆಳೆಯುವ ಕಲೆ ಇದೆ “ ಎಂದು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:‌Operation Sindoor: ನೋಡ ನೋಡುತ್ತಿದ್ದಂತೆ ಕ್ಷಿಪಣಿಗಳ ಎಂಟ್ರಿ; ವೈಮಾನಿಕ ದಾಳಿಗೆ ಬೆಚ್ಚಿದ ಪಾಕ್‌, ಹೇಗಿತ್ತು ಗೊತ್ತಾ ಆಪರೇಷನ್ ಸಿಂಧೂರ್‌? ದೃಶ್ಯಗಳು ವೈರಲ್‌

ಈ ಹಿಂದೆ ಆತಿಫ್ ಅಸ್ಲಾಂ ಅವರ ರೊಮ್ಯಾಂಟಿಕ್ ಕ್ಲಾಸಿಕ್ 'ಹೋನಾ ಥಾ ಪ್ಯಾರ್' ಹಾಡಿಗೆ ವೃದ್ಧ ದಂಪತಿ ಡ್ಯಾನ್ಸ್ ಮಾಡಿದ ಹೃದಯಸ್ಪರ್ಶಿ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅವರ ಕೆಮಿಸ್ಟ್ರಿ, ಮುಗ್ಧತೆ ನೋಡಿ ನೆಟ್ಟಿಗರು ಕೂಡ ಫುಲ್‌ ಖುಷಿಯಾಗಿದ್ದರು. ಈ ವಿಡಿಯೊವನ್ನು ಗಾಯಕ ಆದಿತ್ಯ ಚೌಹಾಣ್ ಹಂಚಿಕೊಂಡಿದ್ದರು. ಸಹ ಸಂಗೀತ ಪ್ರೇಮಿಗಳೊಂದಿಗೆ ಗಾಯಕ ಆದಿತ್ಯ ಚೌಹಾಣ್ ಜಾಮ್ ಸೆಷನ್ ನಡೆಸುವಾಗ ಅಲ್ಲಿಗೆ ಬಂದ ವೃದ್ಧ ದಂಪತಿ ಹಾಡಿನ ಲಯಕ್ಕೆ ತಕ್ಕ ಹಾಗೇ ಡ್ಯಾನ್ಸ್ ಮಾಡಿದ್ದಾರಂತೆ.