Monday, 24th June 2024

ನಟ ದರ್ಶನ್ ಬ್ಯಾನ್’ಗೆ ಆಗ್ರಹ: ಫಿಲಂ ಚೇಂಬರ್ ನಲ್ಲಿ ಇಂದು ಸಭೆ

ಬೆಂಗಳೂರು :  ನಟ ದರ್ಶನ್ ಅವರನ್ನು ಸ್ಯಾಂಡಲ್ವುಡ್ ನಿಂದ ಬ್ಯಾನ್ ಮಾಡುವಂತೆ ಈಗಾಗಲೇ ಹಲವಾರು ಸಂಘಟನೆಗಳು ಹಾಗೂ ಸಾರ್ವಜನಿಕರು ಕೂಡ ಆಗ್ರಹಿಸಿದ್ದಾರೆ ಹಾಗಾಗಿ ಇದೀಗ ಫಿಲಂ ಚೇಂಬರ್ ನಲ್ಲಿದ್ದು ದರ್ಶನ್ ಭವಿಷ್ಯ ಈ ಒಂದು ಸಭೆಯಲ್ಲಿ ನಿರ್ಧಾರವಾಗಲಿದೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ.

ದರ್ಶನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೇ ಕ್ಷಣಗಳಲ್ಲಿ ಫಿಲಂ ಚೇಂಬರ್ ಸಭೆ ನಡೆಯಲಿದ್ದು, ಅಧ್ಯಕ್ಷ ಎಂ ಎನ್ ಸುರೇಶ್ ನೇತ್ರತ್ವದಲ್ಲಿ ಮಹತ್ವದ ಸಭೆ ನಡೆಯುತ್ತದೆ. ಸ್ಯಾಂಡಲ್ ವುಡ್ನಿಂದ ನಟ ದರ್ಶನ್ ಅವರನ್ನು ಬ್ಯಾನ್ ಮಾಡ್ತಾರಾ ಎಂಬ ಕುರಿತು ಕೆಲವೇ ಕ್ಷಣಗಳಲ್ಲಿ ಮಾಹಿತಿ ಹೊರಬೀಳಲಿದೆ. ಸ್ಯಾಂಡಲ್ ವುಡ್ನಿಂದ ದರ್ಶನ್ ಬ್ಯಾನಿಗೆ ಆಗ್ರಹ ಕೇಳಿ ಬರುತ್ತಿದೆ. ಸಂಘಟನೆಗಳು ಸಾರ್ವಜನಿಕರಿಂದ ಆಗ್ರಹ ಹಿನ್ನೆಲೆಯಲ್ಲಿ ಇದೀಗ ಕ್ರಮ ಜರುಗಿಸುವ ಸಾಧ್ಯತೆ ಇದೆ.

ದರ್ಶನ್ ಬ್ಯಾನ್ ಬಗ್ಗೆ ಸಮಿತಿಯ ಸದಸ್ಯರು ಚರ್ಚಿಸಲಿದ್ದಾರೆ. 50 ಸದಸ್ಯರ ಬದಲು 27 ಮಂದಿ ಅಷ್ಟೇ ಭಾಗಿಯಾಗುವ ಸಾಧ್ಯತೆ ಇದೆ. ದರ್ಶನ್ ಬ್ಯಾನಿಗೆ ಸರ್ವ ಸಂಘಟನೆಗಳು ಆಗ್ರಹಿಸಿದ್ದವು. ಈ ಹಿನ್ನೆಲೆಯಲ್ಲಿ ಫಿಲಂ ಚೇಂಬರ್ ನಲ್ಲಿ ತುರ್ತು ಸಭೆ ಏರ್ಪಡಿಸಲಾಗಿದೆ. ಸಭೆಯಲ್ಲಿ ದರ್ಶನ್ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.

ಫಿಲಂ ಚೆಂಬರ್ ಬೈಲಾ ಪ್ರಕಾರ ಯಾವುದೇ ಕಲಾವಿದರನ್ನು ಆಗಲಿ ಸ್ಯಾಂಡಲ್ವುಡ್ ಇಂದ ಬ್ಯಾನ್ ಮಾಡಲು ಆಗುವುದಿಲ್ಲ. ಹಾಗಾಗಿ ನಟ ದರ್ಶನ್ ಅವರ ವಿರುದ್ಧ ಫಿಲಂ ಚೇಂಬರ್ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತದೆ ಎಂಬುದು ಈ ಒಂದು ತುರ್ತು ಸಭೆಯಲ್ಲಿ ಸಮಿತಿಯ ಸದಸ್ಯರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಿಂತಿದೆ.

Leave a Reply

Your email address will not be published. Required fields are marked *

error: Content is protected !!