ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: ಕೌಟುಂಬಿಕ ಕಲಹ, ಮಕ್ಕಳನ್ನು ಬಾವಿಗೆ ನೂಕಿ ತಾಯಿ ಆತ್ಮಹತ್ಯೆ

ಮೊದಲು ಮಕ್ಕಳನ್ನು ( Children) ಬಾವಿಗೆ ತಳ್ಳಿ ಬಳಿಕ ಸುಶೀಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಮೀನಿನ ಮಾಲೀಕ ಬಾವಿಗೆ ನೀರು ತರಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಮಲೆಮಹದೇಶ್ವರ ಬೆಟ್ಟ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ಮಾಡಿದ್ದಾರೆ. ಮಲೆ ಮಹದೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕೌಟುಂಬಿಕ ಕಲಹ, ಮಕ್ಕಳನ್ನು ಬಾವಿಗೆ ನೂಕಿ ತಾಯಿ ಆತ್ಮಹತ್ಯೆ

ಹರೀಶ್‌ ಕೇರ ಹರೀಶ್‌ ಕೇರ Apr 15, 2025 7:22 AM

ಚಾಮರಾಜನಗರ: ಕೌಟುಂಬಿಕ ಕಲಹ ಹಿನ್ನೆಲೆ ಇಬ್ಬರು ಮಕ್ಕಳ ಜೊತೆ ತಾಯಿ (Mother) ಬಾವಿಗೆ ಹಾರಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಜಿಲ್ಲೆಯ (Chamarajanagara news) ಹನೂರು ತಾಲೂಕಿನ ಮಹದೇಶ್ವರ ಬೆಟ್ಟ ಬಳಿಯ ಕಾಡುಹೊಲ ಗ್ರಾಮದಲ್ಲಿ ನಡೆದಿದೆ. ಸುಶೀಲಾ(30), ಪುತ್ರಿ ದಿವ್ಯಾ(11), ಪುತ್ರ ಚಂದ್ರು (8) ಮೃತರು. ಮೊದಲು ಮಕ್ಕಳನ್ನ ( Children) ಬಾವಿಗೆ ತಳ್ಳಿ ಬಳಿಕ ಸುಶೀಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಮೀನಿನ ಮಾಲೀಕ ಬಾವಿಗೆ ನೀರು ತರಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಮಲೆಮಹದೇಶ್ವರ ಬೆಟ್ಟ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ಮಾಡಿದ್ದಾರೆ. ಮಲೆ ಮಹದೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೀದರ್‌ನಲ್ಲಿ ಬಾಲಕಿಯ ಅಪಹರಣ ಯತ್ನ

ಬೀದರ್: ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಕೊಲೆ ಪ್ರಕರಣದ ಬೆನ್ನಲ್ಲೇ ಬೀದರ್‌ನಲ್ಲಿ ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಹುಬ್ಬಳ್ಳಿಯಲ್ಲಿ ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ ಮಾಡಲಾಗಿತ್ತು. ಇದೀಗ ಬೀದರ್‌ನಲ್ಲಿ ಗೇಟ್ ಬಳಿ ಆಡುತ್ತಿದ್ದ ಬಾಲಕಿಯನ್ನು ಯುವಕನೊಬ್ಬ ಅಪಹರಿಸಲು ಯತ್ನಿಸಿದ್ದು, ಈ ದೃಶ್ಯ ಸಿಟಿಟಿವಿಯಲ್ಲಿ ಸೆರೆಯಾಗಿದೆ. ಬೀದರ್‌ನ ವಿದ್ಯಾನಗರ ಬಡಾವಣೆಯ 11ನೇ ಕ್ರಾಸ್‌ನಲ್ಲಿರುವ ಸತೀಶ್ ಬಕ್ಕಾಚೌಡೇಕರ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.

ಮನೆ ಮುಂದೆ ಬಾಲಕಿ ಆಟವಾಡುತ್ತಿದ್ದಾಗ, ಯುವಕನೊಬ್ಬ ಮನೆ ಮುಂದೆ ಬೈಕ್ ನಿಲ್ಲಿಸಿ, ಸ್ವಲ್ಪ ಹೊತ್ತು ನೋಡಿಕೊಂಡು ನಿಂತಿದ್ದಾನೆ. ಬಳಿಕ ಗೇಟ್ ಒಳಗೆ ಹೋಗಿ ಅಲ್ಲೇ ಆಟ ಆಡುತ್ತಿದ್ದ ಇಬ್ಬರು ಬಾಲಕಿಯರ ಪೈಕಿ ಒಬ್ಬಳನ್ನು ಅಪಹರಿಸಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಪೋಷಕರು ಹೊರಬರುತ್ತಿದ್ದಂತೆ ಬೈಕ್ ಸಮೇತ ಯುವಕ ಪರಾರಿಯಾಗಿದ್ದಾನೆ. ಬಾಲಕಿಯನ್ನು ಅಪಹರಿಸಲು ಯತ್ನಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಯುವಕನ ಅಸಭ್ಯ ವರ್ತನೆಯ ಬಗ್ಗೆ ಬಾಲಕಿಯರು ಪೋಷಕರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Bagalkot News: ಮಲಪ್ರಭಾ ನದಿಯಲ್ಲಿ ಮುಳುಗಿ ಯೋಧ ಸೇರಿ ಇಬ್ಬರ ಸಾವು; ಬಾಲಕನ ರಕ್ಷಿಸಲು ಹೋಗಿ ನೀರುಪಾಲು