Physical assault Case: 6 ತಿಂಗಳು ಕೂಡಿ ಹಾಕಿ ನಿತ್ಯ ಚಿತ್ರಹಿಂಸೆ, ಅಶ್ಲೀಲ ವಿಡಿಯೊ ಶೂಟ್‌ಗೆ ಒತ್ತಾಯ; ಈಕೆ ಬದುಕುಳಿದಿದ್ದೇ ಒಂದು ಪವಾಡ!
ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯನ್ನು ಪುಸಲಾಯಿಸಿ ಮನೆಗೆ ಕರೆಸಿಕೊಂಡು ಆರು ತಿಂಗಳ ಕಾಲ ಗೃಹಬಂಧನದಲ್ಲಿಟ್ಟು ಕಿಡಿಗೇಡಿಯೊಬ್ಬ ನಿರಂತರ ಚಿತ್ರಹಿಂಸೆ ಕೊಟ್ಟಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ. ಆಕೆಗೆ ಕಬ್ಬಿಣದ ರಾಡ್‌ನಲ್ಲಿ ಹೊಡೆದು ಚಿತ್ರಹಿಂಸೆ ನೀಡಿದ್ದಾರೆ. ಉದ್ಯೋಗದ ಹೆಸರಿನಲ್ಲಿ ವಂಚಿಸಿ ಅಶ್ಲೀಲ ವೀಡಿಯೋ ಶೂಟ್ ಹಾಗೂ ಬಾರ್ ನೃತ್ಯ ಮಾಡಲು ಒತ್ತಡ ಹೇರಿದ್ದಾನೆ. ಇನ್ನೂ ಈ ಕೃತ್ಯದಲ್ಲಿ ಆರೋಪಿಗೆ ತಾಯಿ ಸಾಥ್‌ನೀಡಿರುವ ಘಟನೆ ನಡೆದಿದೆ.


ಕೊಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣಾ ಜಿಲ್ಲೆಯಲ್ಲಿ ಉದ್ಯೋಗ ಕೊಡುವ ನೆಪದಲ್ಲಿ ಕರೆಸಿಕೊಂಡ ಮಹಿಳೆಯನ್ನು ಆರು ತಿಂಗಳ ಕಾಲ ಗೃಹಬಂಧನದಲ್ಲಿಟ್ಟು, ಅಶ್ಲೀಲ ವಿಡಿಯೊ(Physical assault Case) ಶೂಟ್ ಹಾಗೂ ಬಾರ್ ನೃತ್ಯ ಮಾಡಲು ಒತ್ತಾಯಿಸಲಾಗಿದೆ. ಆದರೆ ಇದನ್ನು ನಿರಾಕರಿಸಿದ ಮಹಿಳೆಗೆ ಚಿತ್ರ ಹಿಂಸೆ ನೀಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಇನ್ನು ಸಂತ್ರಸ್ತ ಮಹಿಳೆಯನ್ನು ಪಾನಿಹಾಟಿಯ ನಿವಾಸಿ ಎಂದು ಗುರುತಿಸಲಾಗಿದ್ದು, ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.
ಹೌರಾದ ಅರಿಯನ್ ಖಾನ್ ಎನ್ನುವ ವ್ಯಕ್ತಿಯೊಬ್ಬ ಉತ್ತಮ ಸಂಬಳದ ಕೆಲಸ ಕೊಡಿಸುವುದಾಗಿ ನಂಬಿಸಿ ಈಕೆಯನ್ನು ತನ್ನ ಮನೆಯಲ್ಲಿಯೇ ಇರಿಸಿಕೊಂಡಿದ್ದಾನೆ. ಬಳಿಕ ಅಶ್ಲೀಲ ವಿಡಿಯೊ ಶೂಟ್ ಹಾಗೂ ಬಾರ್‌ನಲ್ಲಿ ಡಾನ್ಸ್ ಮಾಡುವಂತೆ ಮಹಿಳೆ ಮೇಲೆ ಒತ್ತಡ ಹೇರಲಾಗಿದೆ. ಮಹಿಳೆ ಇದನ್ನು ನಿರಾಕರಿಸಿದ ನಂತರ ತಾಯಿ ಶ್ವೇತಾ ಖಾನ್ ಸಹಾಯದಿಂದ ಈಕೆಯ ಮೇಲೆ ಕಬ್ಬಿಣದ ರಾಡ್‌ನಿಂದ ಯಾರೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಅನ್ನ-ನೀರು ಕೊಡದೇ ಚಿತ್ರಹಿಂಸೆ ಕೊಟ್ಟಿದ್ದಾನೆ. ಇನ್ನು ಮಹಿಳೆಯ ಹಲ್ಲುಗಳು, ಕೈ-ಕಾಲು ಮುರಿದಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ.
ಘಟನೆ ಬೆಳಕಿಗೆ ಬಂದ ಬಗೆ
ಸಂತ್ರಸ್ತ ಮಹಿಳೆ ಜೂನ್ 7 ರಂದು ಆರೋಪಿ ಮನೆಯಿಂದ ತಪ್ಪಿಸಿಕೊಂಡು ಹೊರಬಂದಿದ್ದು, ಕುಟುಂಬಸ್ಥರ ನೆರವಿನಿಂದ ಖಾರ್ದಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕುಟುಂಬಸ್ಥರ ದೂರನ್ನಾಧರಿಸಿ ಖಾಕಿ ಪಡೆ ಆರೋಪಿಗಳಿಗೆ ಬಲೆ ಬೀಸಿದೆ. ಆದರೆ ಪರಾರಿಯಾಗಿರುವ ಆರೋಪಿ ಅರಿಯನ್ ಖಾನ್ ಹಾಗೂ ತಾಯಿ ಶ್ವೇತಾ ಖಾನ್ ಇನ್ನು ಸಿಕ್ಕಿಲ್ಲ ಎನ್ನಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: ಪತ್ನಿಯನ್ನು ಕೊಂದು ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿಟ್ಟ ಪತಿ; ಬೆಂಗಳೂರಿನಲ್ಲೊಂದು ಶ್ರದ್ಧಾ ವಾಕರ್ ಪ್ರಕರಣ ಮಾದರಿಯ ಕ್ರೈಂ
ಸ್ಥಳೀಯರಿಂದ ಅಶ್ಲೀಲ ಯ್ಯೂಟೂಬ್ ಚಾನೆಲ್ ನಡೆಸುತ್ತಿದ್ದ ಶಂಕೆ
ಆರೋಪಿ ಅರಿಯನ್ ಮತ್ತು ಶ್ವೇತಾ ಖಾನ್ "ಇಸಾರಾ ಎಂಟರ್‌ಟೈನ್ಮೆಂಟ್" ಎಂಬ ಸಂಸ್ಥೆ ನಡೆಸುತ್ತಿದ್ದು, 2021ರಲ್ಲಿ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದರು. ಆದರೆ ನಾಲ್ಕು ವರ್ಷಗಳಲ್ಲಿ ಕೇವಲ 11 ಸಂಗೀತ ವಿಡಿಯೋಗಳನ್ನು ಮಾತ್ರ ಆ ಯ್ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇದು ಅಶ್ಲೀಲ ಯ್ಯೂಟೂಬ್ ಚಾನೆಲ್ ಎಂದು ಸ್ಥಳೀಯರಿಂದ ಶಂಕೆ ವ್ಯಕ್ತವಾಗುತ್ತಿದೆ. ಸ್ಥಳೀಯವಾಗಿ ಫುಲ್ತುಶಿ ಬೇಗಮ್ ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ಶ್ವೇತಾ ಖಾನ್, ಈ ಹಿಂದೆ ಬಾರ್ ಡಾನ್ಸರ್ ಆಗಿದ್ದಳು. ಸ್ಥಳೀಯರ ಹಾಗೂ ಮಹಿಳೆಯ ಕುಟುಂಬಸ್ಥರ ಆರೋಪದ ಪ್ರಕಾರ, ಶ್ವೇತಾ ತನ್ನ ಪ್ರಭಾವ ಬಳಸಿಕೊಂಡು ಸ್ಥಳೀಯರನ್ನು ಬೆದರಿಸುತ್ತಿದ್ದಳು ಎನ್ನಲಾಗಿದೆ.