Viral News: ಪ್ರಾಂಕ್ ಮಾಡಲು ಹೋಗಿ ಶವವಾಗಿ ಮಲಗಿದ ವಿದ್ಯಾರ್ಥಿ; ಏನಿದು ಡಿಂಗ್ ಡಾಂಗ್ ಡಿಚ್ ಗೇಮ್?
18 ವರ್ಷದ ವಿದ್ಯಾರ್ಥಿ ಮೈಕೆಲ್ ಬೋಸ್ವರ್ತ್ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಡಿಂಗ್ ಡಾಂಗ್ ಡಿಚ್ ಗೇಮ್ ಆಡುವ ವೇಳೆ ಮನೆ ಮಾಲೀಕನ ಬಾಗಿಲು ತಟ್ಟಿದ್ದಾನೆ. ಮಾಲೀಕ ಕಳ್ಳ ಎಂದುಕೊಂಡು ಮೈಕೆಲ್ ಬೋಸ್ವರ್ತ್ ಮೇಲೆ ಗುಂಡು ಹಾರಿಸಿದ್ದಾನೆ. ಈ ಘಟನೆಯಲ್ಲಿ ಆತ ದಾರುಣವಾಗಿ ಸಾವನಪ್ಪಿದ್ದಾನೆ. ಈ ಸುದ್ದಿ ಈಗ ವೈರಲ್(Viral News) ಆಗಿದೆ.


ರಿಚ್ಮಂಡ್: ವರ್ಜೀನಿಯಾದ ಫ್ರೆಡೆರಿಕ್ಸ್‌ಬರ್ಗ್ ಮೂಲದ 18 ವರ್ಷದ ವಿದ್ಯಾರ್ಥಿ ಮೈಕೆಲ್ ಬೋಸ್ವರ್ತ್ ಮೇಲೆ ಮನೆಯ ಮಾಲೀಕ ಗುಂಡು ಹಾರಿಸಿದ ಕಾರಣ ಆತ ದಾರುಣವಾಗಿ ಸಾವನ್ನಪ್ಪಿದ್ದಾನೆ. ಮಾಹಿತಿ ಪ್ರಕಾರ, 27 ವರ್ಷದ ಟೈಲರ್ ಚೇಸ್ ಬಟ್ಲರ್ ಗುಂಡು ಹಾರಿಸಿದ ಮನೆ ಮಾಲೀಕನಂತೆ. ಹೈಸ್ಕೂಲ್ ವಿದ್ಯಾರ್ಥಿಯಾದ ಬೋಸ್ವರ್ತ್ ಮತ್ತು ಅವನ ಇಬ್ಬರು ಸ್ನೇಹಿತರು ತಮಾಷೆ ಮಾಡುವ ಸಲುವಾಗಿ ನೆರೆಮನೆಯಲ್ಲಿದ್ದ ಬಟ್ಲರ್ ಮನೆಯ ಬಾಗಿಲನ್ನು ತಟ್ಟಿದ್ದಾರೆ. ಕಳ್ಳನೆಂದುಕೊಂಡು ಬಟ್ಲರ್, ಬೋಸ್ವರ್ತ್ ಅನ್ನು ಗುಂಡಿಕ್ಕಿ ಕೊಂದಿದ್ದಾನೆ. ಈ ಸಂದರ್ಭದಲ್ಲಿ ಮೈಕೆಲ್ ಬೋಸ್ವರ್ತ್ ಸ್ನೇಹಿತನೊಬ್ಬ ಕೂಡ ಗಾಯಗೊಂಡಿದ್ದಾನಂತೆ.ಈ ಸುದ್ದಿ ಈಗ ವೈರಲ್(Viral News) ಆಗಿದೆ.
ಮೂವರು ವಿದ್ಯಾರ್ಥಿಗಳು ತನ್ನ ಮನೆಗೆ ನುಗ್ಗಲು ಪ್ರಯತ್ನಿಸುತ್ತಿದ್ದಾರೆ ಎಂದು ಅನುಮಾನಗೊಂಡು ತಾನು ಶೂಟ್ ಮಾಡಿರುವುದಾಗಿ ಬಟ್ಲರ್ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗೆ ತಿಳಿಸಿದ್ದಾನೆ. ಆದರೆ ಬದುಕುಳಿದ ಅವನ ಸ್ನೇಹಿತರು ಬೇರೆಯೇ ಕಥೆ ಹೇಳಿದ್ದಾರೆ. ಗುಂಡಿನ ದಾಳಿಯಿಂದ ಗಾಯಗೊಂಡ ಇನ್ನೊಬ್ಬ ವಿದ್ಯಾರ್ಥಿ ಹೇಳಿದ ಪ್ರಕಾರ, ಅವರು ತಮ್ಮ ಟಿಕ್‍ಟಾಕ್ ರೀಲ್ಸ್‌ಗಾಗಿ ತಮಾಷೆಯಿಂದ ವಿಡಿಯೊ ಶೂಟ್ ಮಾಡುತ್ತಿದ್ದರಂತೆ. ಆಗ ಬಟ್ಲರ್ ಅವರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಹೇಳಿದ್ದಾರೆ.
ಇನ್ನೊಬ್ಬ ವಿದ್ಯಾರ್ಥಿ ಪ್ರಕರಣದ ಕುರಿತು ಮಾಹಿತಿ ನೀಡುತ್ತಾ, ತಾವು ಡಿಂಗ್ ಡಾಂಗ್ ಡಿಚ್ ಗೇಮ್ ಆಡುತ್ತಿದ್ದೇವು, ಈ ಗೇಮ್‌ನಲ್ಲಿ ಬೇರೆಯವರ ಮನೆಯ ಡೋರ್ ಬೆಲ್ ಅನ್ನು ತಟ್ಟಿ ಓಡಿಹೋಗಬೇಕು. ಬಟ್ಲರ್ ಮನೆಯ ಬಾಗಿಲು ಹೋಗಿ ತಟ್ಟಿದಾಗ ಆತ ನಮ್ಮನ್ನು ಕಳ್ಳರು ಎಂದುಕೊಂಡು ಗುಂಡು ಹಾರಿಸಿದ್ದಾನೆ. ಇದರಿಂದ ಬೋಸ್ವರ್ತ್ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾನೆ.
ಈ ಸುದ್ದಿಯನ್ನೂ ಓದಿ:Viral Video: 'ಡಿಂಗ್ ಡಾಂಗ್ ಡಿಂಗ್' ಸಾಂಗ್‌ಗೆ ಸಖತ್ ಆಗಿ ಹೆಜ್ಜೆ ಹಾಕಿದ ಗರ್ಭಿಣಿ; ನೆಟ್ಟಿಗರು ಫುಲ್ ಶಾಕ್
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಟ್ಲರ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಬೋಸ್ವರ್ತ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದನಂತೆ. ಅದು ಅಲ್ಲದೇ ಆತ ಉತ್ತಮ ಫುಟ್ಬಾಲ್ ಆಟಗಾರನಾಗಿದ್ದ ಮತ್ತು ಶಾಲೆಯ ಕುಸ್ತಿ ತಂಡದಲ್ಲಿ ಸೇರಿಕೊಂಡಿದ್ದ. ಆದರೆ ಇಂತಹ ಪ್ರತಿಭಾವಂತ ವಿದ್ಯಾರ್ಥಿ ಪ್ರಾಂಕ್ ಮಾಡಲು ಹೋಗಿ ಶವವಾಗಿ ಮಲಗಿದ್ದಾನಂತೆ.