Sunday, 30th June 2024

ಲೇಖಕಿ, ಹೋರಾಟಗಾರ್ತಿ ಅರುಂಧತಿ ರಾಯ್ ಪೆನ್ ಪಿಂಟರ್ ಪ್ರಶಸ್ತಿಗೆ ಭಾಜನ

ವದೆಹಲಿ: ಬೂಕರ್ ಪ್ರಶಸ್ತಿ ವಿಜೇತ ಲೇಖಕಿ, ಹೋರಾಟಗಾರ್ತಿ ಅರುಂಧತಿ ರಾಯ್ ಅವರು ಗುರುವಾರ ತಮ್ಮ ಬರಹಗಳಿಗಾಗಿ 2024ನೇ ಸಾಲಿನ ಪ್ರತಿಷ್ಠಿತ ಪೆನ್ ಪಿಂಟರ್ ಪ್ರಶಸ್ತಿ ಭಾಜನರಾಗಿದ್ದಾರೆ.

ನೊಬೆಲ್ ಪ್ರಶಸ್ತಿ ಪುರಸ್ಕೃತ ನಾಟಕಕಾರ ಹೆರಾಲ್ಡ್ ಪಿಂಟರ್ ಅವರ ನೆನಪಿಗಾಗಿ ಇಂಗ್ಲಿಷ್ PEN 2009 ರಲ್ಲಿ ಸ್ಥಾಪಿಸಿದ ವಾರ್ಷಿಕ ಪ್ರಶಸ್ತಿ ಇದಾಗಿದ್ದು, ಇದನ್ನು ಸಾಹಿತ್ಯದಲ್ಲಿ ಅಪರಿಮಿತ ಸಾಧನೆಗೈದವರಿಗೆ ನೀಡಲಾಗುತ್ತಿದೆ.

62 ವರ್ಷದ ಅರುಂಧತಿ ರಾಯ್ ಅವರು ಅಕ್ಟೋಬರ್ 10 ರಂದು ಬ್ರಿಟಿಷ್ ಲೈಬ್ರರಿ ಆಯೋಜನೆ ಮಾಡುವ ಸಮಾರಂಭದಲ್ಲಿ ಪೆನ್ ಪಿಂಟರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ಅರುಂಧತಿ ರಾಯ್, ಹೆರಾಲ್ಡ್ ಪಿಂಟರ್ ಇಂದು ನಮ್ಮೊಂದಿಗೆ ಇರಬೇಕಿತ್ತು ಎಂದು ಅನಿಸುತ್ತದೆ. ಅವರಂತೆ ಕೆಲಸ ಮಾಡಲು ನಮ್ಮಲ್ಲಿರುವವರು ತಮ್ಮ ಕೈಲಾದಷ್ಟು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!