Sunday, 30th June 2024

ಕಿಶನ್‌ಗಂಜ್ ಜಿಲ್ಲೆಯಲ್ಲಿ ಸೇತುವೆ ಕುಸಿತ

ಪಾಟ್ನಾ: ಬಿಹಾರದಲ್ಲಿ ಸೇತುವೆ ಕುಸಿತ ಸರಣಿ ಮುಂದುವರೆದಿದ್ದು ವಾರದೊಳಗೆ ನಾಲ್ಕು ಸೇತುವೆಗಳು ಕುಸಿದಿವೆ. ಗುರುವಾರ ಕಿಶನ್‌ಗಂಜ್ ಜಿಲ್ಲೆಯಲ್ಲಿ ಸೇತುವೆಯೊಂದು ಕುಸಿದು ಬಿದ್ದಿದೆ.

ಕಂಕೈ ನದಿಯ ಉಪನದಿಗೆ ನಿರ್ಮಿಸಲಾಗಿರುವ 70 ಮೀಟರ್ ಸೇತುವೆ ಕುಸಿದು ಬಿದ್ದಿದ್ದು ಎರಡು ಪಟ್ಟಣಗಳಾದ ಬಹದ್ದೂರ್‌ಗಂಜ್ ಮತ್ತು ದಿಘಲ್‌ ಬ್ಯಾಂಕ್ ಬ್ಲಾಕ್‌ಗಳನ್ನು ಸಂಪರ್ಕಿಸುತ್ತದೆ. ಈ ಸೇತುವೆ ಕುಸಿತವು ಎರಡು ಪಟ್ಟಣಗಳ ನಡುವಿನ ಸಂಪರ್ಕದ ಮೇಲೆ ಪರಿಣಾಮ ಬೀರಿದೆ. ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು ಹಾಗೂ ಬಲವಾದ ಪ್ರವಾಹದಿಂದಾಗಿ ಸೇತುವೆ ಮಧ್ಯದಲ್ಲಿ ಹಲವಾರು ಪಿಲ್ಲರ್​ಗಳು ಮುಳುಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೇತುವೆಯ ಮಧ್ಯ ಭಾಗ ಮುರಿದು ಬಿದ್ದಿದ್ದು ವೇಗವಾಗಿ ಹರಿಯುವ ನದಿ ನೀರನ್ನು ಸ್ಪರ್ಶಿಸುವುದನ್ನು ತೋರಿಸಿದ್ದು, ಅದು ಯಾವಾಗ ಬೇಕಾದರೂ ಕುಸಿದು ಬೀಳಬಹುದೆಂಬ ಆಂತಕವಿತ್ತು.  ಘಟನೆಯ ಬಗ್ಗೆ ಮಾಹಿತಿ ಪಡೆದ ಬಹದ್ದೂರ್‌ಗಂಜ್ ಪೊಲೀಸ್ ಠಾಣೆಯ ಮುಖ್ಯಸ್ಥ ಅಭಿನವ್ ಪರಾಸರ್ ತಮ್ಮ ತಂಡದೊಂದಿಗೆ ಸ್ಥಳಕ್ಕೆ ತಲುಪಿದ್ದು ತಕ್ಷಣವೇ ಎರಡೂ ತುದಿಗಳಲ್ಲಿ ಪ್ರದೇಶವನ್ನು ಬ್ಯಾರಿಕೇಡ್ ಮಾಡಿ ವಾಹನ ಸಂಚಾರವನ್ನು ನಿಲ್ಲಿಸಿದರು.

ಆರು ವರ್ಷಗಳ ಹಿಂದೆ ಸೇತುವೆ ನಿರ್ಮಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಂಕೈ ನದಿಯನ್ನು ಮಹಾನಂದಾಗೆ ಸಂಪರ್ಕಿಸುವ ಸಣ್ಣ ಉಪನದಿಯಾದ ಮಡಿಯ ಮೇಲೆ 2011 ರಲ್ಲಿ ಸೇತುವೆಯನ್ನು ನಿರ್ಮಿಸಲಾಗಿದೆ. ‘ನೇಪಾಳದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯು ನೀರಿನ ಮಟ್ಟದಲ್ಲಿ ಹಠಾತ್ ಏರಿಕೆಗೆ ಕಾರಣವಾಗಿದೆ. ಸೇತುವೆಯ ಒಂದು ಕಂಬವು ಬಲವಾದ ಪ್ರವಾಹವನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ.

Leave a Reply

Your email address will not be published. Required fields are marked *

error: Content is protected !!