ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Assault: ಬೀಚ್‌ನಲ್ಲಿ ಪ್ರೇಮಿಯೊಂದಿಗಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; 10 ಮಂದಿಯ ಬಂಧನ

20 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ (Physical Assault) ನಡೆಸಿದ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಗಂಜಾಂ ಜಿಲ್ಲೆಯ ಗೋಪಾಲಪುರ ಪ್ರದೇಶದ ಸಮುದ್ರ ತೀರದಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರೇಮಿಯೊಂದಿಗಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ಆರೋಪಿಗಳ ಬಂಧನ

Profile Vishakha Bhat Jun 17, 2025 1:24 PM

ಭುವನೇಶ್ವರ್‌: 20 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ (Physical Assault) ನಡೆಸಿದ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಗಂಜಾಂ ಜಿಲ್ಲೆಯ ಗೋಪಾಲಪುರ ಪ್ರದೇಶದ ಸಮುದ್ರ ತೀರದಲ್ಲಿ ಈ ಘಟನೆ ನಡೆದಿದೆ. ಖಾಸಗಿ ಕಾಲೇಜಿನ ಪದವಿಪೂರ್ವ ವಿದ್ಯಾರ್ಥಿನಿಯಾಗಿರುವ ಯುವತಿ ಈ ಕುರಿತು ದೂರು ದಾಖಲಿಸಿದ್ದಾಳೆ. ಖಾಸಗಿ ಮೆಸ್‌ನಲ್ಲಿ ವಾಸಿಸುವ ಆಕೆ ಭಾನುವಾರ ರಾತ್ರಿ ತನ್ನ ಸ್ನೇಹಿತನ ಜೊತೆ ಬೀಚ್‌ಗೆ ತೆರಳಿದ್ದಳು. ಅಲ್ಲಿ ಆಕೆಯ ಮೇಲೆ 10 ಜನರ ಗುಂಪು ಅತ್ಯಾಚಾರ ಎಸಗಿದೆ. ಈ ಕುರಿತು ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯುವತಿ ನೀಡಿದ ದೂರಿನಲ್ಲಿ, ನಾನು ಹಾಗೂ ನನ್ನ ಗೆಳೆಯ ಏಕಾಂತ ಸ್ಥಳದಲ್ಲಿ ಕುಳಿತಿದ್ದಾಗ ,10 ಜನರ ಗುಂಪು ತಮ್ಮ ಬಳಿಗೆ ಬಂದು, ತನ್ನ ಗೆಳೆಯನನ್ನು ಬಂಧಿಸಿ ನನ್ನನ್ನು ಹೊತ್ತೊಯ್ದೊರು. ಆಮೇಲೆ 10 ಜನರು ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು ಅಪರಾಧದಲ್ಲಿ ಭಾಗಿಯಾದ ಎಲ್ಲಾ 10 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಗಳೆಲ್ಲರೂ ವಯಸ್ಕರು, ಮತ್ತು ನಾವು ಅವರನ್ನು ವಿವಿಧ ಕೋನಗಳಿಂದ ವಿಚಾರಣೆ ನಡೆಸುತ್ತಿದ್ದೇವೆ" ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಗಳು ಸ್ಥಳೀಯರಲ್ಲ ಮತ್ತು ಹಬ್ಬದ ಸಂದರ್ಭದಲ್ಲಿ ಬೀಚ್‌ಗೆ ಭೇಟಿ ನೀಡಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಬಂಧಿತ ವ್ಯಕ್ತಿಗಳ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Police Firing: ದಿವ್ಯಾಂಗ ಮಹಿಳೆಗೆ ಲೈಂಗಿಕ ದೌರ್ಜನ್ಯ, ದರೋಡೆ: ಆರೋಪಿಯ ಕಾಲಿಗೆ ಗುಂಡು

ಪ್ರತ್ಯೇಕ ಘಟನೆಯಲ್ಲಿ 19 ವರ್ಷದ ಅಪ್ರಾಪ್ತೆಯನ್ನು ಅಪಹರಿಸಿ, ಒಂದು ವಾರದಲ್ಲಿ 23 ಪುರುಷರಿಂದ ಸಾಮೂಹಿಕ ಅತ್ಯಾಚಾರ ಎಸಗಿದ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಉತ್ತರ ವಾರಣಾಸಿಯ ಲಾಲ್‌ಪುರ ಪ್ರದೇಶದ ನಿವಾಸಿಯಾದ ಹದಿಹರೆಯದ ಬಾಲಕಿ ಮಾರ್ಚ್ 29 ರಂದು ಸ್ನೇಹಿತನನ್ನು ಭೇಟಿ ಮಾಡಲು ಮನೆಯಿಂದ ಹೊರಟಿದ್ದಳು. ಏಪ್ರಿಲ್ 4ರಂದು ಆಕೆಯ ಕುಟುಂಬದಿಂದ ಆಕೆ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಲಾಗಿತ್ತು. ಬಂಧಿತರಲ್ಲಿ ಕೆಲವರು ಹುಕುಲ್‌ಗಂಜ್ ಮತ್ತು ಲಲ್ಲಾಪುರ ಪ್ರದೇಶಗಳವರಾಗಿದ್ದು, ಅದೇ ರಾತ್ರಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಅವರಲ್ಲಿ ಕೆಲವರು ಅಪ್ರಾಪ್ತರಾಗಿರುವ ಹಿನ್ನೆಲೆ ಎಂಬ ಕಾರಣಕ್ಕೆ ಪೊಲೀಸರು ಹೆಚ್ಚಿನ ವಿವರರಗಳನ್ನು ತಿಳಿಸಿಲ್ಲ.