Dr N Someshwara Column: ಜಿಬಿ ಸಿಂಡ್ರೋಮ್ ಮುನ್ನೆಚ್ಚರಿಕೆಯ ಮಂತ್ರ

ಅಮೆರಿಕದ 32ನೆಯ ಅಧ್ಯಕ್ಷನಾಗಿದ್ದ ಫ್ರಾಂಕ್ಲಿನ್ ರೂಸ್‌ವೆಲ್ಟ್ ತನ್ನ 39ನೆಯ ವರ್ಷದಲ್ಲಿ, ತನ್ನ ಸೊಂಟದ ಕೆಳಗಿನ ಭಾಗಗಳಲ್ಲಿ ಚಲನೆಯನ್ನು ಕಳೆದುಕೊಂಡ. ಇದಕ್ಕೆ ಕಾರಣ ಪೋಲಿಯೊ ಇರಬಹುದು ಎಂದು ಭಾವಿಸಿದ್ದರು. ಆದರೆ ಈಗ ನಮಗೆ ಈತನಿಗೆ ಜಿಬಿಎಸ್ ಆಗಿದ್ದಿರಬಹುದು ಎಂಬ ಗುಮಾನಿಯಿದೆ.

Syndrome ok

ಡಾ.ನಾ.ಸೋಮೇಶ್ವರ

ಜನವರಿ 27, 2025ರ ಅನ್ವಯ, ಪುಣೆಯ ಸಿಂಹಗಡ ನಗರದ ಆಸುಪಾಸಿನಲ್ಲಿ ಜನವರಿ 9, 2025 ರಿಂದ ಇಂದಿನವರೆಗೆ, 111 ಜನರಲ್ಲಿ ಜೀಲನ್ ಬರ್ಹೆ ಲಕ್ಷಣಾವಳಿಯು (ಫ್ರೆಂಚ್ ಹೆಸರು) ಕಂಡು ಬಂದಿದೆ. ಇವರಲ್ಲಿ 45 ವರ್ಷದ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ಒಬ್ಬರಿಗೆ ಸಾವು ಸಂಭವಿಸಿದೆ. 17 ರೋಗಿಗಳು ಪ್ರಸ್ತುತ ಲಕ್ಷಣಾವಳಿಯು ವೈಪರೀತ್ಯಗಳ ಕಾರಣ, ಶ್ವಾಸಕೋಶಗಳ ಸ್ನಾಯು ದುರ್ಬ ಲವಾಗಿವೆ. ಹಾಗಾಗಿ ಅವರು ವೆಂಟಿಲೇಟರ್ ನೆರವಿನಿಂದ ಜೀವವನ್ನು ಬಿಗಿ ಹಿಡಿದಿದ್ದಾರೆ. ಪುಣೆ ಮುನಿಸಿಪಲ್ ಕಾರ್ಪೊರೇಶನ್ ಕಮಲಾ ನೆಹರು ಆಸ್ಪತ್ರೆಯಲ್ಲಿ 45 ಹಾಸಿಗೆಯನ್ನು ಈ ಜೀಲನ್ ಬರ್ಹೆ ರೋಗಿಗಳ ಚಿಕಿತ್ಸೆಗೆಂದೇ ಮೀಸಲಿಟ್ಟಿದೆ.

ಈ ಸುದ್ದಿಯ ಹಿನ್ನೆಲೆಯಲ್ಲಿ ಭಾರತದ ಆರೋಗ್ಯ ಸಚಿವಾಲಯವು ತಜ್ಞರನ್ನು ದಿಲ್ಲಿ ಮತ್ತು ಬೆಂಗಳೂರಿನಿಂದ ಪುಣೆಗೆ ರವಾನಿಸಿದೆ.

ಇದನ್ನೂ ಓದಿ: Dr N Someshwara Column: ಕ್ಯಾಲಾಬಾರ್‌ ಅವರೆಯ ವಿಷದಿವ್ಯ !

ಜಿಬಿಎಸ್ ಕಾಯಿಲೆಯನ್ನು ಮೊದಲ ಬಾರಿಗೆ 1916ರಲ್ಲಿ ಜಾರ್ಜೆಸ್ ಚಾರ್ಲ್ಸ್ ಜೀಲನ್ (1876-1961), ಜೀನ್ ಅಲೆ ಗ್ಸಾಂಡರ್ ಬರ್ಹೆ (1880-1967) ಮತ್ತು ಆಂಡ್ರೆ ಸ್ಟೋಲ್ (1887-1977) ಎಂಬ ವೈದ್ಯರು ಗಮನಿಸಿದರು. ಮೊದಲ ನೆಯ ಮಹಾಯುದ್ಧದಲ್ಲಿ ಭಾಗವಹಿಸಿದ ಇಬ್ಬರು ಯೋಧರಲ್ಲಿ ಜಿಬಿಎಸ್ ಕಂಡುಬಂದಿತ್ತು.

ಅವರನ್ನು ಪರೀಕ್ಷಿಸಿ, ಈ ಹೊಸ ರೋಗದ ಪ್ರಾಥಮಿಕ ವರದಿಯನ್ನು ನೀಡಿದ ಕಾರಣ, ವಿಜ್ಞಾನಿ ಗಳು ಈ ಕಾಯಿಲೆಗೆ ಅವರ ಹೆಸರನ್ನೇ ಇಟ್ಟರು. 1930ರಲ್ಲಿ ನರಸಂಜ್ಞಾ ವಹನ ಪರೀಕ್ಷೆಯನ್ನು (ನರ್ವ್ ಕಂಡಕ್ಷನ್ ಟೆಸ್ಟ್) ರೂಪಿಸಿದರು. ಈ ಪರೀಕ್ಷೆಯ ನೆರವಿನಿಂದ ಪರಿಧಿಯ ನರಗಳ ಆರೋಗ್ಯ ಮಟ್ಟವನ್ನು ತಿಳಿಯುವುದು ಸುಲಭವಾಯಿತು. ಪೋಲಿಯೊ ಮತ್ತು ಮಲ್ಟಿಪಲ್ ಸ್ಕ್ಲೀರೋಸಿಸ್ ಎಂಬ ಕಾಯಿಲೆಗಳ ನರಸಂಜ್ಞಾ ವಹನಕ್ಕೂ ಹಾಗೂ ಜಿಬಿಎಸ್ ವಹನಕ್ಕೂ ಭಿನ್ನ ಲಕ್ಷಣ ಗಳಿರುತ್ತವೆ.

ಹಾಗಾಗಿ ರೋಗ ನಿಧಾನದಲ್ಲಿ ನರಸಂಜ್ಞಾ ವಹನ ಪರೀಕ್ಷೆಯು ಹೆಚ್ಚು ಉಪಯುಕ್ತವಾಯಿತು. 1950-60 ದಶಕಗಳಲ್ಲಿ ನಡೆದ ಸಂಶೋಧನೆಗಳ ಫಲವಾಗಿ ಜಿಬಿಎಸ್‌ನಲ್ಲಿ ನಮೂನೆಗಳಿರುವುದು ತಿಳಿದುಬಂದಿತು. ಪ್ರಧಾನವಾದ ನಮೂನೆ ಎಂದರೆ ಎಐಡಿಪಿ ಅಥವಾ ಅಕ್ಯೂಟ್ ಇನ್ ಫ್ಲಮೇಟರಿ ಡಿಮಯಲಿನೇಟಿಂಗ್ ಪಾಲಿನ್ಯೂರೋಪಥಿ. ಇಲ್ಲಿ, ನರಸಂಜ್ಞೆಗಳು ನರದಲ್ಲಿ ಸರಾಗವಾಗಿ ಹರಿ ಯಲ್ಲಿ ನೆರವಾಗುವ, ನರಗಳ ಮೇಲೆ ಇರುವ ವಿಶೇಷ ಕೊಬ್ಬಿನ ಪದರವು ಕರಗಲಾರಂಭಿಸುತ್ತದೆ. ಆಗ ನರಸಂಜ್ಞೆಗಳ ಸಂವಹನಗಳು ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತವೆ. ಆಗ ಜೋಮು, ಸೆಡೆತದ ಜತೆಯಲ್ಲಿ ಕೆಲಸ ಕಾರ್ಯಗಳು ತೀವ್ರಸ್ವರೂಪದಲ್ಲಿ ಕಡಿಮೆಯಾಗುತ್ತಾ ಕೊನೆಗೆ ಪೂರ್ಣ ನಿಲ್ಲಿಸುತ್ತವೆ.

ಮಿಲ್ಲರ್ ಫಿಶರ್ ಸಿಂಡ್ರೋಮ್ ಮತ್ತು ಅಕ್ಯೂಟ್ ಮೋಟಾರ್ ಆಕ್ಸೋನಲ್ ನ್ಯೂರೋಪಥಿ ಎಂಬ ಎರಡು ಇತರ ನಮೂನೆಗಳು ಸ್ವಲ್ಪ ಅಪರೂಪವಾಗಿರುವಂತಹವು. ೧೯೬೦ರಲ್ಲಿ ದೊರೆತ ನರಗಳ ಎಲೆಕ್ಟ್ರೋಫಿಸಿಯಲಾಜಿಕಲ್ ಸ್ಟಡೀಸ್ ನೆರವಿನಿಂದ ಈ ನಮೂನೆಗಳನ್ನು ಕರಾರುವಾಕ್ಕಾಗಿ ಗುರುತಿಸುವುದು ಸುಲಭವಾಯಿತು.

1970ರ ದಶಕದಲ್ಲಿ ನಡೆದ ಸಂಶೋಧನೆಗಳು, 2-3 ಪ್ರಕರಣಗಳಲ್ಲಿ ಜಿಬಿಎಸ್ ಸಾಮಾನ್ಯವಾದ ಭೇದಿ ಅಥವ ಶ್ವಾಸಕೋಶಗಳ ಸೋಂಕಿನಿಂದ ಆರಂಭವಾಗುತ್ತದೆ ಎನ್ನುವುದಕ್ಕೆ ಪುರಾವೆಯನ್ನು ಒದಗಿ ಸಿವೆ. ಸುಮಾರು 30%ರಷ್ಟು ಪ್ರಕರಣಗಳಲ್ಲಿ ಕಂ.ಜೆಜುನಿ ಹಾಗೂ 10% ಪ್ರಕರಣಗಳಲ್ಲಿ ಸೈಟೋ ಮೆಗಾಲೋ ವೈರಸ್ ಕಾರಣವಾಗಿರುತ್ತದೆ.

ಎಪ್‌ಸ್ಟೀನ್ ಬಾರ್ ವೈರಸ್, ವೇರಿಸೆಲ್ಲ ಜೋಸ್ಟರ್ ವೈರಸ್, ಮೈಕೋಪ್ಲಾಸ್ಮ ನ್ಯುಮೋನಿಯೆ, ಡೇಂಘೀ ವೈರಸ್ ಮತ್ತು ಜಿಕಾ ವೈರಸ್ಸುಗಳ ಸೋಂಕುಗಳಿಂದ ನರಳುವವರಲ್ಲಿ, ಅಪರೂಪಕ್ಕೆ ಕೆಲವರಲ್ಲಿ ಮಾತ್ರ ಜಿಬಿಎಸ್ ಕಂಡುಬರಬಹುದು. ಪ್ರಸ್ತುತ ಪುಣೆಯಲ್ಲಿ ಕಂಡುಬಂದಿರುವ ಪ್ರಕರಣಗಳಲ್ಲಿ ಕಂಪೈಲೋಬ್ಯಾಕ್ಟರ್ ಜೆಜುನಿ ಎಂಬ ಬ್ಯಾಕ್ಟೀರಿಯವು ಅಪರಾಧಿ ಸ್ಥಾನದಲ್ಲಿ ನಿಂತಿದೆ.

1976ರಲ್ಲಿ ಹಂದಿಜ್ವರವು ಅಥವಾ ಎಚ್1ಎನ್1 ಸೋಂಕು ಕಾಣಿಸಿಕೊಂಡಿತು. ಆಗ ಅದರ ನಿಯಂತ್ರಣಕ್ಕೆ ಲಸಿಕೆಯನ್ನು ತೆಗೆದುಕೊಂಡ ಕೆಲವರಲ್ಲಿ ಜಿಬಿಎಸ್ ಕಂಡುಬಂದಿತು. ಹಾಗಾಗಿ ಲಸಿಕೆಯ ತಯಾರಿಕೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುವುದು ಸಾಮಾನ್ಯವಾಯಿತು. ಕೋವಿಡ್-19 ಲಸಿಕೆಯನ್ನು ತೆಗೆದುಕೊಂಡ ಕೆಲವರಲ್ಲಿ ಜಿಬಿಎಸ್ ಕಂಡುಬಂದಿರುವುದು ವರದಿಯಾಗಿದೆ.

ಜಿಮಿಲಿಡೈನ್ ಎನ್ನುವ ಖಿನ್ನತೆ ರೋಧಕ ಔಷಧವನ್ನು ಸೇವಿಸುವವರಲ್ಲೂ ಜಿಬಿಎಸ್ ಕಂಡುಬಂದ ಕಾರಣ, ಈ ಔಷಧವನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯಲಾಯಿತು.

ಬ್ಯಾಕ್ಟೀರಿಯ ಅಥವಾ ವೈರಲ್ ಸೋಂಕು ಆದ 2-3 ವಾರಗಳ ನಂತರ ಜಿಬಿಎಸ್ ಲಕ್ಷಣಗಳು ಆರಂಭ ವಾಗುತ್ತವೆ. ಜಿಬಿಎಸ್ ಬಂದಾಗ ಕಾಲುಗಳಲ್ಲಿ ಜೋಮು ಕಾಣಿಸಿಕೊಳ್ಳುತ್ತದೆ. ಯಾರೋ ಅಂಗಾಲು, ಅಂಗೈ, ಹಿಮ್ಮಡಿ, ಮಣಿಕಟ್ಟುಮುಂತಾದ ಭಾಗಗಳಲ್ಲಿ ಗುಂಡುಸೂಜಿಯಿಂದ ಚುಚ್ಚುತ್ತಿದ್ದಾರೋ ಎಂಬ ಅನುಭವವಾಗುತ್ತದೆ. ನಂತರ ಎರಡೂ ಕಾಲುಗಳು ಶಕ್ತಿಹೀನವಾಗುತ್ತವೆ.

ಈ ಶಕ್ತಿಹೀನತೆಯು ಕಾಲುಗಳಿಂದ ಆರಂಭವಾಗುವ ಈ ಲಕ್ಷಣಗಳು ದಿನೇ ದಿನೇ ಕಾಲು ಗಳಿಗೂ, ಉದರಕ್ಕೂ, ಎದೆಯ ಕಡೆಗೂ ಸಾಗುತ್ತವೆ. ಕ್ರಮೇಣ ಸ್ನಾಯು ದೌರ್ಬಲ್ಯದ ಕಾರಣ ನಡೆಯುವುದು ಕಷ್ಟವಾಗುತ್ತದೆ. ಅಸ್ಥಿರತೆಯು ಕಂಡುಬರುತ್ತದೆ. ಮೆಟ್ಟಿಲುಗಳನ್ನು ಏರಲು ಅಥವಾ ಇಳಿಯಲು ಕಷ್ಟವಾಗುತ್ತದೆ.

ಮಾತನಾಡುವುದು, ನೀರನ್ನು ಕುಡಿಯುವುದು, ಆಹಾರವನ್ನು ನುಂಗುವುದು ಕಷ್ಟವಾಗುತ್ತದೆ. ಮುಖದಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವುದು ಕಷ್ಟವಾಗುತ್ತದೆ. ದೃಷ್ಟಿಯು ಎರಡೆರಡಾಗಿ ಕಾಣ ಲು ಆರಂಭಿಸುತ್ತದೆ. ಕಣ್ಣುಗಳನ್ನು ಚಲಿಸುವುದೂ ಕಷ್ಟವಾಗಿ ಬಿಡುತ್ತದೆ. ಕೈಕಾಲುಗಳಲ್ಲಿ ವಿಪರೀತ ನೋವು, ಸೆಳೆತ ಹಾಗೂ ತಡೆಯಲ ಸಾಧ್ಯವಾದ ನೋವು ಆರಂಭವಾಗಿ ರಾತ್ರಿಯಲ್ಲಿ ನೋವು ಗರಿಷ್ಠ ಮಟ್ಟವನ್ನು ತಲುಪುತ್ತದೆ.

ಮಲಮೂತ್ರ ಸಮಸ್ಯೆ, ಹೃದಯ ಬಡಿತದಲ್ಲಿ ಹೆಚ್ಚಳ, ರಕ್ತದೊತ್ತಡದಲ್ಲಿ ಏರಿಳಿತ ಕಂಡುಬರುತ್ತದೆ. ಜೋಮು ಉಸಿರಾಟದ ಸ್ನಾಯುಗಳಿಗೆ ಹರಡಿದಾಗ ಉಸಿರಾಡುವುದು ಕಷ್ಟವಾಗುತ್ತದೆ. ಆಗ ರೋಗಿ ಯನ್ನು ವೆಂಟಿಲೇಟರ್ ಯಂತ್ರಕ್ಕೆ ಅಳವಡಿಸಿ, ಕೃತಕವಾಗಿ ಉಸಿರಾಟವು ನಡೆಯುವಂತೆ ನೋಡಿ ಕೊಳ್ಳಬೇಕಾಗುತ್ತದೆ.

ಸ್ನಾಯುಗಳು ಪೂರ್ಣ ಪ್ರಮಾಣದಲ್ಲಿ ನಿಶ್ಚೇತವಾದಾಗ ಗಂಭೀರ ಸ್ವರೂಪದ ಸಮಸ್ಯೆಗಲು ತಲೆದೋರುತ್ತವೆ. ಜನಸಾಮಾನ್ಯರು, 2-3 ವಾರಗಳ ಹಿಂದೆ ಕರುಳು ಸೋಂಕು ಇಲ್ಲವೇ ಶ್ವಾಸ ಕೋಶಗಳ ಸೋಂಕಿಗೆ ಒಳಗಾಗಿದ್ದು, ಈಗ ಕಾಲುಗಳಲ್ಲಿ ಜೋಮು ಅಥವಾ ಸೂಜಿಯಿಂದ ಚುಚ್ಚುವ ಅನುಭವ ಆಗುತ್ತಿರುವಂತೆಯೇ ತಕ್ಷಣವೇ ನರವೈದ್ಯರನ್ನು (ನ್ಯೂರಾಲಜಿಸ್ಟ್) ಕಾಣುವುದು ಒಳಿತು. ಜಿಬಿಎಸ್ ಒಂದು ಗಂಭೀರ ಸಮಸ್ಯೆ. ಇದು ತೀವ್ರವಾಗಿ ವ್ಯಾಪಿಸುವ ಕಾರಣ, ಎಷ್ಟು ಬೇಗ ಸಾಧ್ಯ ವೋ ಅಷ್ಟು ಬೇಗ ವೈದ್ಯರನ್ನು ಕಾಣುವುದು ಒಳಿತು.

ವೈದ್ಯರು ಬೆನ್ನುಮೂಳೆಯಿಂದ ನೀರು (ಮಸ್ತಿಷ್ಕ ಮೇರು ದ್ರವ, ಸೆರೆಬ್ರೋಸ್ಪೈನಲ್ ಫ್ಲೂಯಿಡ್) ನರಸಂಜ್ಞಾ ಸಂವಹನ ಪರೀಕ್ಷೆಗಳು, ಎಲೆಕ್ಟ್ರೋಮಯೋಗ್ರಾಫಿ ಮುಂತಾದ ಪರೀಕ್ಷೆಗಳನ್ನು ಮಾಡಬಹುದು. ಜಿಬಿಎಸ್ ಸಮಸ್ಯೆಯನ್ನು ಗುಣಪಡಿಸಬಲ್ಲಂತಹ ರಾಮಬಾಣ ಸ್ವರೂಪದ ಚಿಕಿತ್ಸೆಯಿಲ್ಲ.

ಇಮ್ಯುನೋಥೆರಪಿ, ಪ್ಲಾಸ್ಮಫೆರೆಸಿಸ್ ಮುಂತಾದ ಚಿಕಿತ್ಸೆಗಳು ಲಭ್ಯವಿದೆ. ಉಸಿರಾಟಕ್ಕೆ ತೊಂದರೆ ಯಾದರೆ ವೆಂಟಿಲೇಟರ್ ನೆರವನ್ನು ಒದಗಿಸಬೇಕಾಗುತ್ತದೆ. ನೋವು ನಿವಾರಕ ಔಷಧಗಳನ್ನು ನಿತ್ಯ ನೀಡಬೇಕಾಗಿ ಬರಬಹುದು. ನಾವು ಎಷ್ಟೇ ಎಚ್ಚರಿಕೆ ಹಾಗೂ ಆರೈಕೆಯನ್ನು ನೀಡಿದರೂ ಸುಮಾರು 5% ರೋಗಿಗಳು ಸಾಯುವುದು ಖಚಿತವಾಗಿರುತ್ತದೆ. ಉಳಿದವರಲ್ಲಿ ಶೇಷ ನಿಸ್ಚೇತತೆ ಉಳಿಯ ಬಹುದು.

ಮುನ್ನೆಚ್ಚರಿಕೆ: ಜಿಬಿಎಸ್ ಬಂದ ಮೇಲೆ ಪೂರ್ಣ ಗುಣಪಡಿಸುವುದು ಕಷ್ಟ. ಹಾಗಾಗಿ ಜಿಬಿಎಸ್ ಆರಂಭವಾಗಲು, ಪ್ರಚೋದಿಸುವ ನಾನಾ ಸೋಂಕುಗಳು ನಮಗೆ ಅಂಟದಂತೆ ಎಚ್ಚರವಹಿಸ ಬೇಕಾಗುತ್ತದೆ. ಹಾಗಾಗಿ ನಮಗೆ ಯಾವುದೇ ರೀತಿಯ ಸೋಂಕು ತಗುಲದಂತಹ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ವಾಂತಿ ಮತ್ತು ಭೇದಿಯಾಗದಂತೆ ತಡೆಗಟ್ಟಲು, ಚೆನ್ನಾಗಿ ಬೇಯಿಸಿದ ಆಹಾರ ಪದಾರ್ಥಗಳನ್ನು ಮಾತ್ರ ಸೇವಿಸಬೇಕು ಹಾಗೂ ಕಾಯಿಸಿ ಆರಿಸಿದ ನೀರನ್ನು ಮಾತ್ರ ಕುಡಿಯಬೇಕು.

ಸಮಾರಂಭಗಳಲ್ಲಿ ಬೇಯಿಸದ ಸಲಾಡ್, ಮೊಸರುಬಜ್ಜಿ, ಚಟ್ನಿ, ಕೋಸಂಬರಿಗಳನ್ನು ತಿನ್ನ ಬಾರದು. ರಸ್ತೆ ಬದಿಯ ತಿಂಡಿಗಳನ್ನು ಹಾಗೂ ಕತ್ತರಿಸಿಟ್ಟ ಹಣ್ಣುಗಳನ್ನು ಸೇವಿಸಬಾರದು. ಮಾರು ಕಟ್ಟೆಯಿಂದ ತಂದ ಸೊಪ್ಪು, ತರಕಾರಿ, ಹಣ್ಣುಗಳನ್ನು ಚೆನ್ನಾಗಿ ತೊಳೆಯಬೇಕು. ಅವನ್ನು ಉಪ್ಪು ನೀರಿನಲ್ಲಿ 20 ನಿಮಿಷಗಳಾದರೂ ನೆನೆಯಿಸಿ ಇಟ್ಟು, ನಂತರ ತೊಳೆದು ಉಪಯೋಗಿಸಬೇಕು.

ಕರೋನಾ ಅವಧಿಯಲ್ಲಿ ಕೈಗಳನ್ನು ತೊಳೆದು ಕೊಳ್ಳುತ್ತಿದ್ದ 60 ಸೆಕಂಡುಗಳ ಅವಧಿಯ, ಆರು ಹಂತದ ಸ್ವಚ್ಛಗೊಳಿಸುವ ವಿಧಾನವನ್ನು ಅನುಸರಿಸಿ, ಕೈಗಳನ್ನು ತೊಳೆದುಕೊಳ್ಳಬೇಕು.

ಜನಸಂದಣಿ ಅಧಿಕವಾಗಿರುವ ಕಡೆ ಹೋಗದಿರುವುದು ಒಳ್ಳೆಯದು. ಹೋಗಬೇಕಾದರೆ ಮಾಸ್ಕ್ ಧರಿಸಲೇಬೇಕು. ಯಾವುದೇ ಅನಾರೋಗ್ಯವಾಗಲಿ, ಪೂರ್ಣಪ್ರಮಾಣದ ಚಿಕಿತ್ಸೆಯನ್ನು ಪಡೆಯು ವುದು ಬಹಳ ಮುಖ್ಯ.

ಏನಿದು ಜೀಲನ್ ಬರ್ಹೆ ಲಕ್ಷಣಾವಳಿ?

ಇದೊಂದು ಅಪರೂಪದ ಸ್ವಯಂ ವಿನಾಶಕ ರೋಗ. 10000 ಜನರಲ್ಲಿ 1-2 ಮಾತ್ರ ಬರುವಂತ ಹದ್ದು. ಇದನ್ನು ಸಂಕ್ಷಿಪ್ತವಾಗಿ ಜಿಬಿಎಸ್ ಎಂದು ಗುರುತಿಸುವ ಪದ್ಧತಿಯಿದೆ. ನಮ್ಮ ಮಾನವ ದೇಹದ ಮಿಲಿಟರಿ ಪಡೆಯಾದ ನಮ್ಮ ರೋಗರಕ್ಷಣಾ ವ್ಯವಸ್ಥೆ ಅಥವಾ ಇಮ್ಯೂನ್ ಸಿಸ್ಟಮ್, ನಮ್ಮ ದೇಹದ ಮೇಲೆಯೇ ದಾಳಿ ಮಾಡುವ ವಿಚಿತ್ರ ಸನ್ನಿವೇಶದ ಫಲವಾಗಿ ರೂಪುಗೊಳ್ಳುವ ರೋಗ ಲಕ್ಷಣಗಳ ಸಮುಚ್ಚಯವೇ ಜಿಬಿಎಸ್. ನಮ್ಮ ರಕ್ಷಣಾ ವ್ಯವಸ್ಥೆಯು ನಮ್ಮ ಪರಿಧಿಯ

ನರಗಳನ್ನು (ಪೆರಿಫೆರಲ್ ನರ್ವ್ಸ್) ಪರಕೀಯ ಎಂದು ಭಾವಿಸಿ, ಅವುಗಳ ಮೇಲೆ ಯುದ್ಧವನ್ನುಸಾರಿ ಅವುಗಳನ್ನು ದುರ್ಬಲಗೊಳಿಸುತ್ತದೆ. ಈ ಪರಿಧಿಯ ನರಗಳು ಪ್ರಧಾನವಾಗಿ ನಮ್ಮ ದೇಹದ ಸ್ನಾಯುಗಳ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತವೆ. ಹಾಗಾಗಿ ಜಿಬಿಎಸ್ ಬಂದಾಗ ನಮ್ಮ ಸ್ನಾಯುಗಳು ದುರ್ಬಲವಾಗುತ್ತಾ ಹೋಗಿ, ಕೊನೆಗೆ ಸಂಪೂರ್ಣವಾಗಿ ನಿಶ್ಚೇತಗೊಳ್ಳುತ್ತವೆ.

ಈ ಸಮಸ್ಯೆಯು ಸಾಮಾನ್ಯವಾಗಿ ಪಾದಗಳಿಂದ ಆರಂಭವಾಗಿ ತಲೆಯ ಕಡೆಗೆ ಸಾಗುತ್ತದೆ. ಆದರೆ ಮಿದುಳು ಮಾತ್ರ ಪೂರ್ಣರೂಪದಲ್ಲಿ ಸ್ವಸ್ಥವಾಗಿರುತ್ತದೆ.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?