Pro-Khalistani: ಕೆನಡಾದಲ್ಲಿ ನಿಲ್ಲದ ಖಲಿಸ್ತಾನಿ ಪರ ಒಲವು; ಎಲ್ಲರ ಹುಬ್ಬೇರುವಂತೆ ಮಾಡಿದೆ ಈ ಘಟನೆ!
Pro-Khalistani artists: ಜಾಝಿ ಬಿ ಸೇರಿದಂತೆ ಪಂಜಾಬಿ ಸಂಗೀತ ಕಲಾವಿದರನ್ನು (Punjabi music artistes) ಮಂಗಳವಾರ ಬ್ರಿಟಿಷ್ ಕೊಲಂಬಿಯಾ ಶಾಸಕಾಂಗಕ್ಕೆ (British Columbia Legislature) ಕನ್ಸರ್ವೇಟಿವ್ ಪಕ್ಷದ ಶಾಸಕ ಸ್ಟೀವ್ ಕೂನರ್ ( MLA Steve Kooner) ಕರೆದಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಶಾಸಕಾಂಗಕ್ಕೆ ಆಹ್ವಾನಿಸಲಾದ ಜಾಝಿ ಬಿ ( Jazzy B) ಸೇರಿದಂತೆ ಪಂಜಾಬಿ ಸಂಗೀತ ಕಲಾವಿದರು ಖಲಿಸ್ತಾನಿ ಚಳವಳಿಯನ್ನು ಬೆಂಬಲಿಸುತ್ತಿದ್ದಾರೆ ಎನ್ನುವ ಆರೋಪವಿದೆ.


ಕೆನಡಾ: ಖಲಿಸ್ತಾನಿ ಪರ ಕಲಾವಿದರು ( Pro-Khalistani Artistes) ಎಂದು ಗುರುತಿಸಲ್ಪಟ್ಟಿರುವ ಜಾಝಿ ಬಿ ಸೇರಿದಂತೆ ಪಂಜಾಬಿ ಸಂಗೀತ ಕಲಾವಿದರನ್ನು (Punjabi music artistes) ಮಂಗಳವಾರ ಬ್ರಿಟಿಷ್ ಕೊಲಂಬಿಯಾ ಶಾಸಕಾಂಗಕ್ಕೆ (British Columbia Legislature) ಕನ್ಸರ್ವೇಟಿವ್ ಪಕ್ಷದ ಶಾಸಕ ಸ್ಟೀವ್ ಕೂನರ್ ( MLA Steve Kooner) ಕರೆದಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಶಾಸಕಾಂಗಕ್ಕೆ ಆಹ್ವಾನಿಸಲಾದ ಜಾಝಿ ಬಿ ( Jazzy B) ಸೇರಿದಂತೆ ಪಂಜಾಬಿ ಸಂಗೀತ ಕಲಾವಿದರು ಖಲಿಸ್ತಾನಿ ಚಳವಳಿಯನ್ನು ಬೆಂಬಲಿಸುತ್ತಿದ್ದಾರೆ ಎನ್ನುವ ಆರೋಪವಿದೆ. ಇವರನ್ನು ವಿಧಾನಸೌಧಕ್ಕೆ ಆಹ್ವಾನಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸ್ವತಂತ್ರ ಶಾಸಕ ಡಲ್ಲಾಸ್ ಬ್ರಾಡಿ ( MLA Dallas Brodie) ಇದು ನಮ್ಮ ಶಾಸಕಾಂಗಕ್ಕೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.
ಶಾಸಕಾಂಗದ ಅಧಿವೇಶನದಲ್ಲಿ ಜಾಝಿ ಬಿ ಸೇರಿದಂತೆ ಪಂಜಾಬಿ ಸಂಗೀತ ಕಲಾವಿದರನ್ನು ಹೊಗಳಿದ ಬ್ರಿಟಿಷ್ ಕೊಲಂಬಿಯಾ ಕನ್ಸರ್ವೇಟಿವ್ ಶಾಸಕ ಸ್ಟೀವ್ ಕೂನರ್ ಅವರ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸ್ವತಂತ್ರ ಶಾಸಕ ಡಲ್ಲಾಸ್ ಬ್ರಾಡಿ, ಶಾಸಕಾಂಗಕ್ಕೆ ಆಹ್ವಾನಿಸಲಾದ ಕಲಾವಿದರು ಖಲಿಸ್ತಾನಿ ಚಳವಳಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇವರ ಈ ವಿಡಿಯೊ ತ್ವರಿತವಾಗಿ ವೈರಲ್ ಆಗಿದ್ದು, ಕೆನಡಾದ ರಾಜಕೀಯ ವಿವಾದ ಭುಗಿಲೇಳುವಂತೆ ಮಾಡಿದೆ.
ಈ ಕುರಿತು ಎಕ್ಸ್ ನಲ್ಲಿ ಬರೆದಿರುವ ಬ್ರಾಡಿ, ಇಂದು ಹಲವಾರು ಪ್ರಮುಖ ಖಲಿಸ್ತಾನಿ ಪರ ವ್ಯಕ್ತಿಗಳನ್ನು ಬ್ರಿಟಿಷ್ ಕೊಲಂಬಿಯಾ ಶಾಸಕಾಂಗಕ್ಕೆ ಕನ್ಸರ್ವೇಟಿವ್ಸ್ ಮತ್ತು ಎನ್‌ಡಿಪಿ ಈ ಎರಡು ಪಕ್ಷಗಳ ಶಾಸಕರು ಸ್ವಾಗತಿಸಿದರು. ಆ ವ್ಯಕ್ತಿಗಳಲ್ಲಿ ಕೆಲವರು ತಮ್ಮ ಸಂಗೀತ ವಿಡಿಯೊಗಳಲ್ಲಿ ಹಿಂಸಾತ್ಮಕ ಉಗ್ರಗಾಮಿಗಳು ಮತ್ತು ಕೊಲೆಗಾರರನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಇದು ನಮ್ಮ ಶಾಸಕಾಂಗಕ್ಕೆ ಮಾಡಿದ ದೊಡ್ಡ ಅವಮಾನ ಎಂದು ಹೇಳಿದ್ದಾರೆ.
Today several prominent pro-Kalistani figures were welcomed in the BC Legislature by MLAs of both the BC Conservatives and NDP. Some of those individuals have openly celebrated violent extremists and murderers in their music videos.
— Dallas Brodie (@Dallas_Brodie) May 27, 2025
This is an insult to our Legislature. https://t.co/4DMiOjG2jM
ಬ್ರಾಡಿ ಅವರು ಹಂಚಿಕೊಡಿರುವ ವಿಡಿಯೊದ ವೈರಲ್ ಕ್ಲಿಪ್‌ನಲ್ಲಿ ಕೂನರ್, ನಾನು ಹಾಡುವ ಕುಟುಂಬದಿಂದ ಬಂದಿದ್ದೇನೆ. ಜಾಝಿ ಬಿ ಸುಮಾರು ಮೂವತ್ತು ವರ್ಷಗಳ ಹಿಂದೆ ನನ್ನ ತಂದೆಯ ಹಾಡಿನ ಭಾಗವನ್ನು ಹಾಡಿದ್ದರು. ಅದು ನನಗೆ ತುಂಬಾ ಇಷ್ಟವಾಗಿತ್ತು. ಆದ್ದರಿಂದ ನಾನು ಜಾಝಿ ಬಿ, ಸಬಿ ಗುನ್ನಾರ್, ಇಂದರ್ಪಾಲ್ ಮೊಗಾ, ಚಾನಿ ನಟ್ಟನ್ ಅವರನ್ನು ಸ್ವಾಗತಿಸಲು ಬಯಸಿದೆ. ಅವರು ನನಗೆ ಮಾರ್ಕೊ, ಮಾಂಡರ್ ಸಮುದಾಯದಿಂದಾಗಿ ಪರಿಚಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ವಿಡಿಯೊವನ್ನು ಮೊದಲು ದಿ ನ್ಯಾಷನಲ್ ಟೆಲಿಗ್ರಾಫ್‌ನ ಹಿರಿಯ ವರದಿಗಾರ ಮತ್ತು ಸಂಪಾದಕ ವ್ಯಾಟ್ ಕ್ಲೇಪೂಲ್ ಹಂಚಿಕೊಂಡಿದ್ದು, ಇದಕ್ಕೆ ಅವರು ಅನೇಕ ಟೀಕೆಗಳನ್ನು ಪಡೆದರು. ಈ ಕ್ಲಿಪ್ ನೊಂದಿಗೆ ವ್ಯಾಟ್ ಕ್ಲೇಪೂಲ್ ಅವರು ಇಲ್ಲಿ ಒಬ್ಬ ಶಾಸಕರು ಭಯೋತ್ಪಾದನಾ ಪರವಾಗಿರುವ ಸಂಗೀತಗಾರರನ್ನು ಹೊಗಳುತ್ತಿದ್ದಾರೆ ಎಂದು ಬರೆದಿದ್ದಾರೆ.
What's with all the MLAs in the BC legislature introducing all the Khalistani rappers today?
— Wyatt Claypool (@wyatt_claypool) May 27, 2025
Jazzy B is a hardcore Khalistani activist who has several times called for Khalistan. pic.twitter.com/iiUeZ2bUAW
ಬಿಟ್ರಿಷ್ ಕೊಲಂಬಿಯಾ ಶಾಸಕಾಂಗದಲ್ಲಿರುವ ಎಲ್ಲಾ ಶಾಸಕರು ಖಲಿಸ್ತಾನಿ ಪರವಾಗಿರುವ ಸಂಗೀತಗಾರರನ್ನು ಪರಿಚಯಿಸುವುದರ ಅರ್ಥವೇನು ಎಂದು ಅವರು ಪ್ರಶ್ನಿಸಿದ್ದು, ಜಾಝಿ ಬಿ ಒಬ್ಬ ಕಟ್ಟಾ ಖಲಿಸ್ತಾನಿ ಕಾರ್ಯಕರ್ತನಾಗಿದ್ದು ಆತ ಹಲವಾರು ಬಾರಿ ಖಲಿಸ್ತಾನಕ್ಕೆ ಕರೆ ನೀಡಿದ್ದಾನೆ ಎಂದು ಅವರು ಕೇಳಿದರು.
ಇದನ್ನೂ ಓದಿ: Donald Trump: ಡೊನಾಲ್ಡ್ ಟ್ರಂಪ್‌ಗೆ ಭಾರೀ ಮುಖಭಂಗ; ತೆರಿಗೆ ಯುದ್ಧಕ್ಕೆ ಬ್ರೇಕ್ ಹಾಕಿದ ಕೋರ್ಟ್
ಇನ್ನೊಂದು ಕಾಮೆಂಟ್ ನಲ್ಲಿ ಕ್ಲೇಪೂಲ್, 5,000 ಹಿಂದೂಗಳನ್ನು ಕೊಲ್ಲಬೇಕೆಂದು ಕರೆ ನೀಡಿದ್ದ ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಜೊತೆ ಜಾಝಿ ಬಿ ಇರುವ ಸಂಗೀತ ವಿಡಿಯೊದ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.
ಈ ನಡುವೆ ಜಾಝಿ ಬಿ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಬಿಟ್ರಿಷ್ ಕೊಲಂಬಿಯಾ ಶಾಸಕಾಂಗಕ್ಕೆ ಭೇಟಿ ನೀಡಿದ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದು, ಇದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.