Fashion Tips: ಸಿಂಪಲ್ ಉಡುಗೆಯಲ್ಲೂ ಗ್ಲ್ಯಾಮರಸ್ ಆಗಿ ಕಾಣಬೇಕೆ? ತಮನ್ನಾ ಭಾಟಿಯಾ ಫ್ಯಾಷನ್ ಒಮ್ಮೆ ಟ್ರೈ ಮಾಡಿ
ಫ್ಯಾಷನ್ನಲ್ಲಿ ಹೊಸದೇನಾದರೂ ಟ್ರೈ ಮಾಡಬೇಕು ಎಂದು ಯೋಚಿಸುತ್ತಿದ್ದರೆ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಫಾಲೋ ಮಾಡಬಹುದು. ಇವರ ಈ ಧಿರಿಸುಗಳನ್ನು ಧರಿಸಿ ನಮ್ಮ ಆತ್ಮವಿಶ್ವಾಸವನ್ನು ತೋರ್ಪಡಿಸಿಕೊಳ್ಳಬಹುದು. ಪರಿಪೂರ್ಣವಾದ ಸ್ಟೈಲ್ ಐಕಾನ್ ಎಂದೇ ಗುರುತಿಸಲ್ಪಡುತ್ತಿರುವ ತಮನ್ನಾ ಈಗ ಫ್ಯಾಷನ್ ಪ್ರಿಯರ ಗಮನವನ್ನು ತಮ್ಮ ಉಡುಗೆ-ತೊಡುಗೆಯ ಮೂಲಕ ಸೆಳೆಯುತ್ತಿದ್ದಾರೆ.



ಫ್ಯಾಷನ್ ಪ್ರಿಯರ ಗಮನ ಸೆಳೆಯುವ ತಮನ್ನಾ ಭಾಟಿಯಾ ಈಗ ಪರಿಪೂರ್ಣ ಸ್ಟೈಲ್ ಐಕಾನ್ ಆಗಿ ಗುರುತಿಸಿಕೊಂಡಿದ್ದಾರೆ. ಸೀರೆ, ಗೌನ್, ಸಾಮಾನ್ಯ ಉಡುಗೆ ತೊಡುಗೆಯಲ್ಲಿ ಅವರು ತಮ್ಮ ಎದೆಯ ಸೀಳನ್ನು ಪ್ರದರ್ಶಿಸಿ ಬೋಲ್ಡಾಗಿ ಪೋಸ್ ನೀಡಿದ್ದಾರೆ. ಈ ಸ್ಟೈಲಿಶ್ ಉಡುಗೆಗಳು ಅವರ ಆತ್ಮವಿಶ್ವಾಸದ ಸಂಕೇತವಾಗಿ ಕಂಡಿದೆ.

ತಮನ್ನಾ ಅವರಂತೆ ಕಾಣಬೇಕಾದರೆ ಅವರಿಂದ ಸ್ಫೂರ್ತಿ ಪಡೆದ ವಿವಿಧ ಲುಕ್ಗಳು ಇಲ್ಲಿದೆ. ಇದು ನಿಮ್ಮನ್ನು ಇನ್ನಷ್ಟು ಸ್ಟೈಲಿಷ್ ಆಗಿಸಲಿದೆ. ಸಿಂಪಲ್ ಉಡುಗೆಯ ಮೂಲಕ ಮಿಂಚಬೇಕಾದರೆ ತಮನ್ನಾ ಅವರಂತ ಕಪ್ಪು ಉಡುಗೆಯನ್ನೊಮ್ಮೆ ಟ್ರೈ ಮಾಡಬಹುದು. ದೇಹಕ್ಕೆ ಮರಳು ಗಡಿಯಾರದ ಆಕೃತಿಯನ್ನು ನೀಡುವ ಈ ಕಪ್ಪು ಉಡುಗೆಯಲ್ಲಿ ಎಲ್ಲರ ನಡುವೆಯೂ ಹೈಲೈಟ್ ಆಗಬಹುದು.

ಎದೆಯ ರೇಖೆಯನ್ನು ದೇಹದ ಅತ್ಯುತ್ತಮ ವೈಶಿಷ್ಟ್ಯಗಳಲ್ಲಿ ಒಂದು ಎಂದು ಪರಿಗಣಿಸಿ ಅದನ್ನು ಹೈಲೈಟ್ ಮಾಡಬೇಕಾದರೆ ತಮನ್ನಾ ಅವರ ಫ್ಯಾಶನ್ ಟಿಪ್ಸ್ ಫಾಲೋ ಮಾಡಬಹುದು. ಇದಕ್ಕಾಗಿ ಬ್ರಾಲೆಟ್ ಮತ್ತು ಸ್ಕರ್ಟ್ ಕಾಂಬೊ ಟ್ರೈ ಮಾಡಿ. ಇದು ತಮನ್ನಾ ಅವರಂತೆ ಅಗಲವಾದ ಸೊಂಟ ಮತ್ತು ಎದೆಯನ್ನು ಹೊಂದಿರುವವರಿಗೆ ಅತ್ಯಂತ ಸೂಕ್ತ ಉಡುಗೆ ಎಂದೆನಿಸಿಕೊಂಡಿದೆ.

ಇನ್ನು ಸೀರೆಯಲ್ಲೂ ದೇಹದ ವಕ್ರರೇಖೆಯನ್ನು ಅತ್ಯಂತ ಆಕರ್ಷಕವಾಗಿ ತೋರಿಸಬಹುದು. ಇದಕ್ಕಾಗಿ ತಮನ್ನಾ ಅವರಂತ ಸ್ಟೇಟ್ಮೆಂಟ್ ಸ್ಲೀವ್ಲೆಸ್ ಬ್ಲೌಸ್ನೊಂದಿಗೆ ಶಿಫಾನ್ ಸೀರೆಯು ಸೂಕ್ತ ಆಯ್ಕೆ. ಅಲ್ಲದೇ ಸಿಂಪಲ್ ಬೇಕೆನಿಸಿದರೆ ತಮನ್ನಾ ಅವರಂತೆಯೇ ಬಿಸಿನೆಸ್ ಚಿಕ್ ಅನ್ನು ತೊಡಬಹುದು.

ಕರ್ವಿ ಹುಡುಗಿಯರಿಗಾಗಿ ಬಾಲ್ರೂಮ್ ಶೈಲಿಯ ಗೌನ್ ತಯಾರಿಸಲಾಗಿದೆ. ತಮನ್ನಾ ಭಾಟಿಯಾ ಅದನ್ನು ಹೇಗೆ ಧರಿಸಬೇಕೆಂದು ತೋರಿಸಿದ್ದಾರೆ. ಅಲ್ಲದೇ ಒಂದೇ ಬಣ್ಣದ ಉಡುಪಿನಲ್ಲಿ ಕೂಡ ಸರಳವಾಗಿ ಹೆಚ್ಚು ಅಂದವಾಗಿ ಕಾಣುವುದು ಹೇಗೆ ಎನ್ನುವುದನ್ನು ಕೂಡ ತಮನ್ನಾ ಅವರಿಂದ ಕಲಿಯಬಹುದು ಎನ್ನುತ್ತಾರೆ ತಜ್ಞರು.

ಸೀರೆಯೊಂದಿಗೆ ಡೀಪ್ ನೆಕ್ ಬ್ಲೌಸ್ ಧರಿಸಿದರೆ ಆಕರ್ಷಕವಾಗಿ ಕಾಣಬಹುದು. ಇದನ್ನು ತಮನ್ನಾ ಅವರಂತೆ ರೇಷ್ಮೆ ಸೀರೆಯೊಂದಿಗೆ ಪಫ್ಡ್ ತೋಳುಗಳನ್ನು ಹೊಂದಿರುವ ಈ ಕ್ಲೀವೇಜ್- ಬೇರಿಂಗ್ ಬ್ಲೌಸ್ ಅನ್ನು ಮ್ಯಾಚಿಂಗ್ ಮಾಡಬಹುದು.

ಗ್ಲ್ಯಾಮರಸ್ ಆಗಿ ಕಾಣಲು ತಮನ್ನಾ ಧರಿಸಿರುವ ಈ ಕೆಂಪು ಮತ್ತು ಕಪ್ಪು ಉಡುಗೆಯನ್ನು ಹೊಂದಿಸಿ ಧರಿಸಬಹುದು. ಇದು ಯಾವುದೇ ಸಂದರ್ಭವಾದರೂ ಸೈ ನಿಮ್ಮನ್ನು ಫ್ಯಾಷನೇಬಲ್ ಮತ್ತು ಟ್ರೆಂಡಿಯಾಗಿ ತೋರುವಂತೆ ಮಾಡುತ್ತದೆ.