Corset Saree Fashion: ರಾಧಿಕಾ ಮರ್ಚೆಂಟ್ ಕಾರ್ಸೆಟ್ ಸೀರೆಗೆ ಅಲ್ಟ್ರಾ ಮಾಡರ್ನ್ ಯುವತಿಯರು ಫಿದಾ!
Corset Saree Fashion: ಅಪರೂಪದ ಪೇಟಿಂಗ್ ಹೊಂದಿರುವ ವಿಂಟೇಜ್ ಕಾರ್ಸೆಟ್‌ನೊಂದಿಗೆ ಪಾಸ್ಟೆಲ್ ಶೇಡ್ ಸೀರೆ ಮ್ಯಾಚ್ ಮಾಡಿ ಧರಿಸಿರುವ ಅಂಬಾನಿ ಫ್ಯಾಮಿಲಿಯ ಸೊಸೆ ರಾಧಿಕಾ ಮರ್ಚೆಂಟ್ ಲುಕ್‌ಗೆ ಅಲ್ಟ್ರಾ ಮಾಡರ್ನ್ ಯುವತಿಯರು ಫಿದಾ ಆಗಿದ್ದಾರೆ, ಮುಂದೊಮ್ಮೆ ಟ್ರೆಂಡಿಯಾಗಲಿರುವ ಈ ವಿಂಟೇಜ್ ಸೀರೆ ಫ್ಯಾಷನ್ ಬಗ್ಗೆ ಫ್ಯಾಷನ್ ವಿಮರ್ಶಕರು ಏನು ಹೇಳುತ್ತಾರೆ. ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ರಾಧಿಕಾ ಮರ್ಚೆಂಟ್, ಅಂಬಾನಿ ಫ್ಯಾಮಿಲಿ ಸೊಸೆ

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಂಬಾನಿ ಫ್ಯಾಮಿಲಿಯ ಸೊಸೆ ರಾಧಿಕಾ ಮರ್ಚೆಂಟ್‌ರ ಕಾರ್ಸೆಟ್ ವಿಂಟೇಜ್ ಸೀರೆ (Corset Saree Fashion) ಲುಕ್‌ಗೆ ಈ ಜನರೇಷನ್‌ನ ಅಲ್ಟ್ರಾ ಮಾಡರ್ನ್ ಯುವತಿಯರು ಫಿದಾ ಆಗಿದ್ದಾರೆ. ಹೌದು, ಸುಮಾರು 35 ವರ್ಷಗಳಷ್ಟು ಹಳೆಯದಾದ ಅಪರೂಪದ ಪೇಟಿಂಗ್ ಹೊಂದಿರುವ ಕಾರ್ಸೆಟ್‌ನೊಂದಿಗೆ ಪಾಸ್ಟೆಲ್ ಶೇಡ್ ಸೀರೆ ಮ್ಯಾಚ್ ಮಾಡಿ ಧರಿಸಿರುವ ಅಂಬಾನಿ ಫ್ಯಾಮಿಲಿಯ ಸೊಸೆ ರಾಧಿಕಾ ಮರ್ಚೆಂಟ್‌ರ ಈ ವಿಂಟೇಜ್ ಸೀರೆ ಲುಕ್, ಸದ್ಯ ಹೈ ಸೊಸೈಟಿಯ ಫ್ಯಾಷನ್ ಲೋಕದಲ್ಲಿ ಹಂಗಾಮ ಎಬ್ಬಿಸಿದೆ. ಬ್ಲೌಸ್ ಬದಲು ಆಕೆ ಧರಿಸಿರುವ ವೆಸ್ಟರ್ನ್ ಶೈಲಿಯ ಕಾರ್ಸೆಟ್ ಈ ಜನರೇಷನ್‌ನ ಹುಡುಗಿಯರನ್ನು ಸೆಳೆದಿದೆ.

ಸೀರೆ ಜತೆಗೆ ಕಾರ್ಸೆಟ್?
ಅಂದ ಹಾಗೆ, ಇದು ಬ್ಲೌಸ್ ಅಂತೂ ಅಲ್ಲವೇ ಅಲ್ಲ! ದೇಹದ ಮೇಲ್ಭಾಗದಲ್ಲಿ ತೀರಾ ಟೈಟಾಗಿ ಬಿಗಿದಂತೆ ಕಾಣಿಸುವ ಟಾಪ್‌ನಂತಹ ಮೇಲುಡುಗೆಯಿದು. ವೆಸ್ಟರ್ನ್ ಶೈಲಿಯ ಉಡುಗೆಯ ಕೆಟಗರಿಗೆ ಸೇರುತ್ತದೆ. ಕೆಲವೊಮ್ಮೆ ಕಾರ್ಸೆಟ್ ಸ್ಲಿವ್‌ಲೆಸ್ ಆಗಿರಬಹುದು ಅಥವಾ ಇತರೆ ಯಾವುದೇ ಡಿಸೈನ್‌ನದ್ದಾಗಿರಬಹುದು. ಆದರೆ, ಇಲ್ಲಿ ರಾಧಿಕಾ ಧರಿಸಿರುವ ಕಾರ್ಸೆಟ್‌ಗೆ ಸ್ಲಿವ್‌ಗಳಿಲ್ಲ, ಬದಲಿಗೆ ಬಾರ್ಡಟ್ ಶೈಲಿಯ ಹಾಫ್ ಬಾಡಿಕಾನ್ ಟಾಪ್‌ನಂತಿದೆ. ನಿಮಗೆ ಗೊತ್ತೇ! ಇದು ಪ್ರತಿಷ್ಠಿತ ಬ್ರಾಂಡ್ ವಿವೆನ್ ವೆಸ್ಟ್ವುಡ್‌ನ 90 ದಶಕದ ವಿಂಟೇಜ್ ಕಲೆಕ್ಷನ್‌ನಲ್ಲಿ ಸೇರಿದೆ. ಇದರ ಮೇಲೆ ಫ್ರೆಂಚ್ ಆರ್ಟಿಸ್ಟ್‌ನ ಅಪರೂಪದ ಪೇಟಿಂಗ್ ಇದೆ. ಇನ್ನು, ಇದಕ್ಕೆ ಹೊಂದುವಂತೆ ಪಾಸ್ಟೆಲ್ ಶೇಡ್ ಅದರಲ್ಲೂ ಇಂಗ್ಲೀಷ್ ಕಲರ್‌ನ ಸೀರೆಯನ್ನು ಮ್ಯಾಚ್ ಮಾಡಿ ಉಡಲಾಗಿದೆ. ವಿಭಿನ್ನವಾಗಿ ಸೀರೆ ಲುಕ್ ನೀಡಲಾಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಸ್ಟೈಲಿಶ್ ರಿಯಾ ಕಪೂರ್ ಸ್ಟೈಲಿಂಗ್
ಅಂದ ಹಾಗೆ, ಈ ರಾಧಿಕಾರ ಈ ಸೀರೆ ಸ್ಟೈಲಿಂಗ್ ಮಾಡಿರುವುದು ನಟಿ ಸೋನಂ ಕಪೂರ್ ಸಹೋದರಿ ರಿಯಾ ಕಪೂರ್. ಈ ಕಾರ್ಸೆಟ್‌ನ ನೆಕ್‌ಲೈನ್‌ಗೆ ಹೊಂದುವಂತೆ ಚೋಕರ್, ಸ್ಟಡ್ಸ್ ಮ್ಯಾಚ್ ಮಾಡಿದ್ದಾರೆ. ಇದರೊಂದಿಗೆ ರಾಧಿಕಾರ ಸಮ್ಮರ್ ಬನ್ ಹೇರ್‌ಸ್ಟೈಲ್ ಈ ಲುಕ್‌ಗೆ ಮತ್ತಷ್ಟು ಮೆರಗು ನೀಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಟ್ರೆಂಡಿಯಾಗಬಹುದು ಎಂದು ಭವಿಷ್ಯ ನುಡಿದ ಫ್ಯಾಷನ್ ವಿಮರ್ಶಕರು
ಇನ್ನು, ಸೆಲೆಬ್ರೆಟಿಗಳು ಡಿಫರೆಂಟ್ ಲುಕ್ ನೀಡುವ ಸೀರೆ ಉಟ್ಟಾಗ ಆ ಸೀರೆ ಇಲ್ಲವೇ ಬ್ಲೌಸ್ ಟ್ರೆಂಡಿಯಾಗುತ್ತದೆ ಎನ್ನುವ ಫ್ಯಾಷನ್ ವಿಮರ್ಶಕಿ ವಿದ್ಯಾ ವಿವೇಕ್. ಅವರ ಪ್ರಕಾರ, ಮುಂಬರುವ ದಿನಗಳಲ್ಲಿ ಸಾಮಾನ್ಯರು ಧರಿಸುವಂತೆ ಕೈಗೆಟಕುವ ಬೆಲೆಯಲ್ಲಿ ಲೋಕಲ್ ಬ್ರಾಂಡ್‌ಗಳು ಕಾರ್ಸೆಟ್ ಶೈಲಿಯ ಬ್ಲೌಸ್‌ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದು ಗ್ಯಾರಂಟಿ. ಆಗ ಈ ಲುಕ್ ಟ್ರೆಂಡಿಯಾಗುವುದು ಗ್ಯಾರಂಟಿ ಎನ್ನುತ್ತಾರೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Summer Fashion: ಸಮ್ಮರ್ ಬನ್ ಹೇರ್‌ಸ್ಟೈಲ್ ಸಿಂಗಾರಕ್ಕೆ ಜತೆಯಾದ ಜ್ಯುವೆಲರಿಗಳಿವು