Kidnap Case: ನರ್ಸಿಂಗ್ ಓದುತ್ತಿದ್ದ ಯುವತಿ ನಾಪತ್ತೆ, ಯುವಕನ ಮೇಲೆ ಅಪಹರಣ ಕೇಸ್
ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಾರೆ ಕೆಲಸ ಮಾಡ್ತಿದ್ದ ಸದ್ರುದ್ದೀನ್ ಬೇಪಾರಿ ಎಂಬಾತನ ವಿರುದ್ಧ ಯುವತಿ ಕುಟುಂಬದವರು ಅಪಹರಣದ ಆರೋಪ ಹೊರಿಸಿದ್ದಾರೆ. 17 ದಿನಗಳ ಹಿಂದೆ ಹಿಂದೂ ಹುಡುಗಿಯನ್ನು ಸದ್ರುದ್ದೀನ್ ಎಂಬಾತ ಅಪಹರಿಸಿ ಕರೆದೊಯ್ದಿದ್ದಾನೆ ಎಂದು ದೂರಲಾಗಿದೆ.

ಬೆಳಗಾವಿ ಕಿಡ್ನಾಪ್ ಪ್ರಕರಣ

ಬೆಳಗಾವಿ : ಬೆಳಗಾವಿಯಲ್ಲಿ (Belagavi news) ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯ (Nursing Student) ಕಿಡ್ನಾಪ್ (kidnap case) ಆಗಿದ್ದು, ಮಗಳನ್ನು ಯುವಕ ಅಪಹರಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ರುದ್ದೀನ್ ಭೇಪಾರಿ ಎಂಬ ಯುವಕ ಮತ್ತು ನರ್ಸಿಂಗ್ ಓದುತ್ತಿದ್ದ ಯುವತಿ ನಡುವೆ ಸ್ನೇಹ ಬೆಳೆದಿತ್ತು. ನಂತರ ಈ ಸ್ನೇಹ ಪ್ರೀತಿಗೆ ತಿರುಗಿ ಎರಡರಿಂದ ಮೂರು ವರ್ಷಗಳೇ ಕಳೆದಿತ್ತು. ಇದನ್ನು ಆಕ್ಷೇಪಿಸಿದ ಬಳಿಕ ಇವರಿಬ್ಬರೂ (Crime news) ನಾಪತ್ತೆಯಾಗಿದ್ದಾರೆ.
ಮನೆಯಲ್ಲಿ ಇವರಬ್ಬರ ಮದುವೆ ಸುದ್ದಿ ಹೇಳಿದ್ದೇ ತಡ ಹುಡುಗಿ ತಾಯಿಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರ ಯುವತಿ ಮನೆಯಿಂದ ತೆರಳಿದ್ದಾಳೆ. ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಾರೆ ಕೆಲಸ ಮಾಡ್ತಿದ್ದ ಸದ್ರುದಿನ್ ಬೇಪಾರಿ ಎಂಬಾತನ ವಿರುದ್ಧ ಯುವತಿ ಕುಟುಂಬದವರು ಅಪಹರಣದ ಆರೋಪ ಹೊರಿಸಿದ್ದಾರೆ. 17 ದಿನಗಳ ಹಿಂದೆ ಹಿಂದೂ ಹುಡುಗಿಯನ್ನು ಸದ್ರುದ್ದೀನ್ ಎಂಬಾತ ಅಪಹರಿಸಿ ಕರೆದೊಯ್ದಿದ್ದಾನೆ ಎಂದು ದೂರಲಾಗಿದೆ. ಈ ಹಿನ್ನೆಲೆ ಆಕ್ರೋಶಗೊಂಡ ಯುವತಿ ಕುಟುಂಬಸ್ಥರು ಯುವಕನ ಮನೆ ವಿರುದ್ಧ ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.
ಕೃಷಿ ಹೊಂಡದಲ್ಲಿ ಕರೆಂಟ್ ಶಾಕ್ ಹೊಡೆದು ಮೂವರು ಸಾವು
ಚಿಕ್ಕಬಳ್ಳಾಪುರ: ಕೃಷಿ ಹೊಂಡದಲ್ಲಿ ಪ್ರವಹಿಸಿದ ವಿದ್ಯುತ್ ಸ್ಪರ್ಶಿಸಿ (Electric shock) ಮೂವರು ಯುವಕರು ದುರ್ಮರಣ (death) ಹೊಂದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುಂತಕೆದಿರೇನಹಳ್ಳಿಯಲ್ಲಿ ನಡೆದಿದೆ. ಶ್ರೀಕಾಂತ್(25), ಲೋಕೇಶ್(28), ರಮೇಶ್(24) ಮೃತಪಟ್ಟವರು. ಮೃತರೆಲ್ಲರೂ ಮುಂತಕೆದಿರೇನಹಳ್ಳಿ ನಿವಾಸಿಗಳು ಹಾಗೂ ಸಂಬಂಧಿಕರು ಎಂದು ತಿಳಿದುಬಂದಿದೆ.
ಈ ಮೂವರೂ ಕೃಷಿ ಹೊಂಡದ ಪಂಪ್ಸೆಟ್ ರಿಪೇರಿಗೆ ಹೋದಾಗ ದುರ್ಘಟನೆ ಸಂಭವಿಸಿದೆ. ಹೊಂಡದಲ್ಲಿ ವಿದ್ಯುತ್ ಪ್ರವಹಿಸಿರುವುದು ತಿಳಿಯದೆ ಮೂವರೂ ಇಳಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಡ್ಯೂಟಿ ಬದಲಿಸಿದ್ದಕ್ಕೆ ಕೆಎಸ್‌ಆರ್‌ಟಿಸಿ ನೌಕರ ಆತ್ಮಹತ್ಯೆ
ಬೆಳಗಾವಿ: ಬೆಳಗಾವಿಯಲ್ಲಿ ಡ್ಯೂಟಿ ಬದಲಿಸಿದ್ದಕ್ಕೆ ಬಸ್‌ನಲ್ಲಿಯೇ ಕೆಎಸ್ ಆರ್ ಟಿಸಿ ನೌಕರರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಳಗಾವಿ ಡಿಪೋ 1ರ ಅಳ್ನಾವರ ಬಸ್ ನಲ್ಲಿ ಡ್ಯೂಟಿ ಬದಲಿಸಿದ್ದಕ್ಕೆ ಬಸ್ ಒಳಗೆ ನೇಣು ಬಿಗಿದುಕೊಂಡು ನೌಕರ ಕೇಶವ ಕಮಡೋಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಶವ ಅವರು ಬೆಳಗಾವಿಯ ಹಳೆ ಗಾಂಧಿನಗರ ನಿವಾಸಿಯಾಗಿದ್ದು, ಬಸ್ ವಾಷಿಂಗ್ ಬದಲು ಪಂಕ್ಚರ್ ಕೆಲಸಕ್ಕೆ ಡ್ಯೂಟಿ ಬದಲಿಸಿದ್ದರು ಎಂದು ಅಧಿಕಾರಿಗಳ ವಿರುದ್ಧ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದು ಶವ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಕೃಷಿ ಹೊಂಡಕ್ಕೆ ಬಿದ್ದು ವೈದ್ಯ ಸಾವು
ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲೂಕಿನ ಕುರುಬರಹಳ್ಳಿ ಬಳಿ ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ವೈದ್ಯರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಡಾ.ಜಯರಾಂ ನಾಯ್ಕ್(53) ಮೃತ ವೈದ್ಯ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Leopard dies: ಬೋನಿಗೆ ಬಿದ್ದ ಚಿರತೆ ಸಾವು ಪ್ರಕರಣದ ಬಗ್ಗೆ ತನಿಖೆಗೆ ಆದೇಶ